ಸಿಟಿಗುಡ್ಡೆ: ನಮ್ಮಿಂದ ವೋಟು ಪಡೆದವರು ನಮ್ಮನ್ನು ಮರೆತಿದ್ದಾರೆ: ಸಾರ್ವಜನಿಕರ ಆರೋಪ– ಕಹಳೆ ನ್ಯೂಸ್
ಪುತ್ತೂರು: ನಮ್ಮ ಏರಿಯಾದ ಹೆಚ್ಚಿನ ಜನರು ಒಂದೇ ಪಕ್ಷಕ್ಕೆ ವೋಟು ಹಾಕುತ್ತಾರೆ, ಕಳೆದ ಹಲವು ವರ್ಷಗಳಿಂದ ನಾವು ಅವರನ್ನೇ ಬೆಂಬಲಿಸುತ್ತಾ ಬಂದಿದ್ದೇವೆ ಆದರೆ ನಮ್ಮಿಂದ ವೋಟು ಪಡೆದವರು ನಮ್ಮನ್ನು ಸಂಪೂರ್ಣ ಮರೆತಿದ್ದಾರೆ, ನಮ್ಮ ಭಾಗದ ಸಮಸ್ಯೆಯನ್ನು ಆಲಿಸಲೂ ಬರುತ್ತಿಲ್ಲ ಎಂದು ಪುತ್ತೂರು ನಗರಸಭಾ ವ್ಯಾಪ್ತಿಯ ಸಿಟಿಗುಡ್ಡೆ ನಿವಾಸಿಗಳು ಆರೋಪಿಸಿದ್ದಾರೆ.
ಭಾನುವಾರ ಶಾಸಕರಾದ ಅಶೋಕ್ ರಐ ಯವರು ಆ ಭಾಗದ ಜನರ ಬೇಡಿಕೆಯಂತೆ ಅಲ್ಲಿನ ರಸ್ತೆ ವೀಕ್ಷಣೆಗೆ ತೆರಳಿದ್ದರು. ಸಿಟಿಗುಡ್ಡೆಗೆ ತೆರಳುವ ಸಂಪರ್ಕ ರಸ್ತೆ ಸಂಪೂರ್ಣ ಹದಗಹೆಟ್ಟಿದೆ. ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಡಾಮರೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯನ್ನೇ ಕೊಚ್ಚಿಕೊಂಡು ಹೋಗಿದೆ. ಇಲ್ಲಿ ಅನೇಕ ಮನೆಗಳಿದ್ದರೂ ದಾರಿದೀಪೊದ ವ್ಯವಸ್ಥೆಯೂ ಇಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂತು.
ತೆಂಗಿನ ಕಾಯಿ ಒಡೆದಾಗ ಸಂತೋಷವಾಗಿತ್ತು
ಮಾಜಿ ಶಾಸಕರು ಈ ರಸ್ತೆಗೆ ಅನುದಾನ ಇಡುವುದಾಗಿ ಹೇಳಿ ತೆಂಗಿನ ಕಾಯಿ ಒಡೆದು ಹೋಗಿದ್ದರು, ಆಗ ನಮಗೆಲ್ಲಾ ಸಂತೋಷವಾಗಿತ್ತು. ಈ ಬರಿಯಾದರೂ ರಸ್ತೆ ಆಗುತ್ತದೆ ಎಂದು ನಂಬಿದ್ದೆವು ಆದರೆ ರಸ್ತೆ ಮಾತ್ರ ಹಾಗೆಯೇ ಇದೆ. ಈ ವ್ಯಾಪ್ತಿಯ ನಗರಸಭಾ ಸದಸ್ಯರು ನಮ್ಮ ಕೈಗೆ ಸಿಗುತ್ತಿಲ್ಲ, ನಮ್ಮ ಸಮಸ್ಯೆ ಕೇಳುವ ಪುರುಸೋತ್ತು ಅವರಿಗಿಲ್ಲ, ನಾವು ಮಾಡಿದ ತಪ್ಪಿಗೆ ನಾವೇ ಶಿಕ್ಷೆ ಅನುಭವಿಸುವಂತಾಗಿದೆ ಎಂದು ನಾಗರಿಕರು ಆರೋಪಿಸಿದರು.
೧೦ ಲಕ್ಷ ಅನುದಾನ : ಅಶೋಕ್ ರೈ
ನಾಗಕರಿಕರ ಆರೋಪವನ್ನು ಕೇಳಿದ ಶಾಸಕ ಅಶೋಕ್ ರೈಯವರು ಆರೋಪಕ್ಕೆ ಯಾವುದೇ ಉತ್ತರವನ್ನು ನೀಡಲಿಲ್ಲ. ರಸ್ತೆ ಹಾಳಾಗಿದೆ ಈ ಬಗ್ಗೆ ದೂರುಗಳು ಬಂದ ಕಾರಣ ಇಲ್ಲಿಗೆ ಬಂದಿದ್ದೇನೆ. ಈ ರಸ್ತೆಗೆ ಮೊದಲ ಹಂತದಲ್ಲಿ ಹತ್ತು ಲಕ್ಷ ಅನುದಾನ ಇಡುಯತ್ತೇನೆ ಮತ್ತು ದಾರಿ ದೀಪ ಅಳವಡಿಸುವಂತೆ ನಗರಸಭೆಗೆ ಸೂಚನೆಯನ್ನು ನೀಡುತ್ತೇನೆ. ಮುಂದೆ ಹಂತ ಹಂತವಾಗಿ ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ದಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಾರೆಕ್ಕಾಡು ರಸ್ತೆ ತಕರರಾರು: ಶಾಸಕರಿಂದ ಮಾತುಕತೆ
ಇದೇ ಪರಿಸರದ ಕಾರೆಕ್ಕಾಡು ಎಂಬಲ್ಲಿ ಹತ್ತು ಮನೆಗಳಿಗೆ ತೆರಳಲು ರಸ್ತೆ ಇಲ್ಲದ ಕಾರಣ ಆ ಮನೆಯವರ ಮನವಿಯಂತೆ ಶಾಸಕರು ಭೇಟಿ ನೀಡಿ ಪರಿಸೀಲನೆ ನಡೆಸಿದರು. ಖಾಸಗಿ ವ್ಯಕ್ತಿಯೋರ್ವರ ಜೊತೆ ಮಾತುಕತೆ ನಡೆಸಿದ ಶಾಸಕರು ರಸ್ತೆ ಅಗಲೀಕರಣ ಮಾಡಲು ಸ್ವಲ್ಪ ಜಾಗವನ್ನು ಬಿಟ್ಟುಕೊಡುವಂತೆ ಮನವಿ ಮಾಡಿದರು. ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದನೆ ದೊರಕಿದೆ. ಇಲ್ಲಿ ರಸ್ತೆ ನಿರ್ಮಾಣವಾದಲ್ಲಿ ಸುಮಾರು ೧೦ ವರ್ಷಗಳ ಹಿಂದಿನ ಜನರ ಬೇಡಿಕೆಯೊಂದು ಈಡೇರಿದಂತಾಗುತ್ತದೆ.
ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪೂರ್ಣೇಶ್ ಭಂಡಾರಿ, ಬೂತ್ ಅಧ್ಯಕ್ಷರಾದ ರಾಮಚಂಧ್ರ ನಾಯಕ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಸ್, ಕಾಂಗ್ರೆಸ್ ರಕ್ತ ನಿಧಿಯ ಅಧ್ಯಕ್ಷ ನವೀನ್ ಸಿಟಿಗುಡ್ಡೆ, ಎಸ್ ಘಟಕದ ಜಯಂತ್ ಕಲ್ಲೆಗ, ಕಾರ್ಮಿಕರ ಘಟಕದ ಚಂಧ್ರಶೇಖರ್ ದಾಸ್, ನಗರಸಭಾ ಸದಸ್ಯ ದಿನೇಶ್ ಶೇವಿರೆ, ರಾಜೀವ ಗೌಡ, ಮನೋರಮಾ, ತಿಲಕ, ಗಣೇಶ್ ಕಾರೆಕ್ಕಾಡು, ಮನೋಹರ್ ಕಾರೆಕ್ಕಾಡು, ಲೋಕೇಶ್,ಮ ಶಿವರಾಮ ಮತ್ತಿತರರು ಉಪಸ್ಥಿತರಿದ್ದರು.