Sunday, January 19, 2025
ಸುದ್ದಿ

ಮತ್ತೊಮ್ಮೆ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಸಂಹಾರ ?’ ಮೀಸಲಾತಿಯ ಪ್ರತಿಭಟನೆಯ ಹೆಸರಿನಲ್ಲಿ ಬಾಂಗ್ಲಾದೇಶದಿಂದ ಹಿಂದುಗಳನ್ನು ಓಡಿಸುವ ಜಿಹಾದಿ ಷಡ್ಯಂತ್ರ; ಭಾರತ ಹಿಂದೂಗಳನ್ನು ರಕ್ಷಿಸಬೇಕು ! – ದೀಪೆನ ಮಿಶ್ರ, ಬಾಂಗ್ಲಾದೇಶ-ಕಹಳೆ ನ್ಯೂಸ್

ಬಾಂಗ್ಲಾದೇಶದಲ್ಲಿನ ವಿದ್ಯಾರ್ಥಿಗಳ ಪ್ರತಿಭಟನೆ ಬಾಂಗ್ಲಾದೇಶದ ಪ್ರಧಾನಿ ಮತ್ತು ಅಲ್ಲಿಯ ಎಲ್ಲಾ ಹಿಂದುಗಳನ್ನು ದೇಶದಿಂದ ಓಡಿಸಲು ರಚಿಸಿರುವ ಪೂರ್ವ ನಿಯೋಜಿತ ಷಡ್ಯಂತ್ರವಾಗಿದೆ. ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಯ ಹಿಂದೆ ಪಾಕಿಸ್ತಾನಿ ಗುಪ್ತಚರ ಸಂಘಟನೆ ಐ ಎಸ್ ಐ, ಚೀನಾ ಮತ್ತು ಅಮೆರಿಕ ಇವುಗಳ ಕೈವಾಡವಿದೆ. ಇದು ಬಾಂಗ್ಲಾದೇಶದಲ್ಲಿ ಅಸ್ಥಿರತೆ ನಿರ್ಮಿಸುವ ಪ್ರಯತ್ನವಾಗಿದೆ. ಆದ್ದರಿಂದ ನಾವು ಭಾರತ ಸರಕರಕ್ಕೆ ಬಾಂಗ್ಲಾದೇಶದ ಹಿಂದೂಗಳಿಗೆ ತಕ್ಷಣ ರಕ್ಷಿಸಲು ವಿನಂತಿಸುತ್ತೇವೆ, ಎಂದು ಢಾಕಾ, ಬಾಂಗ್ಲಾದೇಶ ನ ವರ್ಲ್ಡ್ ಹಿಂದೂ ಫೆಡರೇಶನ್ ಬಾಂಗ್ಲಾದೇಶ ಮತ್ತು ಯುರೋಪಿಯನ್ ಯೂನಿಯನ್ ಚಾಪ್ಟರ್ ನ ಪ್ರಧಾನ ಸಚಿವ ಶ್ರೀ ದೀಪೆನ ಮಿಶ್ರ ಇವರು ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ಆಯೋಜಿಸಿದ್ದ ಚರ್ಚಾ ಹಿಂದೂ ರಾಷ್ಟ್ರ ಕಿ ಈ ವಿಶೇಷ ಸಂವಾದದಲ್ಲಿ ‘ಮತ್ತೊಮ್ಮೆ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಸಂಹಾರ ?’ ಈ ವಿಷಯದ ಕುರಿತು ಮಾತನಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಶ್ರೀ. ದೀಪೆನ ಮಿಶ್ರ ಮಾತು ಮುಂದುವರಿಸಿ, ಬಾಂಗ್ಲಾದೇಶದಲ್ಲಿ ೨.೫ ಕೋಟಿ ಹಿಂದೂಗಳಿದ್ದಾರೆ; ಆದರೆ ಹಿಂದೂಗಳು ಸುರಕ್ಷಿತವಾಗಿಲ್ಲ. ಹಿಂದುಗಳಿಗೆ ಯಾವುದೇ ರೀತಿಯ ನ್ಯಾಯ ದೊರೆಯುತ್ತಿಲ್ಲ. ಬಾಂಗ್ಲಾದೇಶದ ಸರಕಾರ, ನಾಯಕರು ಅಥವಾ ಸೈನ್ಯ ಇವರಿಂದ ಹಿಂದುಗಳಿಗೆ ಯಾವುದೇ ರೀತಿಯ ಸಹಾಯ ದೊರೆಯುವದಿಲ್ಲ. ಇತರ ವಿಷಯಗಳಲ್ಲಿ ಮಾನವೀಯತೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ವಿಶ್ವಸಂಸ್ಥೆ, ಮಾನವಾಧಿಕಾರ ಸಂಘಟನೆಗಳು ಎಷ್ಟೊಂದು ಕೂಗಾಡುತ್ತವೆ ? ಆದರೆ ಇಲ್ಲಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ನಡೆಯುತ್ತಿದ್ದರೂ ಹಿಂದುಗಳಿಗಾಗಿ ಯಾರು ಏನು ಮಾತನಾಡುವುದಿಲ್ಲ. ಕಾರಣ ಅವರಿಗಾಗಿ ಹಿಂದೂಗಳು ಮನುಷ್ಯರೇ ಅಲ್ಲ. ಆದ್ದರಿಂದ ನಾವು ಭಾರತ ಸರಕಾರಕ್ಕೆ ಬಾಂಗ್ಲಾದೇಶದಲ್ಲಿನ ಹಿಂದುಗಳಿಗೆ ತಕ್ಷಣ ರಕ್ಷಿಸಲು ವಿನಂತಿಸುತ್ತೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಂಗ್ಲಾದೇಶದ ಹಿಂದುಗಳನ್ನು ರಕ್ಷಿಸಲು ಆಗ ಭಾರತವು ದಿಟ್ಟ ಹೆಜ್ಜೆ ಇಡಬೇಕು !
ಪಶ್ಚಿಮ ಬಂಗೇರ ಜನ್ಯದ ಸಂಸ್ಥಾಪಕ ಸಚಿವ ಶ್ರೀ. ಪ್ರಕಾಶ ದಾಸ ಇವರು, 1972 ರಲ್ಲಿ ಯಾವ ಇಸ್ಕಾನ್ ದೇವಸ್ಥಾನದಿಂದ ಬಾಂಗ್ಲಾದೇಶದಲ್ಲಿನ ಜನರಿಗೆ ಆರು ತಿಂಗಳ ಭೋಜನ ನೀಡಿತು. ಅದೇ ಜನರು ಈ ಪ್ರತಿಭಟನೆಯಲ್ಲಿ ಅದೇ ಇಸ್ಕಾನ್ ದೇವಸ್ಥಾನ ಸುಟ್ಟರು. ೧೯೭೧ ರಲ್ಲಿ ಭಾರತವು ಸೈನ್ಯದ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿತು. ಆ ಸಮಯದಲ್ಲಿ ೨೫ ಲಕ್ಷ ಹಿಂದುಗಳನ್ನು ಕೊಲ್ಲಲಾಯಿತು ಮತ್ತು ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆದವು. ಇಂದು ಅದೇ ರೀತಿ ನಡೆಯುತ್ತಿದೆ. ವಿದ್ಯಾರ್ಥಿ ಪ್ರತಿಭಟನೆ ಇದು ಮುಖವಾಡವಿದೆ. ನಿಜ ಎಂದರೆ ಈ ಪ್ರತಿಭಟನೆಯ ಮರೆಯಲ್ಲಿ ಇದು ಜಿಹಾದಿಗಳ ಷಡ್ಯಂತ್ರವಾಗಿದೆ. ಬಾಂಗ್ಲಾದೇಶದಲ್ಲಿನ ಹಿಂದುಗಳಿಗೆ ನ್ಯಾಯ ಒದಗಿಸಲು ಭಾರತವು ಮುಂದಡಿ ಇಡಬೇಕು. ಇಸ್ರೇಲ್ ಹೇಗೆ ಸ್ವಂತ ದೇಶ ಮತ್ತು ಧರ್ಮಕ್ಕಾಗಿ ಹೋರಾಡುತ್ತಿದೆ ಹಾಗೆ ನಾವು ಕೂಡ ಸ್ವರಕ್ಷಣೆಗಾಗಿ ಕೈಗೆ ಶಸ್ತ್ರ ಎತ್ತಿಕೊಳ್ಳುವುದು ಆವಶ್ಯಕವಾಗಿದೆ. ಭಾರತ ಬಾಂಗ್ಲಾದೇಶದಲ್ಲಿನ ಹಿಂದುಗಳನ್ನು ರಕ್ಷಿಸಬೇಕೆಂದಾದರೆ ಅದು ದೃಢವಾದ ಕಠಿಣ ಕ್ರಮ ಕೈಗೊಳ್ಳಬೇಕು. ಜಗತ್ತು ಏನು ಹೇಳುತ್ತದೆ ? ಈ ಯೋಚನೆಯನ್ನು ಬಿಟ್ಟು ದೃಢವಾದ ಕೃತಿ ಮಾಡುವುದು ಆವಶ್ಯಕವಾಗಿದೆ, ಎಂದು ಕೂಡ ಅವರು ಸ್ಪಷ್ಟಪಡಿಸಿದರು.