Recent Posts

Tuesday, January 21, 2025
ಸುದ್ದಿ

ಸಿಯಾಳ ತೆಗೆಯಲು ಹೋದಾಗ ವಿದ್ಯುತ್ ಹರಿದು ವ್ಯಕ್ತಿ ಮೃತ್ಯು – ಕಹಳೆ ನ್ಯೂಸ್

ಶಿರ್ವ : ಇಲ್ಲಿನ ನಡಿಬೆಟ್ಟು ಸಮೀಪ ವ್ಯಕ್ತಿಯೊಬ್ಬರು ಸಿಯಾಳ ಕೊಯ್ಯಲು ಹೋಗಿ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ.

ಶಿರ್ವದ ನಡಿಬೆಟ್ಟು ಸಮೀಪದ ಪನಿಯಾರ ಮನೆಯ ಕೆಲಸಗಾರ ಸುರೇಶ್ ಶೆಟ್ಟಿ (68) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮನೆಯ ಯಜಮಾನ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ತೋಟದಲ್ಲಿ ಕಬ್ಬಿಣದ ಸಲಾಕೆಯನ್ನು ಉಪಯೋಗಿಸಿ ತೆಂಗಿನ ಮರದಿಂದ ಸೀಯಾಳ ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೋಟದಲ್ಲಿ ಹಾದು ಹೋಗಿರುವ ಹೈ ಟೆನ್ಶನ್ ತಂತಿಗೆ ಸುರೇಶ ಕೈಯಲ್ಲಿದ್ದ ಕಬ್ಬಿಣದ ಸಲಾಕೆ ತಗಲಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಶಿರ್ವ ಠಾಣಾ ಪೊಲೀಸರು ಮತ್ತು ಮೆಸ್ಕಾಂ ಇಲಾಖಾಧಿಕಾರಿಗಳು ಭೇಟಿ ನೀಡಿ ಮಹಜರು ನಡಸಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು