Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಪಘಾತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹವನ್ನು ತನ್ನದೆ ಕಾರಿನಲ್ಲಿ ಸಾಗಿಸಿ ಮಾನವೀಯತೆ ಮೆರೆದ ಇಬ್ಬರು ಯುವಕರು- ಕಹಳೆ ನ್ಯೂಸ್

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾವು ಸಮೀಪ ಬೈಕ್ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಅಮ್ಚಿನಡ್ಕದ ಕ್ಷೌರಿಕರೊಬ್ಬರು ಮೃತಪಟ್ಟ ಘಟನೆ ಆ.18ರಂದು ಬೆಳಗ್ಗೆ ನಡೆದಿತ್ತು.


ಅಮ್ಚಿನಡ್ಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಮಾಡ್ನೂರು ಗ್ರಾಮದ ಕಾವು ಬಜಕುಡೇಲು ದಿ. ರಾಮ ಭಂಡಾರಿ ಎಂಬವರ ಪುತ್ರ ಅವಿವಾಹಿತ ಸುರೇಶ್ ಭಂಡಾರಿ(45 ವ)ರವರು ಸ್ಥಳದಲ್ಲೆ ಮೃತಪಟ್ಟಿದ್ದರು. ಸುಮಾರು ಹೊತ್ತು ಮೃತದೇಹ ಅಪಾಘತವಾದ ಸ್ಥಳದಲ್ಲೆ ಇತ್ತು, ಯಾರೂ ಕೂಡಾ ಅದನ್ನು ಆಸ್ಪತ್ರೆ ತಲುಪಿಸುವ ಪ್ರಯತ್ನ ಮಾಡದೇ ಇದ್ದಾಗ ಕೆಲಸಕ್ಕೆಂದು ಹೊರಟು ಮನೆಯಿಂದ ಬಂದಿದ್ದ ಯುವಕರಿಬ್ಬರು ತಮ್ಮ ಕಾರಿನಲ್ಲಿ ಹಿಂದೂ ಮುಂದೂ ಯೋಚಿಸದೆ ಮೃತದೇಹವನ್ನು ಅಲ್ಲಿಂದ ಸಾಗಿಸುವ ಮುಖಾಂತರ ಮಾನವೀಯತೆ ಮೆರೆದಿದ್ದಾರೆ. ಅಜಿತ್ ಮತ್ತು ಸತೀಶ್ ಎಂಬ ಇಬ್ಬರು ಯುವಕರು ಮಾನವಿಯತೆ ದೃಷ್ಟಿಯಿಂದ ಮೃತದೇಹವನ್ನು ತಮ್ಮದೇ ಕಾರಿನಲ್ಲಿ ಸಾಗಿಸಿದ್ದು ಇದೀಗ ಯುವಕರಿಬ್ಬರ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು