ಉಡುಪಿ ಶ್ರೀಕೃಷ್ಣನ ಸಾನಿಧ್ಯದಲ್ಲಿ ಕೈಮಗ್ಗ ಸೀರೆಗಳ ಉತ್ಸವಕ್ಕೆ ಚಾಲನೆ ನೀಡಿದ ಪರ್ಯಾಯ ಸ್ವಾಮೀಜಿ ಶ್ರೀಶ್ರೀ ಸುಗುಣೆಂದ್ರ ತೀರ್ಥ ಶ್ರೀಪಾದರು – ಕಹಳೆ ನ್ಯೂಸ್
ಉಡುಪಿ : ಶ್ರೀಕೃಷ್ಣನ ಸಾನಿಧ್ಯದಲ್ಲಿ ಕೈಮಗ್ಗ ಸೀರೆಗಳ ಉತ್ಸವಕ್ಕೆ ಪರ್ಯಾಯ ಸ್ವಾಮೀಜಿ ಶ್ರೀಶ್ರೀ ಸುಗುಣೆಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಆಗಸ್ಟ್ 1 ರಿಂದ 11 ರ ವರೆಗೆ ಉಡುಪಿಯಲ್ಲಿ ಶ್ರೀ ಕೃಷ್ಣನಿಗೆ ಮಾಶೋಸ್ತವದ ಕಾರ್ಯಕ್ರಮ ನಡೆಯಲಿದ್ದು, ಪದ್ಮಶಾಲಿ ನೇಕಾರ ಪ್ರತಿಷ್ಠಾನ ಶ್ರೀ ಕೃಷ್ಣ ಲೀಲೋಸ್ತವ ಎಂಬ ಹಲವಾರು ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಇದು ಪದ್ಮಶಾಲಿಗಳು ಮಾಡುವ ಶ್ರೀ ಕೃಷ್ಣ ನ ಸೇವೆ ಎಂದು ಸ್ವಾಮೀಜಿ ಗಳು ನುಡಿದರು. ಮೊದಲ ಬಾರಿ ಈ ರೀತಿಯ ಕಾರ್ಯಕ್ರಮ ಉಡುಪಿ ರಾಜಾಂಗಣದಲ್ಲಿ ನಡೆಯುತ್ತಿದ್ದು ಪದ್ಮಶಾಲಿಗಳು ಶ್ರೀ ಕೃಷ್ಣ ಕೃಪೆಗೆ ಪಾತ್ರರಾಗಿದ್ದೀರಿ ನಮಗೂ ಬಹಳ ಸಂತೋಷವಾಗಿದೆ, ನಿಮ್ಮ ಎಲ್ಲಾ ಉದ್ದೇಶಗಳು ಫಲಕಾರಿಯಾಗಲಿ ಭಗವಂತ ಅನುಗ್ರಹಿಸಲಿ ಎಂದು ಆಶೀರ್ವಾದ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭಾದ ರಾಯಪ್ಪ , ಮಾಜಿ ಪ್ರಧಾನಮಂತ್ರಿಗಳ ಆರ್ಥಿಕ ಸಲಹೆಗಾರ ಜಗದೀಶ್ ಶೆಟ್ಟಿಗಾರ್ ಆತ್ರಾಡಿ, ಉಡುಪಿಯ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಪ್ರಭಾಕರ ನಾಯಕ್ ಅಮ್ಮುಂಜೆ, ಉದ್ಯಮಿ ಕಿಶೋರ್ ಕುಮಾರ್, ಪುರುಷೋತ್ತಮ ಶೆಟ್ಟಿ, ಪಾಟೀಲ್ ಸ್ಟೋರ್ಸ್ ಗಣೇಶ್ ಪಾಟೀಲ್, ಹರಿಯಪ್ಪ ಕೋಟ್ಯಾನ್ ಡಾ ಚಂದನ್ ಶೆಟ್ಟಿಗಾರ್, ರತ್ನಕರ ಶೆಟ್ಟಿಗಾರ್, ಮತ್ತು ಪದ್ಮಶಾಲಿ ಪ್ರತಿಷ್ಠಾನದ ಪದಾಧಿಕಾರಿಗಳು ಸದಸ್ಯರು ಮತ್ತು ಪದ್ಮಶಾಲಿ ಸಮಾಜದ ನೂರಾರು ಸದಸ್ಯರು ಉಪಸ್ಥಿತರಿದ್ದರು.