Friday, September 20, 2024
ಬೆಂಗಳೂರುಸಿನಿಮಾಸುದ್ದಿ

Bigg Boss Kannada 11: ದೊಡ್ಮನೆ ಆಫರ್‌ ಬಗ್ಗೆ ಜ್ಯೋತಿ ರೈ ಪ್ರತಿಕ್ರಿಯೆ – ಕಹಳೆ ನ್ಯೂಸ್

ನ್ನಡದ ನಟಿ ಜ್ಯೋತಿ ರೈ  ಇದೀಗ ಕಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಬಿಗ್ ಬಾಸ್  ಆಫರ್ ಬಗ್ಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ ರಿಯಾಕ್ಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಕನ್ನಡ ‘ಬಿಗ್ ಬಾಸ್’ ಶೋನಲ್ಲಿ ಸ್ಪರ್ಧಿಸುವ ಬಗ್ಗೆ ಅನೇಕರು ನನ್ನನ್ನು ಕೇಳ್ತಿದ್ದಾರೆ. ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಿತ್ತು. ನಾನು ಅದನ್ನು ಗೌರವದಿಂದಲೇ ತಿರಸ್ಕರಿಸಿದ್ದೇನೆ. ಈ ಮೊದಲೇ ನಾನು ಕೆಲವು ಕೆಲಸಗಳನ್ನು ಒಪ್ಪಿಕೊಂಡಿದ್ದೇನೆ. ಹೀಗಾಗಿ ಆಫರ್ ತಿರಸ್ಕರಿಸಿದ್ದೇನೆ. ಅವಕಾಶಕ್ಕಾಗಿ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಸದಾ ಚಿರಋಣಿ ಎಂದು ಜ್ಯೋತಿ ರೈ ಬರೆದಿದ್ದಾರೆ.

ಜಾಹೀರಾತು

ಇತ್ತೀಚೆಗೆ ನಟಿಯ ಅಶ್ಲೀಲ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ನನ್ನದಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಬಳಿಕ ಕಿಡಿಗೇಡಿಗಳ ವಿರುದ್ಧ ಠಾಣೆಮೆಟ್ಟಿಲೇರಿದ್ದರು.

ಅಂದಹಾಗೆ, ಜೋಗುಳ, ಕಿನ್ನರಿ, ಜೋಕಾಲಿ ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಅದಷ್ಟೇ ಅಲ್ಲ, ತೆಲುಗು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಜ್ಯೋತಿ ರೈ ಬಣ್ಣ ಹಚ್ಚಿದ್ದಾರೆ.