ಬೆಂಗಳೂರು: ಸಹಕಾರ ಸಂಘಗಳ ಸಾಲಮನ್ನಾ ತೀರ್ಮಾನದಂತೆ ಫಲಾನುಭವಿ ರೈತರ ಸ್ವಯಂ ದೃಡೀಕರಣ ಪತ್ರ ಹಾಗೂ ಆಧಾರ್ ಒಪ್ಪಿಗೆ ಪತ್ರ ಪಡೆದುಕೊಳ್ಳುವುದಕ್ಕೆ ಹಾಗೂ ನೀಡುವುದಕ್ಕೆ ರೈತರಿಗೆ ಹಾಗೂ ಸಂಘಗಳಿಗೆ ನ.25ರ ತನಕ ಅಂತಿಮ ದಿನಾಂಕವನ್ನು ನೀಡಲಾಗಿದೆ.
ಸಾಲಮನ್ನಾ ದೃಡೀಕೃತ ಮಾಹಿತಿ ಸಲ್ಲಿಸುವ ಬಗ್ಗೆ ಈಗಾಗಲೇ ಸರಕಾರ ಹಾಗೂ ಸಹಕಾರ ಸಂಘಗಳ ನಿಬಂಧಕರು ಸುತ್ತೋಲೆಯನ್ನು ಹೊರಡಿಸಿದೆ.
ಸುತ್ತೋಲೆಯಲ್ಲಿ ಜುಲೈ, 10, 2018ಕ್ಕೆ ಅನ್ವಯವಾಗುವಂತೆ ಹೊರಬಾಕಿ ಹೊಂದಿರುವ ಎಲ್ಲ ರೈತರಿಗೆ ಸಂಘದ ದಾಖಲೆಗಳನ್ನು ಲಭ್ಯವಿರುವ ಮಾಹಿತಿಯನ್ನು ಆನ್ ಲೈನ್ ಮೂಲಕ ಎಂಟ್ರಿ ಮಾಡಿ ಬಳಿಕ ಸಂಬಂಧಪಟ್ಟ ರೈತರಿಂದ ಸ್ವಯಂದ ದೃಡೀಕರಣ ಪತ್ರ ಹಾಗೂ ಆಧಾರ್ ಒಪ್ಪಿಗೆ ಪತ್ರ ಮಾಹಿತಿಯನ್ನು ಪಡೆಯಬೇಕು, ಈ ಎರಡು ಹಂತದ ಮಾಹಿತಿ ನಮೂದು ಪ್ರಕ್ರಿಯೆ ನ.25 ರೊಳಗೆ ಮುಗಿಯಬೇಕು ಅಂತ ಸ್ಪಷ್ಟವಾಗಿ ಹೇಳಿದೆ.