Sunday, January 19, 2025
ಉಡುಪಿಯಕ್ಷಗಾನ / ಕಲೆಸುದ್ದಿ

ಅಮೇರಿಕಾದಲ್ಲಿ ಪ್ರತಿವರ್ಷ ಜುಲೈ 27ರಂದು ‘ಯಕ್ಷಗಾನ ಫೌಂಡೇಶನ್ ಡೇ’ ಘೋಷಣೆ-ಕಹಳೆ ನ್ಯೂಸ್

ಉಡುಪಿ : ಪುತ್ತಿಗೆ ಶ್ರೀಪಾದರ ಆಶೀರ್ವಾದದೊಂದಿಗೆ ಪಟ್ಲ ಸತೀಶ್ ಶೆಟ್ಟಿ ಅವರ ನಾಯಕತ್ವದಲ್ಲಿ ಯಕ್ಷಧ್ರುವ ಫೌಂಡೇಶನ್ ಕಲಾತಂಡದ ಕಲಾವಿದರು ಪುತ್ತಿಗೆ ಮಠದ ಪ್ರಥಮ ದೇವಾಲಯ ಅಮೆರಿಕಾದ ಫೀನಿಕ್ಸ್ ನಲ್ಲಿರುವ ಶ್ರೀವೆಂಕಟ ಕೃಷ್ಣ ಕ್ಷೇತ್ರದಲ್ಲಿ ‘ದೇವೀ ಮಾಹಾತ್ಮೆ’ ಯಕ್ಷಗಾನ ಪ್ರದರ್ಶಿಸಿದರು.
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿರುವ ಸಿಟಿ ಮೇಯರ್ ಅವರು, ಅದ್ಭುತ ಚೆಂಡೆ ವಾದನ ಮತ್ತು ವಿಶಿಷ್ಟ ರೀತಿಯ ಕುಣಿತ ಮತ್ತು ಅಪೂರ್ವ ಗಾಯನದಿಂದ ಕೂಡಿದ ಯಕ್ಷಗಾನ ಕಲೆಯನ್ನು ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಜುಲೈ 27 ಅನ್ನು ಪ್ರತಿವರ್ಷ ಯಕ್ಷಗಾನ ಫೌಂಡೇಶನ್ ಡೇ ಎಂದು ಘೋಷಿಸಿದರು .

ಅಮೇರಿಕಾದ ನೆಲದಲ್ಲಿ ಪ್ರಥಮ ಬಾರಿ ಯಕ್ಷಗಾನ ಕಲಾ ಸಂಸ್ಥೆಯೊAದಕ್ಕೆ ಪ್ರಥಮ ಬಾರಿ ಈ ರೀತಿಯ ಸರಕಾರಿ ಗೌರವ ದೊರೆತಿದ್ದು, ಇದರಿಂದ ವಿದೇಶ- ಸ್ವದೇಶದಲ್ಲಿರುವ ಯಕ್ಷಗಾನ ಪ್ರೇಮಿಗಳು ಸಂತಸಗೊAಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಧ್ರುವ ಫೌಂಡೇಶನ್ ತಂಡದ ಕಲಾವಿದರು ಅಮೆರಿಕಾದಾದ್ಯಂತ ಸಂಚರಿಸಲಿದ್ದು, ಪುತ್ತಿಗೆ ಮಠದ ನ್ಯೂಜರ್ಸಿ, ಹುಸ್ಟೋನ್ ಮೊದಲಾದ ಶಾಖೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ ಎಂದು ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು