Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಬೃಹತ್ ವಾಹನ ಜಾಥ-ಕಹಳೆನ್ಯೂಸ್

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ವಾಹನ ಜಾಥ ನಡೆಯಿತು.
ಹಿರಿಯರಾದ ಶ್ರೀನಿವಾಸ ಶೆಣೈ ಬಂಟ್ವಾಳ, ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಪಿ, ಬಜರಂಗದಳ ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಭಾ.ಜ.ಪ ದ ಕಾರ್ಯದರ್ಶಿ ಸುದರ್ಶನ್ ಬಜ, ಸುರೇಶ್ ಬೆಂಜನಪದವು, ವಿಶ್ವ ಹಿಂದೂ ಪರಿಷದ್ ಪ್ರಖಂಡ ಕಾರ್ಯದರ್ಶಿ ದೀಪಕ್ ಅಜೆಕಳ, ಬಜರಂಗದಳ ಪ್ರಖಂಡ ಸಂಯೋಜಕ್ ಶಿವಪ್ರಸಾದ್ ತುಂಬೆ ವಾಹನ ಜಾಥಕ್ಕೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಗುರುರಾಜ್ ಬಂಟ್ವಾಳ, ಚಂದ್ರ ಕಲಾಯಿ, ವಿಜಯ್ ಅಮ್ಟಾಡಿ,ಪ್ರಸಾದ್ ಬೆಂಜನಪದವು, ಸಂದೇಶ್ ಕಾಡಬೆಟ್ಟು, ರಂಜಿತ್ ತಲೆಂಬಿಲ, ಅಭಿನ್ ರೈ, ಕಿರಣ್ ಕಾಪಿಕಾಡ್, ಪ್ರಶಾಂತ್ ಕೊಟ್ಟಾರಿ ಪೂಪಾಡಿಕಟ್ಟೆ, ಪ್ರವೀಣ್ ಕುಂಟಾಲಪಲ್ಕೆ, ಸಾಗರ್ ಕೊಯಿಲ, ರೋಹಿತ್ ಪೊಡಿಕಳ ಹಾಗೂ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಬಂಟ್ವಾಳ ಬೈಪಾಸ್ ನಿಂದ ಪ್ರಾರಂಭಗೊಂಡು ಬಿ.ಸಿ.ರೋಡ್ ನಾರಾಯಣ ಗುರು ವೃತ್ತವಾಗಿ ಸಾಗಿ ಕೈಕಂಬ, ಬ್ರಹ್ಮರಕೂಟ್ಲು ತುಂಬೆ ಜಂಕ್ಷನ್‌ನಿಂದ ಕಡೆಗೋಳಿ ತಲುಪಿ ಅಲ್ಲಿಂದ ಪುನಃ ಅದೇ ಮಾರ್ಗವಾಗಿ ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಸಾವಿರಾರು ಬಜರಂಗದಳ ಕಾರ್ಯಕರ್ತರು ಈ ವಾಹನಜಾಥಾದಲ್ಲಿ ಪಾಲ್ಗೊಂಡು ದೇಶಭಕ್ತಿ ಯ ಘೋಷಣೆಗಳನ್ನು ಕೂಗಿದರು.