Saturday, November 23, 2024
ಕುಂದಾಪುರಸುದ್ದಿ

31 ವರ್ಷಗಳ ಸುಧೀರ್ಘಕಾಲ ಸೇವೆಯಿಂದ ನಿವೃತ್ತಿ ಹೊಂದಿದ ಕುಂದಾಪುರ ನಗರ ಠಾಣಾ ಪೊಲೀಸ್ ನಿರೀಕ್ಷಕ ಯು.ಬಿ ನಂದಕುಮಾರ್- ಕಹಳೆ ನ್ಯೂಸ್

ಶ್ರೀ ಯು.ಬಿ ನಂದಕುಮಾರ್ ಪೊಲೀಸ್ ನಿರೀಕ್ಷಕರು ಕುಂದಾಪುರ ನಗರ ಠಾಣೆ ಇವರು ಪೊಲೀಸ್ ಇಲಾಖೆಯಲ್ಲಿ 31 ವರ್ಷಗಳ ಸುಧೀರ್ಘಕಾಲ ಸೇವೆ ಸಲ್ಲಿಸಿ ಈಗ ಸೇವೆಯಿಂದ ನಿವೃತ್ತಿ ಹೊಂದಿದ್ದು ಇವರ ಬೀಳ್ಕೊಡುಗೆ ಸಮಾರಂಭವು ಕುಂದಾಪುರದ ಮೊಗವೀರ ಸಭಾಭವನದಲ್ಲಿ ನಡೆದಿದೆ.

ಈ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬೆಳ್ಳಿಯಪ್ಪ .ಕೆ .ಯು., ಪ್ರೊಬೆಷನರಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಕುಂದಾಪುರ ಉಪ ವಿಭಾಗದ ವಿವಿಧ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಶ್ರೀಯುತರ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಅವರ ಸೇವೆಯನ್ನು ಮನ ತುಂಬಿ ಶ್ಲಾಘಿಸಿದರು. ಇವರು ಕುಂದಾಪುರ ಠಾಣೆಯಲ್ಲಿ ಒಂದುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಆ ಸಮಯದಲ್ಲಿ ತುಂಬಾ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವಲ್ಲಿ ಮತ್ತು ನೂರಕ್ಕೂ ಹೆಚ್ಚು ಕಳೆದುಕೊಂಡ ಮೊಬೈಲನ್ನು ಪತ್ತೆ ಹಚ್ಚಿ ವಾರಿಸುದಾರರಿಗೆ ಹಿಂದಿರುಗಿಸಿರುವುದು ಶ್ಲಾಘನೀಯ ಕೆಲಸವಾಗಿರುತ್ತದೆ.. ಇವರು 1993ನೇ ಇಸವಿನಲ್ಲಿ ಪೊಲೀಸ್ ಇಲಾಖೆಗೆ ಸೇರಿ ಗುಪ್ತಚರ, ಕರಾವಳಿ ಕಾವಲು ಪಡೆ ಹಾಗೂ ಮುಂತಾದ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದು ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳ ಪದಕವನ್ನು ನೀಡಿರುತ್ತಾರೆ. ಈ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಡಿವೈಎಸ್ಪಿ ಶ್ರೀ ಬೆಳ್ಳಿಯಪ್ಪರವರು ವಹಿಸಿದ್ದು ಶ್ರೀ ನಂದಕುಮಾರ್ ದಂಪತಿಗಳನ್ನು ಸನ್ಮಾನಿಸಿದ್ದು ಸ್ವಾಗತ ಭಾಷಣವನ್ನು ಆನಂದ್ ಎಎಸ್ಐ, ನಿರೂಪಣೆ ಕಾರ್ಯಕ್ರಮವನ್ನು ಮಧುಸೂದನ್ ಮತ್ತು ವಂದನಾರ್ಪಣೆಯನ್ನು ಪುಷ್ಪ ಪಿಎಸ್ಐ, ರವರು ನೆರವೇರಿಸಿ ಕೊಟ್ಟಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು