Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವನ ಮೃತದೇಹದ ಗುರುತು ಪತ್ತೆಗಾಗಿ ಬಂಟ್ವಾಳ ಪೋಲೀಸರು ಮನವಿ -ಕಹಳೆ ನ್ಯೂಸ್

ಬಂಟ್ವಾಳ: ಅಗಸ್ಟ್ 1 ನೇ ತಾರೀಖಿನಂದು ಬಿಸಿ ರೋಡ್ ನ ಕೆ.ಎಸ್.ಆರ್.ಟಿ.ಸಿ ಬಸ್ಸುನಿಲ್ದಾಣದಲ್ಲಿ ಸುಮಾರು 50 ರಿಂದ 55 ವರ್ಷ ವಯಸ್ಸಿನ ಅನಾಮಿಕ ವ್ಯಕ್ತಿಯು ಅಸೌಖ್ಯದಿಂದ ನರಳುತ್ತಿದ್ದನ್ನು ಕಂಡ ಸಾರ್ವಜನಿಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸೌಖ್ಯದಿಂದ ನರಳುತ್ತಿದ್ದ ಈತನ ಹೆಸರು ಪ್ರಕಾಶ ಎಂಬುದಾಗಿ ತಿಳಿಸಿದ್ದು,ಬಳಿಕ ಈತನನ್ನು 108 ತುರ್ತುಸೇವೆಯ ಆಂಬ್ಯುಲೇನ್ಸ್ ಮೂಲಕ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲು ಮಾಡಲಾಗಿತ್ತು.

ಆದರೆ ಆತ ಆಸ್ಪತ್ರೆಯಲ್ಲಿ ಸುಮಾರು ಮದ್ಯಾಹ್ನದ ವೇಳೆಗೆ ಮೃತಪಟ್ಟ ಬಗ್ಗೆವೈದ್ಯರು ತಿಳಿಸಿದ್ದಾರೆ.
ಪ್ರಸ್ತುತ ವಾರೀಸುದಾರರು ಪತ್ತೆಯಾಗದ ಪ್ರಕಾಶರವರ ಮೃತ ದೇಹವು ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಮೃತ ಪ್ರಕಾಶ ಎಂಬವರ ವಾರಿಸುದಾರರ ಪತ್ತೆಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಮೃತದೇಹದ ಗುರುತು ಪತ್ತೆಯಾದರೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08255-232111, 9480805367 ಅಥವಾ ಜಿಲ್ಲಾ ಕಂಟ್ರೋಲ್ ರೂಂ ನಂಬ್ರ 0824 230508, 9480805300 ನೇಯದಕ್ಕೆ ಸಂಪರ್ಕಿಸುವುದು,

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು