ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ವಿದ್ಯಾರ್ಥಿ ವ್ಯವಹಾರ ವಿಭಾಗ [ಡಿಪಾರ್ಟ್ಮೆಂಟ್ ಆಫ್ ಸ್ಟೂಡೆಂಟ್ ಅಫೇರ್ಸ್] ವು ಇತ್ತೀಚೆಗೆ ದೇಶವಿಭಜನೆಯ ಕರಾಳತೆಯನ್ನು ನೆನಪಿಸುವ ದಿನವನ್ನು ಆಚರಿಸಿತು.
ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ದೇಶವಿಭಜನೆಯ ಸಂದರ್ಭದಲ್ಲಾದ ದುರಂತ ಘಟನೆಗಳನ್ನು ನೆನಪಿಸಿಕೊಳ್ಳಬೇಕಾದ ಔಚಿತ್ಯದ ಕುರಿತು ಮಾತನಾಡಿದರು.
ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಅವರು ತಮ್ಮ ಭಾಷಣದಲ್ಲಿ ದೇಶವಿಭಜನೆಯ ಘಟನೆಯು ಭಾರತದ ಚರಿತ್ರೆಯನ್ನು ಹೇಗೆ ಪ್ರಭಾವಿಸಿತು ಎಂಬುದರ ಬಗ್ಗೆ ಮಾತನಾಡಿದರು.
ಆವರಣ ಸುರಕ್ಷಾ ವಿಭಾಗದ ಮುಖ್ಯಸ್ಥ [ಹೆಡ್ ಆಫ್ ಕ್ಯಾಂಪಸ್ ಸೇಫ್ಟಿ] ಕರ್ನಲ್ ವಿಜಯ ಭಾಸ್ಕರ ರೆಡ್ಡಿ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು, ದೇಶವಿಭಜನೆಯಂಥ ಕರಾಳ ಘಟನೆಗಳು ಮತ್ತೆ ಮರುಕಳಿಸಿದಂತೆ ನೋಡಿಕೊಳ್ಳಬೇಕಾದ ಆವಶ್ಯಕತೆಯ ಕುರಿತು ಮಾತನಾಡಿದರು.
ಸ್ಟೂಡೆಂಟ್ಸ್ ಅಫೇರ್ಸ್ ವಿಭಾಗದ ನಿರ್ದೇಶಕರಾದ ಡಾ. ಗೀತಾ ಮಯ್ಯ ಅವರು ಆರಂಭದಲ್ಲಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಯಾ ಸೆಗಲ್ ಕಾರ್ಯಕ್ರಮ ನಿರೂಪಿಸಿದರು. ಎಂಐಟಿಯ ಕಲಾಕ್ರಿಯ ಕ್ಲಬ್ ಮತ್ತು ಮಾಹೆಯ ವಿದ್ಯಾರ್ಥಿವೃಂದವವರಿAದ ಸಾಂಸ್ಕೃತಿಕ ಪ್ರದರ್ಶನಗಳು ಜರಗಿದವು. ಡಾ. ಅರವಿಂದ ಕುಮಾರ್ ಪಾಂಡೆ ಧನ್ಯವಾದ ಸಮರ್ಪಿಸಿದರು.
ದೇಶವಿಭಜನೆಯ ಕರಾಳತೆಯನ್ನು ಬಿಂಬಿಸುವ ವಸ್ತುಪ್ರದರ್ಶನವು ಆಯೋಜನೆಗೊಂಡಿದ್ದು ಇದು ಅಂದಿನ ಚಾರಿತ್ರಿಕ ಘಟನೆಯಲ್ಲಿ ಜನರು ಸಂಕಷ್ಟವನ್ನು ಅನುಭವಿಸಿದ ದಿನಗಳನ್ನು ನೆನಪುಮಾಡಿಕೊಟ್ಟಿತು. ಮಾಹೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕರು, ಸಿಬಂದಿಗಳು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.