Recent Posts

Monday, January 20, 2025
ಸುದ್ದಿ

ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಶಾಕಿಂಗ್ ನ್ಯೂಸ್ – ಕಹಳೆ ನ್ಯೂಸ್

ಬೆಂಗಳೂರು: ಕಾರು, ಬೈಕ್‌ಗಳಲ್ಲಿ ಬಂದು ಕದ್ದು ಮುಚ್ಚಿ ರಸ್ತೆ ಬದಿ, ಖಾಲಿ ಜಾಗಗಳಲ್ಲಿ, ಚರಂಡಿಗಳಲ್ಲಿ ಕಸ ಎಸೆಯುವವರಿಗೆ ದೊಡ್ಡ ಶಿಕ್ಷೆ ಕಾದಿದೆ. ಇನ್ನೂ ಶಿಕ್ಷೆ ಮತ್ತು ದಂಡದ ಜೊತೆ, ನಿಮ್ಮ ವಾಹನ ಸಹ ಜಪ್ತಿಯಾಗಲಿದೆ.

ಬಿಬಿಎಂಪಿಯು ರಾತ್ರಿ ವೇಳೆ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಬಿಸಾಡುವವರ ಮೇಲೆ ಹದ್ದಿನ ಕಣ್ಣಿಟ್ಟು ದಂಡದ ಶಿಕ್ಷೆಗೆ ಗುರಿಪಡಿಸಲು ನಿವೃತ್ತ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ನೇಮಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಲಿಕೆಯ ಪ್ರತಿ ವಲಯಕ್ಕೆ 3-4 ಮಂದಿಯಂತೆ ಒಟ್ಟು 8 ವಲಯಗಳಿಗೆ 32 ಮಾರ್ಷಲ್‌ಗಳನ್ನು ನಿಯೋಜಿಸಿದೆ. ಇವರು ರಾತ್ರಿ 10 ರಿಂದ ಮುಂಜಾನೆವರೆಗೆ ಗಸ್ತು ತಿರುಗುತ್ತಿದ್ದು, ಕಳೆದ ಕೆಲ ದಿನಗಳಿಂದ 100ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು