Recent Posts

Monday, January 20, 2025
ಸುದ್ದಿ

ಎಲ್ಲೆ ಗೌಜಿ ಗಮ್ಮತ್ತ್ ದ ಪುತ್ತೂರು ತಾಲೂಕು ತುಳು ಪರ್ಬ ; ಬಲೆ ತುಳುವೆರೆ ಪೊರ್ಲಗಂಟ್ ದ ಲೇಸ್ ಗ್ – ಕಹಳೆ ನ್ಯೂಸ್

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನ. 3 ರಂದು ಮಂಜಲ್ಪಡ್ಪು ಸುದಾನ ಶಾಲೆಯಲ್ಲಿ ನಡೆಯಲಿರುವ ಪುತ್ತೂರು ತಾಲೂಕು ಪ್ರಥಮ ತುಳು ಸಾಹಿತ್ಯ ಸಮ್ಮೇಳನದಲ್ಲಿ ತುಳು ಪರ್ಬದ ಅಟ್ಟಣೆ ನಡೆದಿದೆ. ಅತ್ಯಂತ ವ್ಯವಸ್ಥಿತವಾಗಿ ತುಳು ಪರ್ಬವನ್ನು ಸಂಘಟಿಸಲಾಗುತ್ತದೆ.

ಜಾನಪದ ಅಂಕಣ : ಸಮ್ಮೇಳನ ಸಭಾಂಗಣದ ಬಲಭಾಗದಲ್ಲಿ ತುಳು ನಾಡಿನ ಜಾನಪದ ಕ್ರೀಡೆ ಕಂಬಳ ಕೋಣಗಳ ಪ್ರದರ್ಶನ, ಕೋಳಿ ಅಂಕಗಳಲ್ಲಿ ಕಾದಾಡುವ ಹುಂಜ ಪ್ರದರ್ಶನ ಅಲ್ಲದೆ ಮಕ್ಕಳಿಗೆ ತುಳು ಜಾನಪದ ಆಟಗಳನ್ನು ಆಡಲು ವ್ಯವಸ್ಥೆಯನ್ನು ಮಾಡಲಾಗಿದೆ. ತುಳು ಪರಂಪರೆಯ ವಸ್ತುಗಳ ಪ್ರದರ್ಶನವನ್ನು ಕೂಡಾ ತುಳು ಪರ್ಬದಲ್ಲಿ ಏರ್ಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ವಿಶಾಲ ಸಭಾಂಗಣ : ತುಳು ಪರ್ಬದ ಕಾರ್ಯಕ್ರಮಗಳಿಗೆ ವಿಶಾಲ ಸಭಾಂಗಣವನ್ನು ಸಿದ್ಧ ಪಡಿಸಲಾಗುತ್ತಿದೆ. 42 ಅಡಿ ಉದ್ದ ಮತ್ತು 20ಅಡಿ ಅಗಲದ ವೇದಿಕೆ ಅಂತಿಮ ಸ್ವರೂಪ ಪಡೆಯುತ್ತಿದೆ. 3000 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣ ಇದಾಗಿದೆ. ಇದರ ಜೊತೆಗೆ ತುಳು ಚಲನಚಿತ್ರದ ಪ್ರದರ್ಶನಕ್ಕಾಗಿ ಸುದಾನ ವಸತಿಯುತ ಶಾಲೆಯ ಸಮ್ಮೇಳನ ಸಭಾಂಗಣವನ್ನು ಚಿತ್ರ ಮಂದಿರವನ್ನಾಗಿ ಬಳಸಿಕೊಳ್ಳಲಾಗುತ್ತದೆ. 60ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ, ತುಳು ತಿಂಡಿ ತಿನಿಸುಗಳ ಆಹಾರ ಮಳಿಗೆಗಳು ಕೂಡಾ ಇಲ್ಲಿ ತೆರೆಯಲ್ಪಡುತ್ತದೆ. ಬೆಳಗ್ಗೆ ಉಪಹಾರ, ಮದ್ಯಾಹ್ನ ಊಟ, ಸಂಜೆ ಲಘು ಉಪಹಾರ ಹಾಗೂ ರಾತ್ರಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ. ಶುದ್ಧ ಸಸ್ಯಹಾರವನ್ನು ಪೂರೈಕೆ ಮಾಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಿತಿಯಿಂದ ವೀಕ್ಷಣೆ : ತುಳು ಸಾಹಿತ್ಯ ಸಮ್ಮೇಳನದ ಸಿದ್ಧತೆಗಳನ್ನು ಗುರುವಾರ ಸಮ್ಮೇಳನ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಮಠಂತಬೆಟ್ಟು, ಉಪಾಧ್ಯಕ್ಷ ರೆ. ವಿಜಯ್ ಹಾರ್ವಿನ್ ಮತ್ತಿತರರು ವೀಕ್ಷಣೆ ನಡೆಸಿ ಅಂತಿಮ ರೂಪುರೇಷೆಗಳ ಕುರಿತು ಸೂಚನೆ ನೀಡಿದರು. ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ. ವಿಜಯ್ ಹಾರ್ವಿನ್ ಸ್ವತಃ ಮುತುವರ್ಜಿ ವಹಿಸಿ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ, ಇವರಿಗೆ ಸುದಾನ ಶಾಲೆಯ ಸಿಬ್ಬಂದಿ ಬಾಲಣ್ಣ ಸಾಥ್ ನೀಡಿದ್ದಾರೆ.

ಎನ್ನ ಫೋಟೋ ಯಾನೆ ದೆಪ್ಪುನ :


ಮೊಬೈಲ್‍ನಿಂದ ತಮ್ಮ ಫೋಟೋಗಳನ್ನು ತಾವೇ ತೆಗೆದುಕೊಳ್ಳುವ ಸೆಲ್ಫಿ ಫೋಟೋಗ್ರಾಫಿ ನಡೆಸುವ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ. ತುಳು ನಾಡಿನ ಪ್ರದಾನ ವಾಹನವಾಗಿದ್ದ ‘ಜೋಡು ಬೋರಿದ ಗಾಡಿ’ಯ ಮಾದರಿಯನ್ನು ಇಲ್ಲಿ ನವೆಂಬರ್ 3ರಂದು ನಿಲ್ಲಿಸಲಾಗುತ್ತದೆ, ಗಾಡಿಯ ಮುಂದೆ ನಿಂತು ಸೆಲ್ಫಿ ಫೋಟೋ ತೆಗೆಯುವ ಆಸಕ್ತರಿಗೆ ಅವಕಾಶ ಇದೆ. ಇಲ್ಲಿ ‘ಎನ್ನ ಫೋಟೋ ಯಾನೆ ದೆಪ್ಪುನ’ ಎಂಬ ಫಲಕವನ್ನು ಅಳವಡಿಸಲಾಗುತ್ತದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತರಾಮ ರೈ ಹೇಳಿದರು.