Tuesday, January 21, 2025
ಉಡುಪಿಸುದ್ದಿ

ತಹಶಿಲ್ದಾರ್ ಕಚೇರಿಯ ಆವರಣದಲ್ಲಿ ಇದ್ದ ಅಪಾಯಕಾರಿ ಮರ ತೆರವು-ಕಹಳೆ ನ್ಯೂಸ್

ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಬೃಹದಾಕಾರದ ಹೆಬ್ಬಲಸಿನ ಮರವೊಂದು ಈ ಹಿಂದೆಯೇ ಸಿಡಿಲು ಬಿಡಿದು, ರೋಗ ಬಂದು ಒಣಗಿ ಹೋಗಿ ಬೀಳುವ ಸ್ಥಿತಿಯಲ್ಲಿ ಇತ್ತು. ಅಪಾಯಕಾರಿ ಸ್ಥಿತಿಯಲ್ಲಿ ಇದ್ದು ಯಾವುದೇ ಕ್ಷಣದಲ್ಲಿಯೂ ಬೀಳಬಹುದಿತ್ತು. ಈ ಆವರಣದಲ್ಲಿ ತಹಶಿಲ್ದಾರ್ ಕಚೇರಿ, ಪುರಸಭೆ, ತಾಲ್ಲೂಕು ಪಂಚಾಯತ್, ಸರ್ವೆ ಇಲಾಖೆ ಹೀಗೆ ಹಲವು ಕಚೇರಿಗಳ ಸಮುಚ್ಚಯವಾಗಿರುವ ಆಡಳಿತಸೌಧದಲ್ಲಿ ಹಲವು ಕಾರ್ಯಗಳಿಗೆ ಬರುವ ಸಾರ್ವಜನಿಕರ ಸಂಖ್ಯೆ ಹೆಚ್ಚು ಇದೆ. ತಾಲ್ಲೂಕು ಆಡಳಿತ ಸೌಧಕ್ಕೆ ಬರುವ ಸಾರ್ವಜನಿಕರ ವಾಹನಗಳು ಇಲ್ಲಿ ನಿಲ್ಲುತ್ತಿದ್ದವು.

ಇಂತಹಲ್ಲಿ ಒಣಗಿ ಸತ್ತು ಹೋಗಿರುವ ಹೆಬ್ಬಲಸಿನ ಮರ ಬೀಳುವ ಅಪಾಯವಿತ್ತು. ಸಾರ್ವಜನಿಕರ ಮೇಲೆ ಮತ್ತು ವಾಹನಗಳ ಮೇಲೆ ಬೀಳುವ ಅಪಾಯವಿತ್ತು.ಹಲವು ವರ್ಷಗಳಿಂದ ಇದನ್ನು ತೆರವು ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ಎಷ್ಟೋ ಅಧಿಕಾರಿಗಳು ಆಗಿ ಹೋದರೂ ಫಲ ಸಿಕ್ಕಿರಲಿಲ್ಲ.ಈಗ ತಹಶಿಲ್ದಾರ್ ಪ್ರತಿಭಾ, ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಹಾಗೂ ಪುರಸಭಾ ಚೀಫ್ ಆಫೀಸರ್ ನಾಗರಾಜ್ ರವರ ಪ್ರಯತ್ನದಿಂದಾಗಿ ಇಂದು ಅಪಾಯಕಾರಿ ಮರ ತೆರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರಣ್ಯ ಇಲಾಖೆಯ ಅಧಿಕಾರಿಗಳಾದ ಜೀವನ್ ಶೆಟ್ಟಿ, ಮಂಜುನಾಥ್ ರವರ ಸಹಕಾರದಿಂದ ಗೌರವ್, ಜಯ, ಭರತ್, ಪ್ರಜಾನ್, ರವರ ತಂಡ ಈ ದಿನ ಅಪಾಯಕಾರಿ ಮರವನ್ನು ತೆರವು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರದ ರಜಾದಿನ ಸಾರ್ವಜನಿಕರ ಓಡಾಟ ಇಲ್ಲದಿರುವುದರಿಂದ ಈ ದಿನ ಮರ ತೆರವು ಕಾರ್ಯಾಚರಣೆ ನೆಡೆದಿದೆ.ಭಾನುವಾರವಾದರೂ ಬಂದು ಮರ ತೆರವುಗೊಳಿಸುವ ಕಾರ್ಯದಲ್ಲಿ ಸಹಕರಿಸಿದ ತಹಶಿಲ್ದಾರ್ ಪ್ರತಿಭಾ:

ಭಾನುವಾರದ ಸಾರ್ವತ್ರಿಕ ರಜೆಯಿದ್ದರೂ ಸಹ ತಹಶಿಲ್ದಾರ್ ಪ್ರತಿಭಾ ರವರು ಕಚೇರಿಗೆ ಬಂದು ಅಪಾಯಕಾರಿ ಮರ ತೆರವುಗೊಳಿಸುವ ಮೇಲ್ವಿಚಾರಣೆ ಮಾಡಿದರು.ಭಾನುವಾರವನ್ನೂ ಲೆಕ್ಕಿಸದೆ ಸದಾ ಸಾರ್ವಜನಿಕರ ಸುರಕ್ಷತೆಗೆ ಕರ್ತವ್ಯ ನಿರ್ವಹಿಸುವ ತಹಶಿಲ್ದಾರ್ ಪ್ರತಿಭಾ ರವರ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರತಿಭಾ ಹೇಳಿಕೆ: ನಮಗೆ ಸಾರ್ವಜನಿಕರ ಸುರಕ್ಷತೆ ಮುಖ್ಯ. ಹಾಗಾಗಿ ಈ ಮರವನ್ನು ಅರಣ್ಯ ಇಲಾಖೆಯ ಅನುಮತಿ ಮತ್ತು ಸಹಕಾರದಿಂದ ತೆರವು ಮಾಡಿದ್ದೇವೆ. ಈ ರೀತಿ ಬೇರೆಡೆಯಲ್ಲಿ ಎಲ್ಲಿಯಾದರೂ ಅಪಾಯಕಾರಿ ಮರಗಳಿದ್ದರೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದರೆ ತೆರವುಗೊಳಿಸಲು ಕ್ರಮವಹಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.