Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿದ್ಯಾಮಾತಾ ಅಕಾಡೆಮಿ ಜೆಸಿಐ ಪುತ್ತೂರು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಜಂಟಿ ಸಹಯೋಗದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ- ಕಹಳೆ ನ್ಯೂಸ್

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿ, ಜೆ ಸಿ ಐ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇವರ ಜಂಟಿ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮವನ್ನು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಸಲಾಯಿತು. ವಂದೇ ಮಾತರಂ ಮತ್ತು ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ ಒಂದು ನಿಮಿಷದ ಗೌರವ ನಮನ ಮೌನ ಪ್ರಾರ್ಥನೆಯನ್ನು ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರಕಾ ಕನ್ಸ್ಟ್ರಕ್ಷನ್ ನ ಆಡಳಿತ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಯನ್ ಕಾವು ಹೇಮನಾಥ ಶೆಟ್ಟಿ, ಜೆಸಿಐನ ಪೂರ್ವ ಅಧ್ಯಕ್ಷರಾದ ವಿಶ್ವ ಪ್ರಸಾದ್ ಸೇಡಿಯಾಪು, ಜೆಸಿಐ ಪುತ್ತೂರಿನ ಅಧ್ಯಕ್ಷರಾದ ಮೋಹನ್ ಕೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೇದಾವತಿ ರಾಜೇಶ್ ರವರು ನಿವೃತ್ತ ಯೋಧರಾದ ಡಾ. ಗೋಪಾಲಕೃಷ್ಣ ಕಾಂಚೋಡು, ವೆಟರ್ನ್ ಸತ್ಯನಾರಾಯಣ ಭಟ್, ತಂಗಚ್ಚನ್ ಧರ್ಮಸ್ಥಳ, ಹೆರಾಲ್ಡ್ ಸಿಕ್ವೆರಾ ಮತ್ತು ವಾಲ್ಟರ್ ಸೀಕ್ವೆರಾ ಅವರನ್ನು ಸನ್ಮಾನಿಸಿದರು. ಹೆರಾಲ್ಡ್ ಸೀಕ್ವೆರಾ ಮತ್ತು ವಾಲ್ಟರ್ ಸಿಕ್ವೆರಾ, ಅಣ್ಣ-ತಮ್ಮಂದಿರಾಗಿದ್ದು ಇವರಿಬ್ಬರು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿರುವುದು ವಿಶೇಷವಾಗಿದ್ದು ಇವರ ಜೊತೆಗೆ ಇವರ ತಾಯಿಯನ್ನು ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಶ್ರೀಕಾಂತ್ ಬಿರಾವು, ಸಶಸ್ತ್ರ ಪಡೆಗಳ ಮೈದಾನ ತರಬೇತಿಯ ತರಬೇತುದಾರರಾದ ವಿಜೇಶ್, ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಎಸ್.ಎಸ್. ಸಿ ಜಿ.ಡಿ ಹುದ್ದೆಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಲಹರಿ, ಲಯನ್ಸ್ ಕ್ಲಬ್ ನ ಲಿಯೋ ಮಸ್ಕರೇನಸ್, ಲಯನ್ಸ್ ಕ್ಲಬ್ ನ ಪೂರ್ವ ಅಧ್ಯಕ್ಷರಾದ ರವೀಂದ್ರ ಪೈ, ಲಯನ್ ವತ್ಸಲಾ ಪದ್ಮರಾಜ್ ಶೆಟ್ಟಿ, ಲಯನ್ಸ್ ಲಿಯೋ ಕ್ಲಬ್ ನ ಅಧ್ಯಕ್ಷರಾದ ಲಾನ್ಸನ್ ರವರನ್ನು ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಅವರು ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಜೆಸಿಐ ಪೂರ್ವ ಅಧ್ಯಕ್ಷರಾದ ಶಶಿರಾಜ್ ರೈ ಲಯನ್ಸ್ ಕ್ಲಬ್ ನ ರವಿಪ್ರಸಾದ್ ಶೆಟ್ಟಿ, ಕೇಶವ ಪೂಜಾರಿ ಬೆದ್ರಾಳ, ಭಾಸ್ಕರ ಸುವರ್ಣ, ಅಬೂಬಕರ್ ಮುಲ್ಲಾರ್, ಸುಮಿತ್ರ, ರಂಜಿನಿ ಶೆಟ್ಟಿ, ಮೊಹಮ್ಮದ್ ಹನೀಫ್ , ಜೆಸಿಐ ನ ಪ್ರಿಯಾಲತಾ ಡಿ ಸಿಲ್ವಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರಾದ ಚಂದ್ರಕಾಂತ್ ಮತ್ತು ಚೇತನಾ ಸತೀಶ್ ರವರು ನಿರೂಪಿಸಿದರು. ವಿದ್ಯಾಮಾತಾ ಅಕಾಡೆಮಿಯ ಸಶಸ್ತ್ರ ಪಡೆಗಳ ನೇಮಕಾತಿ ತರಬೇತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು