ರಾತ್ರಿಯಲ್ಲಿ ಒಬ್ಬಂಟಿಯಾಗಿ ಓಡಾಡುವುದು ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡಾ ಸುರಕ್ಷಿತವಲ್ಲ ; ಮಧ್ಯರಾತ್ರಿ ಪಾರ್ಕ್‌ನಲ್ಲಿ ಒಂಟಿಯಾಗಿದ್ಧ ಯುವಕನ ಮುಂದೆ ಬೆತ್ತಲೆಯಾಗಿ ಲೈಂಗಿಕ ದೌರ್ಜನ್ಯ ಎಸಗಿದ ಮಹಿಳೆ- ಕಹಳೆ ನ್ಯೂಸ್
ರಾತ್ರಿ ವೇಳೆ ಪಾರ್ಕ್ ಅಲ್ಲಿ ಹಾಯಾಗಿ ಕುಳಿತಿದ್ದ ಯುವಕನನ್ನು ಕಂಡ ರಷ್ಯಾದ ಮಹಿಳೆಯೊಬ್ಬಳು ವಿವಸ್ತ್ರವಾಗಿ ಆತನ ಬಳಿ ಹೋಗಿ ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಒಪ್ಪದ ಆತನ ಮೇಲೆ ದೌರ್ಜನ್ಯ ಎಸಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾಳೆ. ಕೊನೆಯಲ್ಲಿ ಪೊಲೀಸರು ಬಂದು ಆ ಯುವಕನ್ನು ರಕ್ಷಿಸಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು Human Nature ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ಪಾರ್ಕ್‌ನಲ್ಲಿ ಮಹಿಳೆ ಪುರುಷನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನ್ನು ನೋಡುತ್ತಾ ನಿಂತ ಪೊಲೀಸರು’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವೈರಲ್ ವಿಡಿಯೋದಲ್ಲಿ ಬೆತ್ತಲೆ ಮಹಿಳೆಯೊಬ್ಬಳು ನಡು ರಾತ್ರಿಯಲ್ಲಿ ಪಾರ್ಕ್ ಗೆ ಬಂದು ಅಲ್ಲಿದ್ದ ಯುವಕನ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿರುವ ದೃಶ್ಯವನ್ನು ಕಾಣಬಹುದು. ಇದಕ್ಕೆ ಒಪ್ಪದ ಆ ಯುವಕನ ಮೇಲೆ ಮಹಿಳೆ ಹಲ್ಲೆ ನಡೆಸಿದ್ದಾಳೆ. ಈಕೆಯ ಈ ಹುಚ್ಚಾಟದಿಂದ ಪಾರಾಗಲು ಯುವಕ ಒದ್ದಾಡುತ್ತಿದ್ದಾಗ ಅಲ್ಲಿಗೆ ಬಂದ ಪೊಲೀಸರು ಆ ಮಹಿಳೆಯನ್ನು ಹಿಡಿದು ಬಂಧಿಸಿದ್ದಾರೆ.
ಆಗಸ್ಟ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ ಪುರುಷರಿಗೆ ರಕ್ಷಣೆ ಎಲ್ಲಿದೆ’ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಪುರುಷನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಕೇಗೆ ಯಾವ ಶಿಕ್ಷೆ ಕೊಡ್ತೀರಾ’ ಎಂಬ ಕಾಮೆಂಟ್ ಬರೆದುಕೊಂದಿದ್ದಾರೆ.