Saturday, September 21, 2024
ದಕ್ಷಿಣ ಕನ್ನಡಸುದ್ದಿ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಮಾನ್ಯ ಉಪ ವಿಭಾಗಾಧಿಕಾರಿಯವರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ – ಕಹಳೆ ನ್ಯೂಸ್

ಇತ್ತೀಚೆಗೆ ರಾಜ್ಯ ಸರಕಾರ ರಾಮನಗರದ ಹೆಸರನ್ನು ಬದಲಾಯಿಸಲು ಮುಂದಾಗಿರುವುದು ಖಂಡನೀಯ, ತನ್ನದೇ ಆದ ಇತಿಹಾಸ ಹೊಂದಿರುವ ರಾಮನಗರದ ಹೆಸರನ್ನು ಬದಲಾಯಿಸಬಾರದು. ಬದಲಾವಣೆಯ ನಿರ್ಧಾರದಿಂದ ಸರಕಾರ ಹಿಂದೆ ಸರಿಯದಿದ್ದರೆ ಹೋರಾಟ ನಡೆಸಲಾಗುವುದು. ಮತ್ತು ರಾಜ್ಯ ರಾಜಧಾನಿಯಲ್ಲಿ ಅಕ್ರಮ ಮಾಂಸ ಸರಬರಾಜು ಆದದ್ದನ್ನು ಖಂಡಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ವಿನಂತಿ ಮಾಡಿದ ರಾಷ್ಟ್ರ ರಕ್ಷಣೆ ಪಡೆಯ ಅಧ್ಯಕ್ಷರಾದ ಶ್ರೀ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಎಸಗಿದ ಎಸ್. ಪಿ. ಚಂದನ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಹಾಗೂ
ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ! ಆಗಸ್ಟ್ ೧೫ ಮತ್ತು ಜನವರಿ ೨೬ ರಂದು, ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ, ಅದೇ ಕಾಗದದ/ಪ್ಲಾಸ್ಟಿಕ್‌ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ.

ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಹಾಗಾಗಿ ಪ್ಲಾಸ್ಟಿಕ್ ರಾಷ್ಟ್ರಧ್ವಜದಿಂದ ಆಗುವ ಅವಮಾನವನ್ನು ತಡೆಯಲು ವಿವಿಧ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸುವುದು ಅಪೇಕ್ಷಿತವಿದೆ. ಹಾಗಾಗಿ ಇವೆಲ್ಲವುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪುತ್ತೂರಿನ ಉಪ ವಿಭಾಗಾಧಿಕಾರಿಗಳ ಕಚೇರಿಯ ಪ್ರಬಂಧಕರಾದ ಶ್ರೀ ಚಂದ್ರಶೇಖರ್ ರವರಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶ್ರೀ ಬಾಲಚಂದ್ರಸೊರಕೆ , ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಟ್ರಸ್ಟಿಯಾಗಿರುವ ಶ್ರೀ ಕೃಷ್ಣ, ಶ್ರೀ ವೇಣುಗೋಪಾಲ ಆಂಜನೇಯ ಮಂತ್ರಾಲಯ ಬೊಳುವಾರು,ಶ್ರೀ ಅವಿನಾಶ್ ಪುರುಷರ ಕಟ್ಟೆ , ಶ್ರೀ ಗೀತೇಶ್ ರೈ,ಶ್ರೀ ಗೋಪಾಲ ವಿಟ್ಲ ಶ್ರೀ ರಾಜೇಶ್, ಶ್ರೀ ಶ್ರೀಧರ ಶ್ರೀ ಜಯರಾಮ ರೈ, ಶ್ರೀ ಹರಿಪ್ರಸಾದ್ ಶೆಟ್ಟಿ, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ದೇಜಪ್ಪ ಗೌಡ, ಶ್ರೀ ಚಂದ್ರಶೇಖರ್ ಪಣಿತೋಟ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು