Saturday, November 23, 2024
ಸುದ್ದಿ

ಕನ್ನಡ ರಾಜ್ಯೋತ್ಸವ: ಆಡುಮಾತಿನಿಂದ ಭಾಷೆಯ ಉಳಿವು: ಡಾ. ಎಚ್. ಜಿ. ಶ್ರೀಧರ – ಕಹಳೆ ನ್ಯೂಸ್

ಅಡ್ಯನಡ್ಕ: ಒಂದು ಭಾಷೆಯನ್ನು ಆಡುಮಾತಾಗಿ ಬಳಸಿಕೊಳ್ಳುವ ಮೂಲಕ ಆ ಭಾಷೆಯನ್ನು ಉಳಿಸಬಹುದು. ಜಾಗತೀಕರಣದ ಸಂದರ್ಭದಲ್ಲಿ ಬೇರೊಂದು ಭಾಷೆಯನ್ನು ಅನಿವಾರ್ಯವಾಗಿ ರೂಢಿಸಿಕೊಂಡರೂ ಆಡುಮಾತಾಗಿ ಕನ್ನಡವನ್ನು ಉಪಯೋಗಿಸಿದರೆ ಭಾಷೆಯನ್ನು ರಕ್ಷಿಸಿದಂತಾಗುತ್ತದೆ ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ. ಶ್ರೀಧರ ಅಭಿಪ್ರಾಯಪಟ್ಟರು.

ಅವರು ನ.1ರಂದು ಅಡ್ಯನಡ್ಕ ಜನತಾ ಪ.ಪೂ.ಕಾಲೇಜು ಮತ್ತು ಜನತಾ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಸಾಹಿತ್ಯ ಸಂಘದ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವೇರಿಯಿಂದ ಗೋದಾವರಿವರೆಗೆ ವ್ಯಾಪಿಸಿದ್ದ ಕನ್ನಡ ನಾಡಿನಲ್ಲಿ ತಿರುಳ್ಗನ್ನಡವನ್ನು ಜನರು ಬಳಸುತ್ತಿದ್ದರು. ತಿಳಿಯಾದ ಈ ಭಾಷೆಯ ಲಾಲಿತ್ಯ ಹೃದ್ಯವೂ, ಆಸ್ವಾದ್ಯವೂ ಆಗಿದೆ ಎಂದು ಅವರು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ್ದ ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮರ‍್ತಿ ಅವರು ಮಾತನಾಡಿ, ರಾಜ್ಯೋತ್ಸವವೆಂದರೆ ಕನ್ನಡದ ನುಡಿಹಬ್ಬ. ಯಾವುದೇ ಭಾಷೆಯಾದರೂ ಅದೊಂದು ಅಭಿವ್ಯಕ್ತಿಯ ಸಾಧನ. ಭಾಷೆಯನ್ನು ಸರ‍್ಥವಾಗಿ ಬಳಸಿದರೆ ಉತ್ಕೃಷ್ಟವಾದ ಉಪಲಬ್ಧಿ ನಮ್ಮದಾಗುತ್ತದೆ ಎಂದರು.

ಜನತಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯೋತ್ಸವವೆಂದರೆ ಕರ್ನಾಟಕ ರಾಜ್ಯ ಉದಯಿಸಲ್ಪಟ್ಟ ಸುದಿನ. ಚಳುವಳಿಯಲ್ಲಿ ಪಾಲ್ಗೊಂಡ ಕನ್ನಡ ಸಂಘಟನೆಗಳಿಂದಾಗಿ ಕರ್ನಾಟಕ ಏಕೀಕೃತವಾಯಿತು ಎಂದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ಶುಭ ಹಾರೈಸಿ, ಭಾಷಿಕ ಕುಲಗಳ ಉಳಿವು ಮತ್ತು ಬೆಳವಣಿಗೆಗೆ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ರಮೇಶ ಎಂ.ಬಾಯಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕ ಶಿವಕುಮಾರ ಸಾಯ ಪರಿಚಯಿಸಿದರು. ಕೃತ್ತಿಕಾ ಮತ್ತು ಬಳಗ, ಚೇತನ ಮತ್ತು ಶಿವಪ್ರಿಯ ಕನ್ನಡ ಗೀತೆಗಳನ್ನು ಹಾಡಿದರು. ಪಂಚಮಿಕುಮಾರಿ ಮತ್ತು ರೂಪೇಶ್ ಸ್ವರಚಿತ ಕವಿತೆ ವಾಚಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಕೇತ್ ಬಾಳಿಗ ವಿಜೇತರ ವಿವರ ವಾಚಿಸಿದರು. ಅನ್ನಪರ‍್ಣ ಸ್ವಾಗತಿಸಿ, ಜಯಶ್ರೀ ಕಾರ‍್ಯಕ್ರಮ ನಿರೂಪಿಸಿ, ಪಂಚಮಿಕುಮಾರಿ ವಂದಿಸಿದರು.