Sunday, January 19, 2025
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮೈಸೂರಿನಲ್ಲಿ ನಡೆದ 81ಕೆ.ಜಿ ವಿಭಾಗದ ಸೀನಿಯರ್ ವೈಟ್ ಲಿಫ್ಟಿಂಗ್ ನಲ್ಲಿ ಪುತ್ತೂರಿನ ರಜತ್ ರೈಗೆ ಚಿನ್ನದ ಪದಕ – ಕಹಳೆ ನ್ಯೂಸ್

ಪುತ್ತೂರು: ಮೈಸೂರಿನಲ್ಲಿ ನಡೆದ ಸೀನಿಯರ್ ವೈಟ್ ಲಿಫ್ಟಿಂಗ್ ನ 81ಕೆ.ಜಿ ವಿಭಾಗದಲ್ಲಿ ಪುತ್ತೂರಿನ ರಜತ್ ರೈ ಚಿನ್ನದ ಪದಕ ಪಡೆದಿದ್ದು, ಒಟ್ಟು 298 ಕೆ.ಜಿ ಭಾರ ಎತ್ತುವ ಮೂಲಕ ಹೊಸ ರಾಜ್ಯ ಕೂಟ ದಾಖಲೆಯನ್ನು ಮಾಡಿದ್ದಾರೆ.

ಕಳೆದ 2ವರ್ಷಗಳಲ್ಲಿ ಚಿನ್ನದ ಪದಕ ಪಡೆದಿರುವ ರಜತ್‌ ರೈ 3ನೇ ವರ್ಷದಲ್ಲಿಯೂ ಚಿನ್ನದ ಪದಕ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ರಜತ್‌ ರೈ ಹಿಮಾಚಲ್ ಪ್ರದೇಶದಲ್ಲಿ ಮಂಬರುವ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಸೀನಿಯರ್ ನ್ಯಾಷನಲ್ ವೈಟ್ ಲಿಫ್ಟಿಂಗ್ ಚಾಂಪಿಯನ್‌ ಶಿಪ್ ಸ್ಫರ್ಧಾಕೂಟದಲ್ಲಿ ಮೂರನೇ ಭಾರಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇರ್ದೆ ಬೆಟ್ಟಪಾoಡಿ ನಿವಾಸಿ ರತ್ನಾಕರ ರೈ ಮತ್ತು ಶಶಿಕಲಾ ದಂಪತಿಗಳ ಪುತ್ರರಾಗಿರುವ ರಜತ್‌ ರೈ ಎಸ್‌ ಡಿ ಎಂ ಸ್ಪೋರ್ಟ್ ಕ್ಲಬ್ ನಲ್ಲಿ ಸಂತೋಷ್ ಕುಮಾರ್ ಮತ್ತು ರಮೇಶ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು