Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿದ್ಯಾ ಭಾರತಿ ಆಯೋಜಿತ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಅಂಬಿಕಾ ವಿದ್ಯಾರ್ಥಿಗಳಿಂದ ಗಮನಾರ್ಹ ಸಾಧನೆ-ಕಹಳೆನ್ಯೂಸ್

ಪುತ್ತೂರು: ವಿದ್ಯಾ ಭಾರತಿ ಹಾಗೂ ಮಂಗಳೂರಿನ ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್ ಸಹಯೋಗದಲ್ಲಿ ಶಕ್ತಿ ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆದ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿ.ಯು ವಿದ್ಯಾರ್ಥಿನಿ ಪ್ರತೀಕ್ಷಾ ಯನ್ ಶೆಣೈ ಇವರು 50 ಮೀಟರ್ ಬ್ರೆಸ್ಟ್ ಸ್ಟ್ರೋಕ್, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್, 200 ಮೀಟರ್ ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಪ್ರಥಮ ಹಾಗೂ 4×100ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು 4 ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇವರು ಪುತ್ತೂರಿನ ಎಂ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮಿ ಎನ್ ಶೆಣೈ ದಂಪತಿಯ ಪುತ್ರಿ. ಇನ್ನೋರ್ವ ವಿದ್ಯಾರ್ಥಿನಿ, ಪುತ್ತೂರು ಪಡುಮಲೆಯ ಎ ಸಿ ಚಂದ್ರಶೇಖರ ಆಳ್ವ ಮತ್ತು ಉಷಾ ಸಿ ಆಳ್ವ ದಂಪತಿಯ ಪುತ್ರಿ ಜಿ ಪ್ರತೀಕ್ಷಾ ಆಳ್ವ ಇವರು 50 ಮೀಟರ್ ಹಾಗೂ 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಹಾಗೂ 4×100 ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು, ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರದ್ಧಾ ಲಕ್ಷ್ಮಿ ಇವರು 50 ಮೀಟರ್ ಹಾಗೂ 100 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಪ್ರಥಮ ಸ್ಥಾನ ಹಾಗೂ 4×100 ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಮೂರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಇವರು ಪುತ್ತೂರು ಚಿಕ್ಕಮುಡ್ನೂರಿನ ರವಿಶಂಕರ್ ಡಿ ಮತ್ತು ಅನುಪಮಾ ದಂಪತಿಯ ಪುತ್ರಿ. ದ್ವಿತೀಯ ಪಿಯು ವಿದ್ಯಾರ್ಥಿಯಾದ, ಪುತ್ತೂರು ದರ್ಬೆಯ ಕೇಶವಕುಮಾರ್ ಕೆ. ಎಂ ಹಾಗೂ ಮೀನಾಕ್ಷಿ ದಂಪತಿಯ ಪುತ್ರ ಧನ್ವಿತ್ ಇವರು 50 ಮೀಟರ್, 100 ಮೀಟರ್, 200 ಮೀಟರ್ ಫ್ರೀ ಸ್ಟೈಲ್‍ನಲ್ಲಿ ಪ್ರಥಮ ಸ್ಥಾನ ಪಡೆದು ಮೂರು ಚಿನ್ನದ ಪದಕ ವಿಜೇತರಾಗಿದ್ದಾರೆ. ವಿದ್ಯಾರ್ಥಿ ಪುತ್ತೂರು ದರ್ಬೆಯ ನಳಿನಾಕ್ಷ ಎನ್ ಮತ್ತು ಗಾಯತ್ರಿ ಪಿ ದಂಪತಿ ಪುತ್ರ, ದ್ವಿತೀಯ ಪಿಯು ವಿದ್ಯಾರ್ಥಿ ಅನಿಕೇತ್ ಇವರು 200 ಮೀಟರ್ ಐಎಂ, 200 ಮೀಟರ್ ಬ್ಯಾಕ್ ಬ್ಯಾಕ್ ಸ್ಟ್ರೋಕ್‍ನಲ್ಲಿ ಪ್ರಥಮ ಸ್ಥಾನ ಹಾಗೂ 100 ಮೀಟರ್ ಬ್ಯಾಕ್ ಸ್ಟ್ರೋಕ್‍ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಎರಡು ಚಿನ್ನ ಒಂದು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. ಹಾಸನ ಸಕಲೇಶಪುರದ ಕೆ ಪಿ ಮಹೇಶ್ ಮತ್ತು ಕುಮುದಾ ಕೆ ಎಂ ದಂಪತಿ ಪುತ್ರಿ, ಪ್ರಥಮ ಪಿ.ಯು ವಿದ್ಯಾರ್ಥಿನಿ ಪುನರ್ವಿ 4×100 ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ ಗೆದ್ದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು