ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ )ಬಾಯಿಲ ಇದರ ನೂತನ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಬಾಯಿಲ ಆಯ್ಕೆ-ಕಹಳೆ ನ್ಯೂಸ್
ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ )ಬಾಯಿಲ ಇದರ ಮಹಾಸಭೆಯು ಸುಧಾಕರ ಶೆಟ್ಟಿ ಶಂಭುಗ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು . ಅದರಂತೆ ಗೌರವ ಅಧ್ಯಕ್ಸರಾಗಿ ಎ ನೊಣಯ ಪೂಜಾರಿ, ಅಧ್ಯಕ್ಷರಾಗಿ ಸತೀಶ್ ಪೂಜಾರಿ ಬಾಯಿಲ, ಉಪಾಧ್ಯಕ್ಷರಾಗಿ ಯೋಗೀಶ್ ನಾಯ್ಕ ಕಾಜರ್ಲೆಕೋಡಿ, ಕಾರ್ಯಧರ್ಶಿ ಪ್ರಶಾದ್ ಬಾಯಿಲ, ಜೊತೆ ಕಾರ್ಯದರ್ಶಿ ಜಯಂತ ಬಾಯಿಲ, ಕೋಶಾಧಿಕಾರಿ ಹರೀಶ್ ಗೊಳಿಮಾರ್, ಸಾಂಸ್ಕೃತಿಕ ಕಾರ್ಯಧರ್ಶಿ ಸುಧಾಕರ ಶೆಟ್ಟಿ ಶಂಭುಗ, ಸಂಘಟನಾ ಕಾರ್ಯಧರ್ಶಿ ಕೃಷ್ಣಪ್ಪ ಪೂಜಾರಿ ಕೇಪುಲ ಕೋಡಿ ಆಯ್ಕೆಯಾದರು.
ಈ ಸಭೆಯಲ್ಲಿ ಟ್ರಸ್ಟಿಗಳಾದ ಜನಾರ್ಧನ ಪೂಜಾರಿ ಗೊಳಿಮಾರ್, ಉಮೇಶ್ ಕುಂದರ್, ಲೋಕಯ ಗೇನಿದಪಾಲು, ಶೇಖರ ಪೂಜಾರಿ, ಕೇಶವ ಬಾಯಿಲ ಮತ್ತು ಸರ್ವ ಸದಸ್ಯರು ಉಪಸ್ಥಿತಿ ಇದ್ದರು.