Sunday, January 19, 2025
ಮುಂಬೈಸಿನಿಮಾಸುದ್ದಿ

ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ; ಅರೆಬೆತ್ತಲೆ ಪ್ರತಿಭಟನೆ ಮೂಲಕ ಸದ್ದು ಮಾಡಿದ ನಟಿ ಶ್ರೀರೆಡ್ಡಿ ಪೋಸ್ಟ್‌ ವೈರಲ್‌! – ಕಹಳೆ ನ್ಯೂಸ್

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಟಾಲಿವುಡ್‌ನಲ್ಲಿ ʻಮಿಟೂʼ ಹಾಗೂ ಕ್ಯಾಸ್ಟಿಂಗ್ ಕೌಚ್ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ ನಟಿಯರಲ್ಲಿ ಶ್ರೀ ರೆಡ್ಡಿ (Sri Reddy) ಕೂಡ ಒಬ್ಬರು. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯ ಮುಂದೆ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು.

ತೆಲುಗು ಫಿಲಂ ಚೇಂಬರ್ ಮುಂದೆ ನಟಿ ಶ್ರೀರೆಡ್ಡಿ ಟಾಪ್ ಲೆಸ್ ಪ್ರತಿಭಟನೆ ನಡೆಸಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ನಟಿ ಶ್ರೀರೆಡ್ಡಿ ತೆಲುಗು ಸಿನಿರಂಗದ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅಲ್ಲದೆ, ಅವಕಾಶ ನೀಡುವುದಾಗಿ ಲೈಂಗಿಕವಾಗಿ ತಮ್ಮನ್ನು ಬಳಸಿಕೊಂಡಿದ್ದಾರೆ ಎಂದು ದೂರಿದ್ದರು. ಅಲ್ಲಿಂದ ನಟಿಯ ಹೆಸರು ಮುನ್ನಲೆಗೆ ಬಂದಿತ್ತು. ಇದೀಗ ನಟಿ ಶ್ರೀರೆಡ್ಡಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತ್ಮಹತ್ಯೆಗೆ ಯೋಚಿಸುತ್ತಿದ್ದೇನೆ ಎಂದು ನಟಿ ಹೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ಶ್ರೀರೆಡ್ಡಿ ಟಾಲಿವುಡ್‌ನ ಹಲವು ಮಂದಿಯನ್ನು ಟಾರ್ಗೆಟ್ ಮಾಡಿದ್ದರು. ತೆಲುಗಿನ ಕೆಲವು ನಟಿಯರ ಮೇಲೂ ಗಂಭೀರ ಆರೋಪಗಳನ್ನು ಮಾಡಿದ್ದರು. ಅದರಲ್ಲಿ ಪವನ್‌ ಕಲ್ಯಾಣ್‌ ಅವರನ್ನು ನಟಿ ಬಿಟ್ಟಿಲ್ಲ. ಮಾತ್ರವಲ್ಲ ಪರಭಾಷೆ ನಟಿಯರಿಗೆ ಹಲವು ಅವಕಾಶಗಳನ್ನು ನೀಡುತ್ತಿದ್ದು, ತೆಲುಗು ನಟಿಯರಿಗೇ ಹೆಚ್ಚು ಅವಕಾಶ ಸಿಕ್ಕಿಲ್ಲ ಎಂದೂ ಟೀಕೆ ಕೂಡ ಮಾಡಿದ್ದರು. ಮೀಟೂ ಅಭಿಯಾನದ ವೇಲೆ ಹಲವು ರಾಜಕೀಯ, ಸಿನಿಮಾ ವ್ಯಕ್ತಿಗಳ ಬಗ್ಗೆ ಮಾಡಿದ ಪೋಸ್ಟ್‌ ಭಾರಿ ಸಂಚಲನ ಸೃಷ್ಟಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಶ್ರೀರೆಡ್ಡಿ ಏನೇ ಹೇಳಿಕೆ ಕೊಟ್ಟರು ಜನರು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಕಾರಣಕ್ಕೆ ಶ್ರೀರೆಡ್ಡಿ ತನ್ನದೊಂದು ಯೂಟ್ಯೂಬ್ ಚಾನೆಲ್ ತೆರೆದಿದ್ದರು ಅದರಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ವಿಡಿಯೋ ಮಾಡುತ್ತಿದ್ದರು. ಅದರಲ್ಲೂ ವೈಸಿಪಿ ನಾಯಕ ವೈಎಸ್ ಜಗನ್ ದೊಡ್ಡ ಅಭಿಮಾನಿಯಾಗಿದ್ದ ಶ್ರೀ ರೆಡ್ಡಿ ಅವರನ್ನು ಬೆಂಬಲಿಸಿ ವಿಡಿಯೋ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವೈಸಿಪಿ ಪಕ್ಷದ ಪರವಾಗಿ ಹೆಚ್ಚು ವಿಡಿಯೋಗಳನ್ನು ಮಾಡಿ ಸುದ್ದಿಯಲ್ಲಿ ಇದ್ದರು.ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಶ್ರೀರೆಡ್ಡಿ ನಂಬಿದ್ದರು. ಆದರೆ, ಪರಿಸ್ಥಿತಿ ಬದಲಾಗಿತ್ತು. ಜಗನ್ ಮೋಹನ್ ರೆಡ್ಡಿ ಚುನಾವಣೆಯಲ್ಲಿ ಸೋತಿದ್ದರು. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾದರೆ, ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿದ್ದರು.ಇದೀಗ ನಟಿ ಈ ಬಗ್ಗೆ ಭಾರಿ ಟ್ರೋಲ್‌ ಆಗುತ್ತಿದ್ದಾರೆ.

 

 

ಹಳೆಯ ವಿಡಿಯೊಳನ್ನು ಇಟ್ಟುಕೊಂಡು ನಟಿಯನ್ನು ಟ್ರೋಲ್‌ ಮಾಡಲಾಗುತ್ತಿದೆ. ಶ್ರೀರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತೆಲುಗುದೇಶಂ ಪಕ್ಷದ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದಾಗಿ ಮನನೊಂದ ನಟಿ ಮಾನಸಿಕವಾಗಿ ನೊಂದಿದ್ದು, ಆತ್ಮಹತ್ಯೆಗೆ ಯೋಚಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ಈಗ ಹೇಳುತ್ತಿರುವ ಮಾತುಗಳು ಸಿಲ್ಲಿ ಎನಿಸಬಹುದು. ಆದರೆ, ನಾನು ಸಾಯಲು ಬಯಸುತ್ತೇನೆ ಎಂದು ಶ್ರೀರೆಡ್ಡಿ ಬರೆದುಕೊಂಡಿದ್ದಾರೆ.

ಶ್ರೀರೆಡ್ಡಿಗೆ ಚಲನಚಿತ್ರ ಕಲಾವಿದರ ಸಂಘ ನಿಷೇಧ ಹೇರಿತ್ತು. ಏಪ್ರಿಲ್ 2018 ರಲ್ಲಿ ಶ್ರೀ ರೆಡ್ಡಿ ಫಿಲಂ ಚೇಂಬರ್ ಮುಂದೆ ಬೆತ್ತಲೆಯಾಗಿ ಪ್ರದರ್ಶನ ನೀಡಿದ್ದರು. ಇದು ರಾಷ್ಟ್ರವ್ಯಾಪಿ ಸುದ್ದಿಯಾಯಿತು. ಶ್ರೀರೆಡ್ಡಿ ಲೈಂಗಿಕ ಕಿರುಕುಳ ಮತ್ತು ತೆಲುಗು ಹುಡುಗಿಯರಿಗೆ ಅವಕಾಶ ನೀಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದರು.