Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ರೇಡಿಯೋ ಪಾಂಚಜನ್ಯದಲ್ಲಿ ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ-ಫಲಿತಾಂಶ-ಕಹಳೆ ನ್ಯೂಸ್

ಪುತ್ತೂರು: ಸಂಸ್ಕಾರ ಭಾರತೀ ದ.ಕ. ಜಿಲ್ಲೆ ಪುತ್ತೂರು ವಿಭಾಗದ ಆಶ್ರಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ ಮತ್ತು ಇನ್ನವ್ಹೀðಲ್ ಕ್ಲಬ್ ಪುತ್ತೂರು ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ ಆ. 14ರಂದು ರೇಡಿಯೋ ಪಾಂಚಜನ್ಯ ಸ್ಟುಡಿಯೋದಲ್ಲಿ ನಡೆಯಿತು. ರೇಡಿಯೋ ಪಾಂಚಜನ್ಯ ದ ಅಧ್ಯಕ್ಷ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಕಾರ ಭಾರತೀ ದ.ಕ. ಜಿಲ್ಲೆ ಉಪಾಧ್ಯಕ್ಷೆರೂಪಲೇಖಅವರುಪ್ರಸ್ತಾವಿಕ ನುಡಿಗಳನ್ನಾಡಿದರು ,ಇನ್ನೆರವೀಲ್ ಕ್ಲಬ್ ಪುತ್ತೂರು ಅಧ್ಯಕ್ಷೆ ರಾಜೇಶ್ವರಿ ಸುಧೀರ್ ಧನ್ಯವಾದ ಹೇಳಿದರು ದೀಪೋಜ್ವಲನೆಯೊಂದಿಗೆ ಪ್ರಾರಂಭ ವಾದ ಕಾರ್ಯಕ್ರಮ ಕ್ಕೆ ಪ್ರಾರ್ಥನೆ ಯನ್ನು ಚೈತ್ರಿಕ ಕೊಡಿಬೈಲು ನೆರವೇರಿಸಿದರು,.ತೀರ್ಪುಗಾರರಾಗಿ ಉಷಾಮಣಿ ದಯಾನಂದ ಮತ್ತು ಚೈತ್ರಿಕಾ ಕೋಡಿಬೈಲು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಂಸ್ಕಾರ ಭಾರತೀ ಸದಸ್ಯೆ ಶಂಕರಿ ಶರ್ಮ, ಇನ್ನವ್ಹೀðಲ್ ಕಾರ್ಯದರ್ಶಿ ವಚನಾ ಜಯರಾಂ, ಸೆನೊರಿಟಾ ಆನಂದ್, ಸುಧಾ ಕರಿಯಪ್ಪ, ಆಶಾ ನಾಯಕ್, ಲವ್ಲಿ ಸೂರಜ್ ವೇದಾ ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.

ರೇಡಿಯೋ ಪಾಂಚಜನ್ಯ ಸಂಯೋಜಕಿ ತೇಜಸ್ವಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ವಿಜೇತರ ವಿವರ
8 ರಿಂದ 10ನೇ ತರಗತಿ ಏಕವ್ಯಕ್ತಿ ವಿಭಾಗದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಆದ್ಯ (ಪ್ರಥಮ), ಅಂಬಿಕಾ ವಿದ್ಯಾಲಯ ಬಪ್ಪಳಿಗೆ ಇಲ್ಲಿನ ವಿದ್ಯಾರ್ಥಿನಿ ರಕ್ಷಾ ಎಸ್.ಎಸ್. (ಧ್ವಿತೀಯ), ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸುಪ್ರಜಾ (ತೃತೀಯ)

5 ರಿಂದ 7ನೇ ತರಗತಿ ಗ್ರೂಪ್ ವಿಭಾಗದಲ್ಲಿ ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಾದ ಸ್ಪಂದನಾ ಭಟ್ ಎಂ., ಜೀವಿಕಾ ಪಿ. ಭಟ್, ರೋಚನಾ ಎ., ರೋಚಿಕಾ ಎ., ಮಯೂರ್ ಎಸ್. ಮಯ್ಯ, ಶ್ರೀಯಾ ವಿ. ಎಂ., ಎಂ. ಆದಿಶ್ರೀ (ಪ್ರಥಮ), ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ವೈಷ್ಣವಿ, ಶ್ರೀರಕ್ಷಾ, ಸಂಹಿತಾ, ಚಿರಾಗ್, ಚೇತಸ್, ಗೌತಮ್ (ದ್ವಿತೀಯ), ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಾದ ಅನುಪ್ರಿಯಾ ಎನ್.ಕೆ., ತನ್ವಿ ಜೆ.ಪಿ., ಹನಿಕ್ಷಾ ಯು., ಆದ್ಯ ಪಿ. ಶೆಟ್ಟಿ, ವಿಹಾ, ಮನ್ವಿ ನಾಯಕ್, ಫಾತಿಮತ್ ರಫೀಲಾ (ತೃತೀಯ) ಬಹುಮಾನವನ್ನು ಪಡೆದಿರುತ್ತಾರೆ.