Friday, September 20, 2024
ಸುದ್ದಿ

ದೇವಸ್ಥಾನಗಳ ಧಾರ್ಮಿಕ ಪರಂಪರೆಯ ರಕ್ಷಣೆಗಾಗಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆ ಮಹಾಸಂಘ’ದ ಬೇಡಿಕೆ – ಕಹಳೆ ನ್ಯೂಸ್

ಮುಂಬೈ – ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶದ ಕುರಿತಾಗಿ ಸರ್ವೋಚ್ಚ ನ್ಯಾಯಾಲಯವು ನಿರ್ಣಯ ನೀಡಿದ ನಂತರ ದೇಶದಾದ್ಯಂತ ಈ ನಿರ್ಣಯದ ವಿರುದ್ಧ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ನ್ಯಾಯಾಲಯದ ಈ ನಿರ್ಣಯದಿಂದ 800 ವರ್ಷಕ್ಕೂ ಹೆಚ್ಚು ಕಾಲಗಳಿಂದ ನಡೆದುಬಂದ ಶಬರಿಮಲೆ ದೇವಸ್ಥಾನದ ಪರಂಪರೆಗೆ ಧಕ್ಕೆಯನ್ನುಂಟಾಗಿದೆ.

ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ರ‍್ಮಪಾಲನೆಯ ಸಂವಿಧಾನದತ್ತ ಅಧಿಕಾರವನ್ನು ನೀಡಿದ್ದರೂ ಇನ್ನೊಂದು ಕಡೆ ಈ ನಿರ್ಣಯದಿಂದಾಗಿ ಭಕ್ತರ ಶ್ರದ್ಧೆಯ ಮೇಲೆ ಘಾಸಿಯನ್ನುಂಟು ಮಾಡಲಾಗುತ್ತಿದೆ. ಧಾರ್ಮಿಕ ಪರಂಪರೆಯ ರಕ್ಷಣೆಗಾಗಿ ಕೇರಳದಲ್ಲಿ ಲಕ್ಷಾಂತರ ಭಕ್ತರು ‘ಸೇವ್ ಶಬರಿಮಲೆ’ ಈ ಚಳುವಳಿಯ ಮೂಲಕ ರಸ್ತೆಗಿಳಿದರು. ಶಬರಿಮಲೆ ದೇವಸ್ಥಾನದ ಪರಂಪರೆಯ ರಕ್ಷಣೆಗಾಗಿ ಕಾನೂನು ಮಾರ್ಗದಿಂದ ನಡೆಯುತ್ತಿರುವ ಈ ಪ್ರತಿಭಟನೆಯನ್ನು ನಾವು ಬೆಂಬೆಲಿಸುತ್ತೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ನೂರಾರು ದೇವಸ್ಥಾನದಲ್ಲಿಯ ಪರಂಪರೆಯ ಮೇಲೆ ಘಾಸಿಯನ್ನುಂಟು ಮಾಡುವ ಪ್ರಯತ್ನವು ಕಳೆದ ಕೆಲವು ರ‍್ಷಗಳಿಂದ ನಡೆಯುತ್ತಿದೆ, ಅದನ್ನು ವಿಫಲಗೊಳಿಸಲು ಕೇಂದ್ರ ಸರಕಾರವು ಹಿಂದೂ ಪರಂಪರೆಯ ರಕ್ಷಣೆಗಾಗಿ ಕಾನೂನ್ನು ಜಾರಿಗೆ ತರಬೇಕು ಇಲ್ಲದಿದ್ದರೆ ಕಾನೂನಿನ ಮರ‍್ಗದಿಂದ ಎಲ್ಲೆಡೆ ತೀವ್ರ ಪ್ರತಿಭಟನೆಯನ್ನು ಮಾಡುವೆವು. ಈ ಪ್ರತಿಭಟನೆಯ ಒಂದು ಭಾಗವಾಗಿ ನಾವು ಸರಕಾರಿಕರಣಗೊಂಡ ದೇವಸ್ಥಾನದ ರಕ್ಷಣೆ ಪೆಟ್ಟಿಗೆಯಲ್ಲಿ ರಕ್ಷಣೆಯನ್ನು ಮಾಡದೇ, ಅದರ ಬದಲು ‘ದೇವಸ್ಥಾನದ ಸರಕಾರಿಕರಣ ರದ್ದು ಪಡಿಸಿ, ಹಿಂದೂ ಪರಂಪರೆಯ ರಕ್ಷಣೆಯನ್ನು ಮಾಡಿ’ ಎಂದು ಬರೆದಿರುವ ಚೀಟಿಗಳನ್ನು ಹಾಕುವಂತೆ ಕರೆ ಕೊಡುತ್ತೇವೆ’, ಎಂದು ಬದಲಾಪುರ(ಠಾಣೆ)ನಲ್ಲಿಯ ಸಂತರಾದ ಪ.ಪೂ. ಕೃಷ್ಣಾನಂದ ಸರಸ್ವತಿ ಇವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು. ‘ದೇವಸ್ಥಾನ ಮತ್ತು ಧರ‍್ಮಿಕ ಸಂಸ್ಥೆ ಮಹಾಸಂಘ’ದ ವತಿಯಿಂದ ಇಂದು ಮುಂಬೈ ಮರಾಠಿ ಪತ್ರರ‍್ತರ ಸಂಘದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಜಾಹೀರಾತು

ಈ ಪತ್ರಿಕಾಗೋಷ್ಠಿಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ದೇವಸ್ಥಾನ ಟ್ರಸ್ಟ(ಮುಂಬೈ)ನ ವಿಶ್ವಸ್ಥರಾದ ಶ್ರೀ. ಪ್ರವೀಣ ಕಾನವಿಂದೆ, ಕೇರಳಿಯ ಕ್ಷೇತ್ರದ ಪರಿಪಾಲನ ಟ್ರಸ್ಟ ಮುಂಬೈನ ವಿಶ್ವಸ್ಥರಾದ ಶ್ರೀ. ಪಿ.ಪಿ.ಎಮ್. ನಾಯರ, ಪನವೇಲ್‌ನಲ್ಲಿಯ ಜೈನ ಮಂದಿರ ಸಂಘದ ವಿಶ್ವಸ್ಥ ಶ್ರೀ. ಮೋತಿಲಾಲ್ ಜೈನ್, ಶ್ರೀ ಗಣೇಶ ಶಿವ ದೇವಸ್ಥಾನದ ಶ್ರೀ. ಕೈಲಾಸ್ ಪಾಟೀಲ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮುಂಬೈಯ ವಕ್ತಾರರಾದ ಶ್ರೀ. ನರೇಂದ್ರ ಸರ‍್ವೆ, ಸನಾತನ ಸಂಸ್ಥೆಯ ವಕ್ತಾರರಾದ ಸೌ. ನಯನಾ ಭಗತ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಶಬರಿಮಲೆ ದೇವಸ್ಥಾನದಲ್ಲಿಯ ಪರಂಪರೆಯ ಬಗ್ಗೆ ಭಾಜಪವು ದೇಶದಾದ್ಯಂತ ಒಂದೇ ನಿಲುವನ್ನು ಇಡಬೇಕು ! – ಶ್ರೀ. ಪ್ರವೀಣ ಕಾನವಿಂದೆ

ಶಬರಿಮಲೆ ದೇವಸ್ಥಾನದಲ್ಲಿಯ ಧಾರ್ಮಿಕ ಪರಂಪರೆಯ ರಕ್ಷಣೆಯ ಚಳುವಳಿಯು ಕೇವಲ ಕೇರಳಕ್ಕೆ ಮಾತ್ರ ಸೀಮಿತವಾಗಿರದೇ, ಅದು ದೆಹಲಿ, ಮುಂಬೈ, ಅಹಮದಾಬಾದ್, ಪಣಜಿದೊಂದಿಗೆ ದೇಶದಾದ್ಯಂತ ಎದ್ದುನಿಲ್ಲುತ್ತಿದೆ. ಹಿಂದೂಗಳ ದೇವಸ್ಥಾನದಲ್ಲಿಯ ಧಾರ್ಮಿಕ ಪರಂಪರೆಯ ಮೇಲೆ ಆಘಾತ ಮಾಡಲಾಗುತ್ತಿರುವುದರಿಂದ ಪರಂಪರೆಯ ರಕ್ಷಣೆಗಾಗಿ ನಾವು ರಾಜ್ಯದಲ್ಲಿಯ ಎಲ್ಲ ದೇವಸ್ಥಾನಗಳ ಮಾಧ್ಯಮದಿಂದ ಜನಜಾಗೃತಿಯನ್ನು ಮಾಡುವೆವು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮಾ. ಮೋಹನ ಭಾಗವತ್ ಮತ್ತು ಭಾಜಪದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಅಮಿತ ಶಾ ಇವರು ಶಬರಿಮಲೆ ದೇವಸ್ಥಾನದ ಪ್ರಕರಣದಲ್ಲಿ ‘ಹಿಂದೂಗಳ ಪರಂಪರೆ ಕಾಪಾಡುವ ನಿಲುವನ್ನು ತೆಗೆದುಕೊಂಡಿದ್ದಾರೆ. ಇದೇ ನಿಲುವು ಭಾಜಪ ದೇಶದಾದ್ಯಂತ ಎಲ್ಲ ಹಿಂದೂ ದೇವಸ್ಥಾನದಲ್ಲಿಯ ಪರಂಪರೆಯ ಬಗ್ಗೆ ಇರಬೇಕು. ಹಿಂದೂಗಳು ಆರಿಸಿ ತಂದಿರುವ ಭಾಜಪದ ಸರಕಾರವು ಹಿಂದೂಗಳ ಧಾರ್ಮಿಕ ಪರಂಪರೆಯ ಬಗ್ಗೆ ವಿಶೇಷ ಕಾನೂನನ್ನು ರೂಪಿಸಬೇಕು.

ಶಬರಿಮಲೆಯ ಪರಂಪರೆಯಂತೆಯೇ ಮಹಾರಾಷ್ಟ್ರ ರಾಜ್ಯದಲ್ಲಿಯ ದೇವಸ್ಥಾನದಲ್ಲಿಯ ಪರಂಪರೆಯನ್ನು ರಕ್ಷಿಸಬೇಕು ! – ಶ್ರೀ. ನರೇಂದ್ರ ಸರ‍್ವೆ

ತಥಾಕಥಿತ ಪುರೋಗಾಮಿ, ಜಾತ್ಯತೀತವಾದಿಗಳು, ಕಮ್ಯುನಿಸ್ಟರು ಮುಂತಾದವರು ಹಿಂದೂ ರ‍್ಮದ ಮೇಲೆ, ರ‍್ಮದ ತತ್ತ್ವ ಮತ್ತು ದೇವತೆಯ ಮೇಲೆ ಅವರ ಶ್ರದ್ಧೆ ಇಲ್ಲದಿದ್ದರೂ ಈ ರೀತಿಯ ಮಂದಿ ಹಿಂದೂಗಳ ಧಾರ್ಮಿಕ ವಿಷಯದ ಬಗ್ಗೆ ಕೈಹಾಕುತ್ತಿದ್ದಾರೆ, ಇದು ತಪ್ಪಾಗಿದೆ. ಯಾವರೀತಿ ರಾಜ್ಯಾಡಳಿತದಲ್ಲಿ ನರ‍್ಣಯ ವನ್ನು ತೆಗೆದುಕೊಳ್ಳುವ ಅಧಿಕಾರವು ರಾಜಕಾರಣಿಗಳಿಗೆ ಇದೆಯೋ ಅದೇ ರೀತಿ ಧಾರ್ಮಿಕ ಕ್ಷೇತ್ರದಲ್ಲಿಯ ನಿರ್ಣಯದ ಅಧಿಕಾರವು ರ‍್ಮಾಚರ‍್ಯರಿಗೆ ಇದೆ.

ಹಿಂದೂಗಳ ದೇವಸ್ಥಾನದಲ್ಲಿ ಏನು ಮಾಡಬೇಕು, ಇದು ನ್ಯಾಯಾಲಯ ನರ‍್ಧರಿಸುತ್ತದೆ ! ಹಿಂದೂಗಳ ದೇವಸ್ಥಾನದಲ್ಲಿಯ ಹಣದ ಬಗ್ಗೆ ಸರಕಾರ ನಿರ‍್ಧರಿಸುತ್ತದೆ ! ಇದೇನು ನಡೆಯುತ್ತಿದೆ ? ಹಿಂದೂಗಳ ದೇವಸ್ಥಾನವನ್ನು ಕಬಳಿಸುವ, ಅದರಲ್ಲಿಯ ದೇವರ ನಿಧಿಯಲ್ಲಿ ಭ್ರಷ್ಟಾಚಾರ ಮಾಡುವ, ದೇವಸ್ಥಾನದ ಹಣ ಸಾಮಾಜಿಕ ಕಾರಣಗಳಿಗಾಗಿ ಉಪಯೋಗಿಸುವವರು ರ‍್ಚ ಮತ್ತು ಮಸೀದಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಧೈರ್ಯ ತೋರಿಸುವುದೇ ? ಚರ್ಚ್ ಮತ್ತು ಮಸೀದಿಯ ಸರಕಾರಿಕರಣ ಮಾಡಲಿದ್ದಾರೆಯೇ ? ಕೇವಲ ಹಿಂದೂಗಳ ದೇವಸ್ಥಾನದ ಪರಂಪರೆಯ ಬಗ್ಗೆ ಸರಕಾರ ಮತ್ತು ನ್ಯಾಯಾಲಯಗಳು ಕೈಹಾಕುತ್ತಿವೆ, ಇದು ಖಂಡನೀಯವಾಗಿದೆ.

ಮಹಾರಾಷ್ಟ್ರ ಸರಕಾರ ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ), ಶ್ರೀ. ಸಿದ್ಧಿವಿನಾಯಕ ದೇವಸ್ಥಾನ (ಮುಂಬೈ), ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ (ಪಂಢರಾಪುರ), ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ಸಮಿತಿ, ಶ್ರೀ ಶನಿ ದೇವಸ್ಥಾನ (ಶನಿಶಿಂಗಣಾಪುರ) ಇತ್ಯಾದಿ ಹಿಂದೂಗಳ ದೇವಸ್ಥಾನವನ್ನು ವಶಕ್ಕೆ ಪಡೆದುಕೊಂಡು ಅಲ್ಲಿಯ ರ‍್ಮಪರಂಪರೆಯಲ್ಲಿಯೂ ಹಸ್ತಕ್ಷೇಪವನ್ನು ಮಾಡಲಾಗಿದೆ. ಶಬರಿಮಲೆಯಲ್ಲಿ ಪರಂಪರೆಯ ರಕ್ಷಣೆಗಾಗಿ ರಾಜ್ಯದಲ್ಲಿಯ ದೇವಸ್ಥಾನದಲ್ಲಿಯ ಪರಂಪರೆಯ ರಕ್ಷಣೆಗಾಗಿ ಸರಕಾರವು ನೇತೃತ್ವವನ್ನು ವಹಿಸಿ ಕಾನೂನ್ನು ರೂಪಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನರೇಂದ್ರ ಸರ‍್ವೆ ಇವರು ಆಗ್ರಹಿಸಿದ್ದಾರೆ.