Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಮಟ್ಟದ ಪ್ರತಿಭಾ ಕಾರಂಜಿ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಟ್ಟದ ಗಣಿತ – ವಿಜ್ಞಾನ ಮೇಳ ಹಾಗೂ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.

ಚಿತ್ರಕಲೆ ಸ್ಪರ್ಧೆ, ಕ್ಲೇ ಮಾಡಲಿಂಗ್, ವಿಜ್ಞಾನ – ಗಣಿತ ಮಾದರಿ, ಪ್ರಯೋಗಗಳು, ರಸಪ್ರಶ್ನೆ, ಪ್ರಬಂಧ, ಛದ್ಮವೇಶ ಸ್ಪರ್ಧೆ, ಭಾಷಾ ಕಂಠಪಾಠ, ಆಶುಭಾಷಣ, ಪತ್ರವಾಚನ ಇತ್ಯಾದಿ ಸ್ಪರ್ಧೆಗಳನ್ನು ಹಿರಿಯ ಹಾಗೂ ಕಿರಿಯ ವಿಭಾಗಗಳಿಗೆ ಹಮ್ಮಿಕೊಳ್ಳಲಾಯಿತು. ಎಲ್ಲಾ ವಿದ್ಯಾರ್ಥಿಗಳು ಕನಿಷ್ಟ ಒಂದು ಸ್ಪರ್ಧೆಯಲ್ಲಾದರೂ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತೀರ್ಪುಗಾರರಾಗಿ ಶ್ರೀರಾಮ ಪ್ರೌಢ ಶಾಲೆಯ ಅಧ್ಯಾಪಕರಾದ ಸುಷ್ಮಾ ಹಾಗೂ ಧೃತಿ, ಶ್ರೀರಾಮ ಸೆಕೆಂಡರಿ ಶಾಲೆಯ ಶ್ವೇತಾ ಎಸ್ ಹಾಗೂ ಸೌರವ್ ಸಿ ಆರ್, ಶ್ರೀರಾಮ ಪದವಿ ವಿಭಾಗದ ಶೈಲಿನಿ ಭಾಗವಹಿಸಿದರು. ಸ್ಪರ್ಧೆಯನ್ನು ವಿಜ್ಞಾನ ಸಂಘ ಹಾಗೂ ಕನ್ನಡ ಸಂಘದವರು ನಿರ್ವಹಿಸಿದರು. ಅಧ್ಯಾಪಕ ವೃಂದದವರು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು