Sunday, January 19, 2025
ಕಾಸರಗೋಡುಯಕ್ಷಗಾನ / ಕಲೆಸುದ್ದಿ

ಆ.03ರಂದು ಶ್ರೀಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀ ಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಇವರ ಸೇವಾರೂಪದಲ್ಲಿ ನಡೆಯಲಿರುವ ಶ್ರೀಮದ್ ದೇವೀ ಭಾಗವತ ನವಾಹ ಮತ್ತು ಯಕ್ಷಗಾನ ತಾಳಮದ್ದಳೆ ನವಾಹದ ಉದ್ಘಾಟನಾ ಸಮಾರಂಭ – ಕಹಳೆ ನ್ಯೂಸ್

ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀ ಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಇವರ ಸೇವಾರೂಪದಲ್ಲಿ ಶ್ರೀಮದ್ ದೇವೀ ಭಾಗವತ ನವಾಹ ಮತ್ತು ಯಕ್ಷಗಾನ ತಾಳಮದ್ದಳೆ ನವಾಹದ ಉದ್ಘಾಟನಾ ಸಮಾರಂಭವು ಆ.03 ಎಡನೀರು ಮಠದಲ್ಲಿ ನಡೆಯಲಿದೆ.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ. ಟಿ ಶ್ಯಾಮ್ ಭಟ್ ಐಎಎಸ್(ನಿ) ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ಬಹುಶ್ರುತ ವಿದ್ವಾಂಸ ವಿದ್ವಾನ್ ಶ್ರೀ ಪಂಜ ಭಾಸ್ಕರ ಭಟ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು