Sunday, January 19, 2025
ಕಾಪುಸುದ್ದಿ

ಕಟಪಾಡಿ ಎಸ್‌ವಿಎಸ್ ಪ.ಪೂ. ಕಾಲೇಜು ಸಭಾಭವನದಲ್ಲಿ ಬಂಟರ ಸಂಘ ಕಟಪಾಡಿ, ಬಂಟರ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ – ಕಹಳೆ ನ್ಯೂಸ್

ಕೃಷಿಕನ ಬದುಕು ನೆಮ್ಮದಿಯಿಂದ ಕೂಡಿದ ಬದುಕು ಬಂಟರು ವೃತ್ತಿ-ಪ್ರವೃತ್ತಿಯನ್ನು ಹುಡುಕುತ್ತಾ ಪ್ರಾದೇಶಿಕ ನೆಲೆಯಿಂದ ಪ್ರಾಪಂಚಿಕವಾಗಿ ನೆಲೆಯನ್ನು ಕಂಡು ಕೊಂಡರು ತುಳುನಾಡಿನ ಆಚಾರ ವಿಚಾರ ಮರೆಯದೆ ಶ್ರೀಮಂತಿಕೆಗಿಂತ ನೆಮ್ಮದಿಯ ಬದುಕು ಕಂಡ ಪೂರ್ವಜರ ಪ್ರಕೃತಿ ಆಧಾರಿತ ಆಹಾರ ಪದ್ದತಿ, ಸಂಸ್ಕಾರವನ್ನು ಮಾತ್ರ ಮರೆಯದಿರಿ ಎಂದು ಕಾಫು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಅವರು ಕಟಪಾಡಿ ಎಸ್‌ವಿಎಸ್ ಪ.ಪೂ. ಕಾಲೇಜು ಸಭಾಭವನದಲ್ಲಿ ಬಂಟರ ಸಂಘ ಕಟಪಾಡಿ, ಬಂಟರ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಬಂಟ ಸಮಾಜದ ಬಾಂಧವರಿಗೆ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಅವಿನಾಶ್ ವಿ. ಶೆಟ್ಟಿ ರೋಶನ್ ಶಶಿಧರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟರ ಮಾತೃಸಂಘ ಉಡುಪಿ ತಾಲೂಕು ಸಮಿತಿಯ ನಿರ್ದೇಶಕಿ ಇಂದಿರಾ ಸುಬ್ಬಯ್ಯ ಹೆಗ್ಡೆ ಆಟಿಯ ಆಚರಣೆ, ಮಹತ್ವದ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಟಪಾಡಿ ಬಂಟರ ಸಂಘದ ಅಧ್ಯಕ್ಷದಯಾನಂದ ಆರ್. ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಸುಜ್ಞಾನ್ ಆಸೈನ್ ಇನ್ನಾ ಪಡುಬಿದ್ರಿ ಜನರಲ್ ಮ್ಯಾನೇಜರ್ ಅಶೋಕ್ ಕುಮಾ‌ರ್ ಶೆಟ್ಟಿ ಬಂಟರ ಮಾತೃಸಂಘ ರಿ. ಉಡುಪಿ ತಾಲೂಕು ಸಮಿತಿಯ ಸಂಚಾಲಕ ತಿಪ್ರಸಾದ್ ಹೆಗ್ಡೆ ಉಪ ಸಂಚಾಲಕ ದಿನೇಶ್ ಹೆಗ್ಡೆ ಕೋಡು, ನಿರ್ದೇಶಕ ಸುಭಾಸ್ ಬಲ್ಲಾಳ್, ಕಟಪಾಡಿ ಬೀಡು ಅಶ್ವಿನ್ ಬಲ್ಲಾಳ್, ಸಮಾಜ ಸೇವಕಿ ಬಿಂದು ಶೆಟ್ಟಿ ಮಣಿಪುರ ಬಡಗುಮನೆ, ಉದ್ಯಮಿ ಜಯಾ ಕೆ. ಶೆಟ್ಟಿ ಬಂಟರ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ರತ್ನಾಶಂಭುಶೆಟ್ಟಿ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಕಟಪಾಡಿ ಬಂಟರ ಸಂಘದ ಪೂರ್ವಾಧ್ಯಕ್ಷ ವಿನಯ ಬಲ್ಲಾಳ್, ವೈ. ರಂಜನ್ ಹೆಗ್ಡೆ ಕಾರ್ಯದರ್ಶಿ ಉಮೇಶ್ ಶೆಟ್ಟಿ ಹಿರಿಯ ವೈದ್ಯ ಡಾ|ರವೀಂದ್ರನಾಥ ಶೆಟ್ಟಿ ಕಟಪಾಡಿ ಗ್ರಾ.ಪಂ. ಅಧ್ಯಕ್ಷಸ ಪ್ರಭಾ ಬಿ. ಶೆಟ್ಟಿ ಮಹೇಶ್ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು. ಬಂಟರ ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಮಾ ಯು. ಶೆಟ್ಟಿ ವಂದಿಸಿದರು. ವಿಜೇತಾ ಶೆಟ್ಟಿ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು