Saturday, September 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ “ವಿವೇಕ ಚಂದನ – ರಕ್ಷಾಬಂಧನ” ಎಂಬ ಶೀರ್ಷಿಕೆಯೊಂದಿಗೆ ವಿನೂತನ ರೀತಿಯಲ್ಲಿ ರಕ್ಷಾಬಂಧನ ಆಚರಿಸಿದ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಪುತ್ತೂರು : ರಾಷ್ಟ್ರೀಯತೆಯ ನಿರ್ಮಾಣ ಹಾಗೂ ಮಾನವೀಯತೆಯ ಅನಾವರಣದೊಂದಿಗೆ ಸಹೋದರತೆಯ ಸಂದೇಶ ನೀಡುವ ಸಹೃದಯ ಸಹಕಾರಗಳ ಸಂಕೇತವಾದ ರಕ್ಷಾ ಬಂಧನವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ “ವಿವೇಕ ಚಂದನ – ರಕ್ಷಾ ಬಂಧನ” ಎಂಬ ಶೀರ್ಷಿಕೆಯೊಂದಿಗೆ ವಿನೂತನ ರೀತಿಯಲ್ಲಿ ಆಚರಿಸಲಾಯಿತು.

ಪ್ರಾಂಶುಪಾಲರು ಹಾಗೂ ಉಪಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ಆರಕ್ಷಕ ಠಾಣೆಗೆ ಭೇಟಿ ನೀಡಿ ಆರಕ್ಷಕ ಸಿಬ್ಬಂದಿಗಳಿಗೆ, ಆಸ್ಪತ್ರೆಗೆ ಬೇಟಿ ನೀಡಿ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸರ್ಕಾರಿ ಹಾಗೂ ಖಾಸಗಿ ಬಸ್ ಉದ್ಯೋಗಿಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಹಾಗೂ ವಿವೇಕಾನಂದ ವಿದ್ಯಾರ್ಧವಕ ಸಂಘದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಸಂಸ್ಥೆಗಳ ಉದ್ಯೋಗಿಗಳಿಗೆ, ನೆಹರು ನಗರ ಹಾಗೂ ತೆಂಕಿಲದ ವಿವೀಕಾನಂದ ಆವರಣದ ಶಿಕ್ಷಕೇತರ ಸಿಬ್ಬಂದಿಗಳಿಗೆ ರಕ್ಷೆಯನ್ನು ಕಟ್ಟಿ, ರಕ್ಷಾ ಬಂಧನ ಸಂದೇಶ ನೀಡಿ ಸಿಹಿತಿಂಡಿ ವಿತರಿಸಿ ಸಂಭ್ರಮಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಶಾಲೆಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು :
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಶಾಲೆಗಳಿಗೆ ಭೇಟಿ ನೀಡಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷಕ ವೃಂದದವರಿಗೆ ರಕ್ಷೆ ಕಟ್ಟಿ ರಕ್ಷಾ ಬಂಧನ ಸಂದೇಶ ನೀಡಿ, ಸಿಹಿ ತಿಂಡಿ ಹಂಚಿ ಆಶೀರ್ವಾದ ಪಡೆದದ್ದು ವಿಶೇಷವಾಗಿತ್ತು.

ಜಾಹೀರಾತು