Sunday, January 19, 2025
ಕ್ರೈಮ್ಸುದ್ದಿಹುಬ್ಬಳ್ಳಿ

‘ನಾನು ಮುಸ್ಲಿಂ, ಐ ಲವ್ ಯು, ನನ್ನ ಪ್ರೀತಿಸು’ – ಬಾಲಕಿಗೆ ಕಿರುಕುಳ ಕೊಟ್ಟ ಅಬ್ದುಲ್ ರಜಾಕ್ – ಕಹಳೆ ನ್ಯೂಸ್

ಹುಬ್ಬಳ್ಳಿ: ನಾನು ಮುಸ್ಲಿಂ, ಐ ಲವ್ ಯು ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನು ನನ್ನನ್ನು ಪ್ರೀತಿಸುತ್ತಿಯಾ ಎಂದು ಅಪ್ರಾಪ್ತ ಬಾಲಕಿಯ ಮೇಲೆ ಚೀಟಿ ಎಸೆದು ಹೋಗಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಾಗಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದ 19 ವರ್ಷದ ಅಬ್ದುಲ್ ರಜಾಕ್ ಕೃತ್ಯ ಎಸಗಿದ ಯುವಕ.

ಹೊಸೂರು ಬಸ್ ನಿಲ್ದಾಣದ ಬಳಿಯಲ್ಲಿ ಅಪ್ರಾಪ್ತ ಬಾಲಕಿ ತನ್ನ ಸಹೋದರಿಯ ಜೊತೆ ನಿಂತಾಗ ಆರೋಪಿ ಅಬ್ದುಲ್, ನಾನು ಮುಸ್ಲಿಂ. ನನ್ನ ಪ್ರೀತಿ ಮಾಡು ಅಂತ ಬಾಲಕಿ ಮೇಲೆ ಚೀಟಿ ಎಸೆದಿದ್ದಾನೆ. ಅಷ್ಟೇ ಅಲ್ಲದೆ 2 ಬಾರಿ ಕರೆ ಮಾಡಿ ಬಾಲಕಿಗೆ ಪ್ರೀತಿ ಮಾಡು ಅಂತ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಹೀಗಾಗಿ ಬಾಲಕಿ ತನ್ನ ಪೋಷಕರಿಗೆ ಮಾಹಿತಿ ತಿಳಿಸಿದ್ದು ಪೋಷಕರು ಆರೋಪಿ ಅಬ್ದುಲ್ ರಜಾಕ್ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದ್ರೆ ಘಟನೆ ನಡೆದ ಸ್ಥಳ ವಿದ್ಯಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ. ಹೀಗಾಗಿ ಪ್ರಕರಣವು ಇದೀಗ ವಿದ್ಯಾನಗರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದು ತನಿಖೆ ಮುಂದುವರೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು