ಬಾಂಗ್ಲಾದೇಶ : ಹೀನಾಯ ಸ್ಥಿತಿಗೆ ತಲುಪಿದ ಬಾಂಗ್ಲಾದೇಶಿ ಹಿಂದೂಗಳು..!! ದೇವಸ್ಥಾನಗಳ ಮೇಲೆ ಜಿಹಾದಿ ದಾಳಿ ; ಹಿಂದುಗಳ ನರಸಂಹಾರ – ಕಹಳೆ ನ್ಯೂಸ್
ಢಾಕಾ (ಬಾಂಗ್ಲಾದೇಶ) – ಪ್ರಧಾನಮಂತ್ರಿ ಶೇಖ ಹಸೀನಾ ಅವರು ಪಲಾಯನ ಮಾಡಿದ ನಂತರ ಇಲ್ಲಿಯವರೆಗೆ ಬಾಂಗ್ಲಾದೇಶದ ೪೩ ಜಿಲ್ಲೆಗಳಲ್ಲಿನ ದೇವಸ್ಥಾನಗಳ ಮೇಲೆ ದಾಳಿಗಳು ನಡೆದಿವೆ.
ಅಲ್ಲಿನ ಹಿಂದೂಗಳ ಪರಿಸ್ಥಿತಿ ಬಹಳ ಭಯಾನಕವಾಗಿದೆ. ಅಲ್ಲಿಯ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಸನಾತನ ಪ್ರಭಾತಕ್ಕೆ ಅಲ್ಲಿಯ ಪ್ರತ್ಯಕ್ಷ ಸ್ಥಿತಿಯ ಮಾಹಿತಿ ನೀಡುವ ಎರಡು ವರದಿಗಳನ್ನು ಕಳುಹಿಸಿದ್ದಾರೆ. ಭಾರತ ಮತ್ತು ವಿದೇಶದಲ್ಲಿನ ಮಾಧ್ಯಮಗಳು ಪ್ರಸಾರ ಮಾಡಲು ಹಿಂಜರಿಯುವ ಬಹಳಷ್ಟು ಮಾಹಿತಿ ನಮ್ಮ ಕೈ ಸೇರಿದೆ.
ಈ ವರದಿಯ ಪ್ರಕಾರ ಅಲ್ಲಿನ ಜಿಹಾದಿ ದಾಳಿಕೋರರು ದೇಶದಲ್ಲಿನ ೨೭ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರದಲ್ಲಿ ೫೦ಕ್ಕೂ ಹೆಚ್ಚು ಪೊಲೀಸರನ್ನು ಹತ್ಯೆ ಮಾಡಲಾಗಿದ್ದು ಒಟ್ಟು ೪೬೦ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಪತ್ಕಾಲದ ಪರಿಸ್ಥಿತಿಯಿಂದಾಗಿ ನಿಖರವಾದ ಮೃತರ ಸಂಖ್ಯೆ ತಿಳಿಯಲು ಸಾಧ್ಯವಾಗಿಲ್ಲ.
ಅಂತರ್ವಸ್ತ್ರ ತೆಗೆದು ಹಿಂದೂ ಅಥವಾ ಮುಸಲ್ಮಾನ ಎಂಬುದರ ಪರಿಶೀಲನೆ; ಹಿಂದೂ ಆಗಿದ್ದರೆ ದಾಳಿ !
