Saturday, November 16, 2024
ಉಡುಪಿಸುದ್ದಿ

ಉಡುಪಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆಯುವ ಮಾಸೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಸರ್ವಕಾಲದಲ್ಲೂ, ಸರ್ವ ಜನತೆಗೆ ಮಾರ್ಗದರ್ಶನ ಮತ್ತು ಶಕ್ತಿ ನೀಡಿರುದು ಶ್ರೀ ಕೃಷ್ಣ ದೇವರ ಭಗವದ್ಗೀತೆ ಎಂದು ಪತ್ರಕರ್ತರು ಮತ್ತು ವಾಗ್ಮಿಯಾಗಿರುವ ಶ್ರೀ ಕಾಂತ್ ಶೆಟ್ಟಿ ಕಾರ್ಕಳ ಇವರು ಉಡುಪಿ ರಾಜಂಗಣದಲ್ಲಿ ನುಡಿದರು.

ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ ಇವರ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ(ರಿ.) ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ (ನಿ.) ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಕೃಷ್ಣನಿಗೆ ಜನ್ಮಾಷ್ಟಮಿಯ ಸಲುವಾಗಿ ಮಾಸೋಸ್ತವ ಕಾರ್ಯಕ್ರಮ ನೇಕಾರರ ಉತ್ಸವ ಕಾರ್ಯಕ್ರಮ ಉಡುಪಿ ಶ್ರೀಕೃಷ್ಣನ ರಾಜಂಗಣದಲ್ಲಿ ಪರ್ಯಾಯ ಸ್ವಾಮೀಜಿಯವರ ಕೋಟಿ ಗೀತಾ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಕೈ ಜೋಡಿಸಿ ಗೀತಾ ಅರಿತುಕೊಂಡು ಅಳವಡಿಸಿಕೊಂಡು ನಾವೆಲ್ಲರೂ ಬದುಕಬೇಕು, ಜಗತ್ತಿಗೆ ಸಂಸ್ಕಾರ ಮಾರ್ಗದರ್ಶನ ಕೊಡುವಲ್ಲಿ ಪಡೆಯುವಲ್ಲಿ ಇವತ್ತು ಹಿಂದೆ ಬಿದ್ದಿರುವ ಕಾರಣ ಬಾಂಗ್ಲಾ ದಂತ ಘಟನೆ ಗಳು ನಡೆಯುತ್ತಿವೆ, ಜಗತ್ತಿನಲ್ಲಿ ಒಬ್ಬ ಮಹಾತ್ಮಾ ಧಾರ್ಮಿಕ ಸಾಮಾಜಿಕ ವೈಜ್ಞಾನಿಕ ಇನ್ನಿತರ ಅನೇಕ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ್ದಾರೆ ಅವರು ಭಾಗವದ್ಗೀತೆ ಯಿಂದ ಪ್ರೇರಿತರಾದ ಸಾವಿರಾರು ಉದಾಹರಣೆಗಳಿವೆ ಆದ್ದರಿಂದ ಪ್ರತಿ ಯೊಬ್ಬ ಮಾನವ ನಿಗೆ ಬೇಕಾದ ಎಲ್ಲಾ ಶ್ರೀಮಂತಿಕೆ ಯನ್ನು ಹೊಂದಿರುವ ಭಾಗವದ್ಗೀತೆ ಎಲ್ಲರ ಕೈಗೂ ಕಿವಿಗೂ ಮುಟ್ಟಿ ಜಗತ್ತು ಶಾಂತಿಯ ಸಮಾಧಾನ ಬದುಕು ಬದುಕಬೇಕು. ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಶ್ರೀ ಸುಗುನೇಂದ್ರ ಶ್ರೀ ಪಾದರ ಆಶೀರ್ವಾದದೊಂದಿಗೆ ಸಿಕಾರೋಪನ್ಯಾಸ ಮಾಲಿಕೆ ನಡೆಸಲ್ಪಾತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು