ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಕಳದ ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ದಬ್ಬಾಳಿಕೆ ಆರೋಪಿಸಿ ಬಿಜೆಪಿ ಪ್ರತಿಭಟನೆ ; ಉದಯಕುಮಾರ್ ಶೆಟ್ಟಿ ಆಟಾಟೋಪಗಳು, ದ್ವೇಷ ರಾಜಕೀಯ ಮುಂದುವರಿದಲ್ಲಿ ಮನೆಗೆ ಮುತ್ತಿಗೆ ಎಚ್ಚರಿಕೆ, ಬಿಜೆಪಿ ಆಕ್ರೋಶ-ಕಹಳೆ ನ್ಯೂಸ್
ಉಡುಪಿ :ಕಾರ್ಕಳದ ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಆಧಾರ ರಹಿತ ಆರೋಪದಲ್ಲಿ ತೊಡಗಿದ್ದು, ಪ್ರಸ್ತುತ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪ್ರತಿಮೆ ನಿರ್ಮಿಸಿದ ಶಿಲ್ಪಿಯ ಬೆಂಗಳೂರು ಮನೆಗೆ ತೆರಳಿ ಕಾಂಗ್ರೆಸ್ ನ ಮುಖಂಡರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಇಂದು ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷರಾದ ನವೀನ್ ನಾಯಕ್ ಮಾತನಾಡಿ ಪರಶುರಾಮ ಮೂರ್ತಿಯ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವ ಹೀನ ಕಾರ್ಯಕ್ಕೆ ಇಳಿದಿದೆ ಎಂದರು.
ಪರಶುರಾಮ ಮೂರ್ತಿಯ ಕೆಲಸ ಸಂಪೂರ್ಣ ಮಾಡಲು ಶಿಲ್ಪಿ ಕೃಷ್ಣ ನಾಯ್ಕ್ ಪ್ರಯತ್ನ ಪಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನವರಿಗೆ ಅದು ಬೇಕಿಲ್ಲ.
ಕಾರ್ಕಳ ಕಾಂಗ್ರೆಸ್ ನ ಅತೃಪ್ತ ಆತ್ಮಗಳಿಂದಾಗಿ ಪರಶುರಾಮರ ಮೂರ್ತಿಯನ್ನು ಸಂಪೂರ್ಣ ಮಾಡಲಾಗದಂತೆ ಆಗಿದೆ.
ಶಿಲ್ಪಿ ಮಾಡಿದ ಕಂಚಿನ ಮೂರ್ತಿಯನ್ನು ಪೊಲೀಸ್ ಠಾಣೆಯಲ್ಲಿಡುವ ನೀಚ ಕಾರ್ಯವನ್ನು ಇಂದು ಕಾಂಗ್ರೆಸ್ ಮಾಡಿದೆ.
ಶಿಲ್ಪಿಯ ಕಾರ್ಯಕ್ಕೆ ತಡೆ ಒಡ್ಡಲು ಕಾಂಗ್ರೆಸ್ ನ ಉದಯ ಕುಮಾರ ಶೆಟ್ಟಿಯವರೇ ಪ್ರಯತ್ನ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಕಾರ್ಕಳದ ವೃತ್ತ ನಿರೀಕ್ಷಕರು ಕಾರ್ಯ ನಿರ್ವಹಿಸಿದ್ದಾರೆ.
ಬೆಂಗಳೂರುನಲ್ಲಿ ಉದಯ ಕುಮಾರ ಶೆಟ್ಟಿಯವರು ಕೃಷ್ಣ ನಾಯ್ಕ್ ಮನೆಗೆ ಬಂದಾಗ ಕಾರ್ಕಳದ ವೃತ್ತ ನಿರೀಕ್ಷೆಕರು ಉದಯ ಕುಮಾರ ಶೆಟ್ಟಿಯವರನ್ನು ಕಂಡು ಸಚಿವರಿಗೆ ಸ್ವಾಗತ ಕೋರುವಂತೆ ರೀತಿಯ ವರ್ತನೆ ಮಾಡಿದ್ದಾರೆ. ವೃತ್ತ ನಿರೀಕ್ಷಕರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಗೋಪಾಲ ಭಂಡಾರಿ, ವೀರಪ್ಪ ಮೊಯಿಲಿಯವರ ಕಾಲಘಟ್ಟಸ್ದಲ್ಲಿ ಸೌಹಾರ್ದ ರಾಜಕಾರಣ ಕಾರ್ಕಳದಲ್ಲಿ ಇತ್ತು. ಆದ್ರೆ ಉದಯ ಕುಮಾರ ಶೆಟ್ಟಿಯವರು ಕಾಂಗ್ರೆಸ್ ಗೆ ಬಂದ ನಂತರ ಕಾರ್ಕಳದಲ್ಲಿ ದ್ವೇಷ ರಾಜಕಾರಣ ಮಾಡುವಂತಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ ಕಾರ್ಕಳದಲ್ಲಿ ಕಾಂಗ್ರೆಸ್ ಇದ್ದ ಕಾಲ ಘಟ್ಟ ಹಾಗೂ ಬಿಜೆಪಿ ಇದ್ದ ಕಾಲ ಘಟ್ಟದಲ್ಲಿನ ಅಭಿವೃದ್ಧಿಯ ತುಲನೆಯನ್ನು ಜನತೆ ಮಾಡಬೇಕು ಎಂದರು. ಕಾಂಗ್ರೆಸ್ ನವರಿಗೆ ಅಭಿವೃದ್ಧಿ ಬೇಕಿಲ್ಲ ಎಂದರು.