ಈ ವರದಿಯ ಪ್ರಕಾರ ಕೆಲ ಜಿಲ್ಲೆಗಳಲ್ಲಿ ಜಿಹಾದಿ ಪ್ರತಿಭಟನಾಕಾರರು ಪುರುಷರನ್ನು ಕೊಲ್ಲುವ ಮುನ್ನ ಅವರ ಅಂತರ್ವಸ್ತ್ರಗಳನ್ನು ಪರೀಕ್ಷಿಸಿ ಅವರು ಹಿಂದೂ ಅಥವಾ ಮುಸಲ್ಮಾನ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.(ಮುಸಲ್ಮಾನರು ‘ಸುಂತಾ’ ಮಾಡಿಸಿಕೊಂಡಿರುತ್ತಾರೆ) ಹಿಂದೂಗಳಾಗಿದ್ದರೆ ಅವರನ್ನು ಸಾಯಿಸುವ ಪ್ರಯತ್ನ ನಡೆಯುತ್ತಿದೆ. ಈ ರೀತಿಯ ಘಟನೆಗಳು ಜತ್ರಾಬಾರಿ, ಬಡ್ಡ, ವಾತಾರ, ಮಹಮದಪುರ , ಅದಾಬೋರ್, ಮೀರಪುರ, ಪಲಟನ್, ಶಾಹ ಅಲಿ ಮತ್ತು ಉತ್ತರ ಪೂರ್ವ ಈ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆದಿವೆ ಎಂದು ಅಲ್ಲಿನ ಮಾಧ್ಯಮಗಳು ಹೇಳಿವೆ. ಒಟ್ಟಾರೆಯಾಗಿ, ಅಲ್ಲಿನ ಹಿಂದುಗಳನ್ನು ಹುಡುಕಿ ಹುಡುಕಿ ಸಾಯಿಸುವ ಘಟನೆಗಳು ನಡೆಯುತ್ತಿವೆ.
ಓರ್ವ ಹಿಂದೂ ಪೊಲೀಸ್ ಅಧಿಕಾರಿಯ ಹತ್ಯೆ; ಮೃತ ದೇಹವನ್ನು ಮರದ ಮೇಲೆ ನೇತುಹಾಕಿದ ಜಿಹಾದಿಗಳು !
ಓರ್ವ ಹಿಂದೂ ಪೊಲೀಸ್ ಅಧಿಕಾರಿಯು ರಕ್ಷಣೆಗಾಗಿ ಪೊಲೀಸ್ ಠಾಣೆಯೊಂದರಲ್ಲಿ ಆಶ್ರಯ ಪಡೆದಿದ್ದಾಗ ಸೈನ್ಯದ ವಾಹನ ಬಳಸಿ ಅವರನ್ನು ಅಲ್ಲಿಂದ ಹೊರತೆಗಲಾಯಿತು ಮತ್ತು ಅದರ ನಂತರ ಜಿಹಾದಿಗಳು ಅವರ ಹತ್ಯೆ ಮಾಡಿ ಅವರ ಮೃತ ದೇಹವನ್ನು ಮರದ ಮೇಲೆ ನೇತುಹಾಕಿದರು.
ಆಗಸ್ಟ್ ೫ ರಂದು ಹಿಂದುಗಳ ಮೇಲೆ ಜಿಹಾದಿಗಳು ನಡೆಸಿದ ದಾಳಿಯ ವಿವರ :
೧. ಶ್ರೀ ಬೋರ್ದಿ ಉಪಜಿಲ್ಲೆ, ಜಿಲ್ಲಾ ಶೇರಪುರ: ಸುಮನ್ ಎಂಬ ಹಿಂದೂ ನಾಯಕನ ಮನೆಯ ಮೇಲೆ ದಾಳಿ ನಡೆಸಿ, ಮನೆಯ ಲೂಟಿ ಮಾಡಲಾಯಿತು.
೨. ಹೈಸಗತಿ, ರೂಪಶಾ, ಜಿಲ್ಲಾ ಶೆರಪುರ್: ಶಾಮಲ ಕುಮಾರ ದಾಸ್ ಮತ್ತು ಸಜನ ಕುಮಾರ ದಾಸ್ ಎಂಬ ಇಬ್ಬರು ಹಿಂದುಗಳ ಮನೆಯ ಲೂಟಿ ಮಾಡಿ ಮನೆಗೆ ಬೆಂಕಿ ಹಚ್ಚಲಾಯಿತು.
೩. ತುಟಪಾರ, ಜಿಲ್ಲೆ ಖುಲನಾ: ಬಿಮನ್ ಬಿಹಾರಿ ಮತ್ತು ಅನಿಮೇಶ ಸರಕಾರ ರಿಂಟೂ ಎಂಬವರ ಮನೆಗಳು ಲೂಟಿ ಮಾಡಿ ಮನೆಯನ್ನು ನೆಲಸಮ ಮಾಡಲಾಯಿತು .
೪. ದಾಕೋಪ, ಬನಿಶಂತರ, ಜಿಲ್ಲಾ ಖುಲನಾ: ಸ್ಥಳೀಯ ಸರಕಾರಿ ಪರಿಷತ್ತಿನ ಸದಸ್ಯರಾಗಿರುವ ಜಯಂತೋಗೇನ್ ಅವರ ಮೇಲೆ ದಾಳಿ ನಡೆಸಲಾಯಿತು. ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಅವರ ಮನೆಯ ಲೂಟಿ ಮಾಡಿ ನೆಲಸಮಗೊಳಿಸಲಾಯಿತು.
೫. ಫುಲತಾಲಾ, ಜಿಲ್ಲಾ ದಿನಾಜಪುರ: ದೇವಸ್ಥಾನದ ಭೂಮಿಯನ್ನು ವಶಕ್ಕೆ ಪಡೆದ ಸ್ಥಳೀಯ ಮುಸಲ್ಮಾನರು.
೬. ಪರ್ವತಿಪುರ, ಜಿಲ್ಲಾ ದಿನಾಜಪುರ: ಹಿಂದುಗಳ ೫ ದೇವಸ್ಥಾನಗಳನ್ನು ಧ್ವಂಸಗೊಳಿಸಿದರು ಮತ್ತು ಹಿಂದುಗಳ ಮೇಲೆ ಹಲ್ಲೆ ಮಾಡಿದ ಮುಸಲ್ಮಾನರು.
೭. ನೋರಶಿಂಡಿ, ಕಾಲಿಬಾರಿ: ಡಾ. ದೀಪೊಕ್ ಸಾಹಾ ಅವರ ಮೇಲೆ ಮುಸಲ್ಮಾನ ಗುಂಪಿನಿಂದ ದಾಳಿ ಮತ್ತು ಅನೇಕ ಹಿಂದೂ ಕುಟುಂಬಗಳ ಲೂಟಿ.
೮. ಚಂದ್ರಗಂಜ , ಲಕ್ಷ್ಮಿಪುರ : ಶ್ರೀ ಗೌತಮ ಸಾಕಾ ಅವರ ಮೇಲೆ ದಾಳಿ ಮತ್ತು ಅವರ ಮನೆಯ ಲೂಟಿ. ದಾಳಿಯಲ್ಲಿ ಗೌತಮ ಅವರಿಗೆ ಗಂಭೀರ ಗಾಯ.
೯.ಆಗರಪುರ, ಹುಲಿಯಾ ಚೋರ್, ಕಿಶೋರಗಾಂಜ : ಗ್ರಾಮದಲ್ಲಿನ ನುಕುಲ ಕುಮಾರ ಮತ್ತು ಸುಶಾಂತದಾಸ ಎಂಬವರ ಮೇಲೆ ದಾಳಿ. ಸಂಪೂರ್ಣ ಗ್ರಾಮವನ್ನೇ ಲೂಟಿ ಮಾಡಿದ ಮತಾಂಧರು.
೧೦. ರೌಸನ್, ಜಿಲ್ಲಾ ಚಟಗಾವ್ : ಉಜ್ವಲ ಚಕ್ರವರ್ತಿ ಎಂಬವರ ಮೇಲೆ ದಾಳಿ, ಗಾಯಗೊಂಡ ಉಜ್ವಲ. ಅವರ ಮನೆಯ ಲೂಟಿ.
೧೧.ಧೋಪಡಿ, ಪಾಲಪಾರಾ, ಅವಾಯಿನಗರ : ಈ ಗ್ರಾಮದಲ್ಲಿನ ೩ ಹಿಂದೂ ಕುಟುಂಬಗಳ ಮೇಲೆ ದಾಳಿ, ಮನೆಗಳ ಲೂಟಿ.
೧೨. ಬಬಲು ಸಾಹಾ , ಗ್ರಾಮ ನರಿಕಲ್ ಬಾರಿಯಾ, ಬಾಗಾರಪಾರಾ , ಜೇಸೋರ : ಸ್ಥಳೀಯ ಸರಕಾರದ ಹಿಂದೂ ಅಧ್ಯಕ್ಷರ ಮೇಲೆ ದಾಳಿ ಮತ್ತು ಅವರ ಮನೆಯಲ್ಲಿನ ಎಲ್ಲಾ ವಸ್ತುಗಳು ಲೂಟಿ ಮಾಡಿದ ಮುಸ್ಲಿಮರು.
೧೩. ಪದಮಪುಕುರ , ಝೀಕರಗಾಚಾ , ಜೇಸೋರ : ಕುಮಾರಚಂದ್ರ ದಾಸ ಅವರ ಮನೆಯ ಲೂಟಿ ಮಾಡುವ ಮೊದಲು ಅವರ ಮೇಲೆ ದಾಳಿ, ದಾಸ ಅವರಿಗೆ ಗಾಯ.
೧೪. ಕೋಲಾರುಯಾ, ಸಾತಖೀರಾ : ಡಾ ಸುಬ್ರತ ಘೋಷ್ ಮತ್ತು ಬಿಸ್ವಜಿತ್ ಸಾಧು ಅವರ ಮೇಲೆ ದಾಳಿ. ನಂತರ ಅವರ ಮನೆಗಳ ಲೂಟಿ.
೧೫.ಶಾಯಸ್ಥಗಂಜ , ಹಬಿಗಂಜ : ಆಸೀತ ಕುಮಾರ ಬರನ ಎಂಬವರ ಮೇಲೆ ದಾಳಿ.
ಆಗಸ್ಟ್ ೫ ರಂದು ದಾಳಿಗೊಳಗಾದ ಹಿಂದೂ ಬಹುಸಂಖ್ಯಾತ ಗ್ರಾಮಗಳು !
ಕೈರಾ, ದಸಪಾಡ, ( ಜಿಲ್ಲ ಖುಲನಾ ) : ಸತಾಬಗಂಜ , ಬೋಚಾಗಂಜ, (ಜಿಲ್ಲಾ ಡಿನಾಜಪುರ) ; ಧಲ್ಲಾ, ಚಿರೀರಬಂದರ , ಕಸಾಬಪುರ, ಜೇಸೋರ , ಲೋಹಾಗೊರಾ , ನೋರಾಯಿಲ್ ಈ ಹಿಂದೂ ಬಹು ಸಂಖ್ಯಾತರಿರುವ ಗ್ರಾಮದಲ್ಲಿನ ಹಿಂದುಗಳ ಮೇಲೆ ದಾಳಿ ನಡೆಸಲಾಯಿತು ಹಾಗೂ ಅವರ ಮನೆಗಳನ್ನು ಲೂಟಿ ಮಾಡಲಾಯಿತು. |
ಆಗಸ್ಟ್ ೬ ರಂದು ಹಿಂದುಗಳ ಮೇಲೆ ಜಿಹಾದಿಗಳು ನಡೆಸಿದ ದಾಳಿಯ ವಿವರ:
ಚಟಗಾವ ಜಿಲ್ಲೆ
೧. ಬಜಾಲಿಯ ಗ್ರಾಮದಲ್ಲಿನ ತಪಶಕಾಂತಿ ದತ್ತ ಅವರ ಮೇಲೆ ದಾಳಿ ಹಾಗೂ ಅವರ ಮನೆ ಲೂಟಿ.
೨. ಇಂಜಿನಿಯರ್ ಲಿಖನದಾಸ ಅವರ ಮೇಲೆ ದಾಳಿ, ಹಾಗೂ ಅವರ ಔಷಧಿ ಅಂಗಡಿ ಧ್ವಂಸಗೊಳಿಸಿ ಲೂಟಿ.
೩. ಭಾಸಖಲಿದಲ್ಲಿನ ಸೌರಭ ನಾಥ ಅವರ ಮೇಲೆ ದಾಳಿ ನಡೆಸಿ ಅವರ ಕಂಪ್ಯೂಟರ್ ಅಂಗಡಿಯ ಲೂಟಿ.
೪. ಪೋಟೆಂಗ ವಾಸಿ ಕಾಜಾ ಕಾಂತಿ ಲೋಡ್ ಎಂಬವರ ಮೇಲೆ ದಾಳಿ !
೫. ಸದರ ಚಕಬಜಾರ ಸಹಿತ ಎರಡು ಹಿಂದೂ ಗ್ರಾಮಗಳ ಮೇಲೆ ದಾಳಿ ನಡೆಸಿ ಲೂಟಿ.
ದೀನಾಪುರ ಜಿಲ್ಲೆ
೧. ದೇಬಶಿಷ ಭಟ್ಟಾಚಿಯಾ, ವಿಕಾಸ ಚಕ್ರವರ್ತಿ ಮತ್ತು ಸಂಜೀವ ವಿಶ್ವಾಸ ಸಹಿತ ೧೭ ಹಿಂದು ಕುಟುಂಬಗಳ ಮೇಲೆ ದಾಳಿ. ದಾಳಿಗೊಳಗಾದವರ ಸ್ಥಿತಿ ಚಿಂತಾಜನಕ. ಮತಾಂಧ ಗುಂಪಿನಿಂದ ದೇವಸ್ಥಾನ ಧ್ವಂಸ ಮತ್ತು ಅಲ್ಲಿನ ವಸ್ತುಗಳು ಲೂಟಿ.
೨. ಮೈಮನಸಿಂಹದ ಗೌರಿಪುರ ಗ್ರಾಮದ ಪ್ರದೀಪ್ ದೇವನಾಥ ಅವರ ಮೇಲೆ ದಾಳಿ ನಡೆಸಿ ಅವರ ಅಂಗಡಿ ಧ್ವಂಸ. ತಾರಕಾಂಡ ಮತ್ತು ಮೈಮನಸಿಂಹ ಸದರ ಈ ಎರಡು ಗ್ರಾಮಗಳ ಮೇಲೆ ದಾಳಿ ನಡೆಸಿ ಜನರ ಲೂಟಿ.
ಬೋಗರಾ ಜಿಲ್ಲೆ
ಭವಾನಿಪುರ ಶಕ್ತಿಪೀಠ, ಬಿರಗಾಚಾ, ಮಧುಪುರ, ಶಿವಗಂಜ ಸುತ್ತಲಿನ ಅನೇಕ ಹಿಂದೂ ಗ್ರಾಮಗಳ ಮೇಲೆ ದಾಳಿ ನಡೆಸಿ ಲೂಟಿ.
ಫರೀದಪುರ್ ಜಿಲ್ಲೆ
ಕೃಷ್ಣಾಪುರ, ಗಂಗಾಮಾರಿ ಸದರ, ಮದುಕಲಿ ಎಂಬಲ್ಲಿ ಮತಾಂಧ ಗುಂಪಿನಿಂದ ಹರಿತವಾದ ಶಸ್ತ್ರಗಳಿಂದ ೩ ಹಿಂದೂ ಬಹು ಸಂಖ್ಯಾತ ಗ್ರಾಮಗಳ ಮೇಲೆ ದಾಳಿ. ಅನೇಕ ಜನರಿಗೆ ಗಾಯಗೊ ಮತ್ತು ಮನೆಗಳ ಲೂಟಿ.
ಫಿರೋಜಪುರ್ ಜಿಲ್ಲೆ
ರಾಯರಕಾಠಿ, ಗೋಪಾಲಪುರ, ಫಿರೋಜಪುರ್ ಸದರ, ನಸಿರಪುರ್ ಮತ್ತು ಶ್ರೀರಾಮ ಕಾಠಿ ಈ ೪ ಹಿಂದೂ ಬಹುಸಂಖ್ಯಾತ ಗ್ರಾಮಗಳ ಮೇಲೆ ದಾಳಿ; ಅಲ್ಲಿನ ನಾರಾಯಣ ರೇ ಚೌದರಿ, ಗೋಪಾಲ ಚಂದ್ರ ಬಸು, ದಿಲೀಪ ಕುಮಾರ ಮಿಧಾ ಜೊತೆಗೆ ಅನೇಕ ಹಿಂದುಗಳಿಗೆ ಗಾಯ.
ಮಾಣಿಕಗಂಜ ಜಿಲ್ಲೆ
ವಾಲುಕಾ, ಗೋಫೋರಗಾವ ನಲ್ಲಿನ ಮಾಣಿಕ ಕುಮಾರ ನಂದಿ ಅವರ ಮೇಲೆ ದಾಳಿ; ಅಲ್ಲಿನ ಹಿಂದು ಗ್ರಾಮಗಳ ಲೂಟಿ, ಅನೇಕ ಜನರಿಗೆ ಗಾಯ.
ಜೆಸೋರ ಜಿಲ್ಲೆ
ಮಣಿರಾಮಪುರ, ಕಸಬಾಪುರ, ಅವಾಯನಗರ , ಬಾಗರಪಾರ ಮತ್ತು ಝಿಕರಗಾಛಾ ನಲ್ಲಿರುವ ಹಿಂದೂ ಕುಟುಂಬಗಳ ಮೇಲೆ ದಾಳಿ; ಮನೆ- ಅಂಗಡಿಗಳ ಲೂಟಿ ಮಾಡಿ ಬೆಂಕಿ.
ಆಗಸ್ಟ್ ೭ ರಂದು ನಡೆದ ಹಿಂದುಗಳ ನರಸಂಹಾರ !
ಅ. ಕನಿಷ್ಠ ೬ ಮಂದಿ ಹಿಂದುಗಳ (ಹರಧನ ರಾಯ, ಕಾಜಲ ರಾಯ, ಮೃಣಾಲ ಕಾಂತಿ ಚಟರ್ಜಿ, ವಾಸುದೇವ ದಾಸ, ಸಂತೋಷ ಕುಮಾರ ಮತ್ತು ಓರ್ವ ಅಪರಿಚಿತ ವ್ಯಕ್ತಿ) ಹತ್ಯೆ ಮಾಡಲಾಯಿತು. ಆ. ಕನಿಷ್ಠ ೩ ಹಿಂದೂ ಹುಡುಗಿಯರ ಅಪಹರಣ; ೨ ಹಿಂದೂ ಹುಡುಗಿಯರ ಮೇಲೆ ಬಲಾತ್ಕಾರ. ಇ. ೬೧ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳ ವಿಧ್ವಂಸ, ಲೂಟಿ ಮತ್ತು ಬೆಂಕಿ! ಈ.೨೬೫ಕ್ಕೂ ಹೆಚ್ಚು ಹಿಂದೂ ಮನೆಗಳ ಧ್ವಂಸ ಮತ್ತು ಲೂಟಿ ! ಉ.೧೬೩ಕ್ಕೂ ಹೆಚ್ಚು ಹಿಂದೂ ಅಂಗಡಿಗಳ ಧ್ವಂಸ, ಲೂಟಿ ಮತ್ತು ಬೆಂಕಿ ! ಊ. ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ೧ ಕೋಟಿ ೩೧ ಲಕ್ಷ ಹಿಂದುಗಳು ಸದ್ಯ ಭಯಭೀತರಾಗಿದ್ದಾರೆ. ಹಿಂದೂಗಳ ಮೇಲಿನ ದಾಳಿಯ ಪ್ರಮಾಣವು ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. |