Recent Posts

Monday, January 20, 2025
ಸುದ್ದಿ

ಜಮ್ಮು ಕಾಶ್ಮೀರ ರಾಜ್ಯ ಬಿಜೆಪಿ ಮುಖಂಡನ ಬರ್ಬರ ಹತ್ಯೆ – ಕಹಳೆ ನ್ಯೂಸ್

ಜಮ್ಮು ಕಾಶ್ಮೀರ ರಾಜ್ಯದ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹಾರ್ ಮತ್ತು ಅವರ ಸಹೋದರರನನ್ನು ಉಗ್ರರು ಗುಂಡಿಕ್ಕಿ ಕೊಂದ ಬರ್ಬರ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಸಂಜೆ ಸುಮಾರು 8 ಗಂಟೆಯ ಸಮಯಕ್ಕೆ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಎಂಬಲ್ಲಿ ಈ ಘಟನೆ ನಡೆದಿದ್ದು, ತಕ್ಷಣವೇ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

52 ವರ್ಷ ವಯಸ್ಸಿನ ಅನಿಲ್ ಪರಿಹಾರ್ ಮತ್ತು ಅವರ ಹಿರಿಯ ಸಹೋದರ 55 ವರ್ಷ ವಯಸ್ಸಿನ ಅಜಿತ್ ಎಂಬುವವರನ್ನು ಗುಂಡಿಕ್ಕಿ ಸಾಯಿಸಲಾಗಿದೆ. ಅಂಗಡಿಗೆ ಹೋಗಿದ್ದ ಈ ಇಬ್ಬರು ಸಹೋದರರನ್ನು ಅವರು ಮನೆಗೆ ಬರುವ ದಾರಿಯಲ್ಲೇ ಕಾದು ಕುಳಿತು ಉಗ್ರರು ಕೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು