Sunday, January 19, 2025
ಅಂತಾರಾಷ್ಟ್ರೀಯಕೊಡಗುಕ್ರೀಡೆಮಡಿಕೇರಿಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್‌ನ ಓಟದ ಸ್ಪರ್ಧೆಯಲ್ಲಿ ಭರವಸೆ ಹೆಚ್ಚಿದ ಕೊಡಗಿನ ರಾಣಿ ಎಂ.ಆರ್. ಪೂವಮ್ಮ – ಕಹಳೆ ನ್ಯೂಸ್

ಮಚ್ಚೆಟ್ಟಿರ ರಾಜು ಪೂವಮ್ಮ (ಎಂ.ಆರ್. ಪೂವಮ್ಮ) ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತೀಯ ಅತ್ಲೆಟಿಕ್ಸ್ ಪ್ರಪಂಚದ ಚಿರಪರಿಚಿತ ಹೆಸರು.

ಕೊಡಗಿನ ಗೋಣಿಕೊಪ್ಪದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಪೂವಮ್ಮ, ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಹೈಸ್ಕೂಲು ದಿನಗಳಿಂದ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿಕೊಂಡು, ಪ್ರಾರಂಭದಲ್ಲಿ 100 ಮೀ. ಆನಂತರ, 400 ಮೀ. ಓಟದಲ್ಲಿ ರಾಜ್ಯ, ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರಂಭದಿಂದಲೂ ಸೂಕ್ತ ಪ್ರೋತ್ಸಾಹದ ಕೊರತೆ ಇದ್ದುದರಿಂದ ಪೂವಮ್ಮ ಅವರಿಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಸರಕಾರದ ಅತ್ಯಂತ ಸೀಮಿತ ಪ್ರೋತ್ಸಾಹದ ಹೊರತಾಗಿಯೂ ಮೂರು ಏಶ್ಯನ್ ಗೇಮ್ಸ್ ಚಿನ್ನದ ಪದಕ, ಒಂದು ಸೌತ್ ಏಶ್ಯನ್ ಗೇಮ್ಸ್ ಚಿನ್ನದ ಪದಕ, ಒಂದು ಏಶ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ಗೆದ್ದಿರುವ ಎಂ.ಆರ್. ಪೂವಮ್ಮ, ರಾಜ್ಯದ ಮತ್ತು ದೇಶದ 400 ಮೀ. ಓಟದ ಅಗ್ರಮಾನ್ಯ ಓಟಗಾರ್ತಿ.

34 ವರ್ಷದ ಪೂವಮ್ಮ ಅವರಿಗೆ ಈ ಒಲಿಂಪಿಕ್ಸ್ ಮೂರನೇ ಮತ್ತು ಬಹುಶಃ ಕಡೆಯ ಒಲಿಂಪಿಕ್ಸ್. ಈ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳೆಯರ ತಂಡವು 400×4 ರಿಲೇಯಲ್ಲಿ ಕಡೆಯ ಸ್ಥಾನ ಪಡೆದು ಓಟ ಮುಗಿಸಿದ್ದು ಬೇಸರದ ಸಂಗತಿ.

ಕ್ರೀಡಾ ಪಟುಗಳಿಗೆ, ಮುಖ್ಯವಾಗಿ ಅತ್ಲೀಟ್‌ಗಳಿಗೆ ಪಾಕೆಟ್ ಮನಿ ಕೊಡುವ ರೀತಿಯಲ್ಲಿ ನೆರವಾಗುವ, ವಿಶೇಷವಾಗಿ ಕ್ರಿಕೆಟ್ ಹೊರತಾಗಿ ಉಳಿದ ಕ್ರೀಡೆಗಳಿಗೆ ಮನ್ನಣೆಯೇ ಇಲ್ಲದ ದೇಶದಲ್ಲಿ ದಶಕಗಳ ಕಾಲ 400 ಮೀ. ಓಟದ ಸ್ಪರ್ಧೆಯಲ್ಲಿ ಪದಕಗಳನ್ನು ಗೆಲ್ಲುತ್ತಾ, ಒಲಿಂಪಿಕ್ಸ್ ನಂತಹ ಪಂದ್ಯಾವಳಿಗಳಿಗೆ ಅರ್ಹತೆ ಪಡೆಯುವುದು ದೊಡ್ಡ ಸಾಧನೆಯೇ.