ಆಗಸ್ಟ್ 10 ರಂದು ವಯನಾಡಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ; ವೈಮಾನಿಕ ಸಮೀಕ್ಷೆ – ಕಹಳೆ ನ್ಯೂಸ್
ಕಾಣೆಯಾದವರ ಪಟ್ಟಿ ಸಿದ್ಧ: ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳಲ್ಲಿ ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾದವರ ನಿಖರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಕೇರಳ ಸರ್ಕಾರ ಹೇಳಿದೆ. ಅವರಲ್ಲಿ ಕೆಲವರು ಅಥವಾ ಹೆಚ್ಚಿನವರು ಮೃತಪಟ್ಟಿಬಹುದು ಎಂದು ಭಯಪಡಲಾಗಿದೆ.
ಮೃತರ ಕುಟುಂಬಗಳು ಮತ್ತು ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒತ್ತಾಯಿಸಿದ ಒಂದು ದಿನದ ನಂತರ ಮೋದಿ ಅವರ ಭೇಟಿ ನಿಗದಿಯಾಗಿದೆ.
ಕೇಂದ್ರ ಸಚಿವರ ಹೇಳಿಕೆಗೆ ಆಕ್ರೋಶ: ಕೇರಳ ಸರ್ಕಾರ ಅರಣ್ಯ ಪ್ರದೇಶದಲ್ಲಿ ಅಕ್ರಮ ವಸತಿ ನಿರ್ಮಾಣ ಮತ್ತು ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದು, ಅನಾಹುತಕ್ಕೆ ಸರ್ಕಾರವೇ ಕಾರಣ ಎಂಬ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಆರೋಪಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕೇರಳ ಸಿಎಂ ತಿರುಗೇಟು: ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದುರಂತದ ಹಿಂದಿನ ದಿನ ವಯನಾಡಿನಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇಂದ್ರ ಜಲ ಆಯೋಗ ಮತ್ತು ಜೆಎಸ್‌ಐ (ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ) ಪ್ರವಾಹ ಅಥವಾ ಭೂಕುಸಿತದ ಸೂಚನೆ ನೀಡಿಲ್ಲಎಂದು ಹೇಳಿದ್ದರು. ಕೇಂದ್ರ ಸಚಿವರು, ʻಮೃತರು ಮತ್ತು ಕಾಣೆಯಾದವರನ್ನು ಅಕ್ರಮ ನಿವಾಸಿಗಳು ಎಂದು ನಿಂದಿಸಿದ್ದಾರೆ,ʼ ಎಂದು ಸಿಎಂ ದೂರಿದರು.