Recent Posts

Thursday, November 21, 2024
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣ

ಶ್ರೀರಾಮ ಪ್ರೌಢಶಾಲೆಯಲ್ಲಿ ಸಂಸ್ಕೃತೋತ್ಸವ ಮತ್ತು ರಕ್ಷಾಬಂಧನ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಸಂಸ್ಕೃತೋತ್ಸವ ಮತ್ತು ರಕ್ಷಾಬಂಧನ ಕಾರ್ಯಕ್ರಮ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತಿಯ ಕಾರ್ಯಕರ್ತರು ಹಾಗೂ ಕಾಂಚನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀ ಸೂರ್ಯ ಪ್ರಕಾಶ್ ಇವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಆಧುನಿಕ ಶಿಕ್ಷಣಕ್ಕೆ ಮಾರುಹೋಗದೆ ಸಂಸ್ಕೃತ ಭಾಷೆಯ ಧ್ವನಿಯ ಸೊಗಡನ್ನು ತಿಳಿಯಬೇಕು. ಹಾಗಾದರೆ ಮಾತ್ರ ಸಂಸ್ಕೃತ ಭಾಷೆಯು ಉತ್ತುಂಗಕ್ಕೆ ಏರಲು ಸಾಧ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಸರಿ ಎಂಬುದು ಜ್ಞಾನ ಮತ್ತು ಶೌರ್ಯದ ಸಂಕೇತ. ರಕ್ಷೆಯ ರೇಷ್ಮೆ ಎಳೆಗಳು ಬೇರೆ ಬೇರೆ ಇದ್ದಾಗ ದುರ್ಬಲವಾಗಿರುತ್ತದೆ. ಅದನ್ನು ಒಟ್ಟು ಸೇರಿಸಿ ದಾರದಲ್ಲಿ ಕಟ್ಟಿದಾಗ ಅದು ಪ್ರಬಲವಾಗಿರುತ್ತದೆ. ಅದೇ ರೀತಿ ನಾವೆಲ್ಲ ದೇಶಕ್ಕೋಸ್ಕರ ಒಳ್ಳೆಯ ಧ್ಯೇಯಕ್ಕೋಸ್ಕರ ಒಟ್ಟಿಗೆ ಸಂಘಟನಾತ್ಮಕವಾಗಿರಬೇಕು ಎಂದು ಹೇಳಿದರು.

ಪ್ರೌಢಶಾಲೆಯಲ್ಲಿ ವಿಶೇಷವಾಗಿ ಶ್ರೀರಾಮ ವಿದ್ಯಾಕೇಂದ್ರದ ಶಾಲಾ ವಾಹನದ ಚಾಲಕರು ಮತ್ತು ನಿರ್ವಾಹಕರೊಂದಿಗೆ ರಕ್ಷಾಬಂದನ ಆಚರಿಸಲಾಯಿತು. ಈ ಸಂದರ್ಭದಲ್ಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ಗೋಪಾಲ್ ಎಂ. ಉಪಸ್ಥಿತರಿದ್ದರು.

ಸಂಸ್ಕೃತೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಸಂಸ್ಕೃತ ಯಕ್ಷಗಾನ, ರೂಪಕದ ಪ್ರದರ್ಶನ ನಡೆಯಿತು. 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಂಸ್ಕೃತದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರತಿಭಾಕಾರಂಜಿಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಹಾಸನದಲ್ಲಿ ನಡೆದ ರಾಜ್ಯಮಟ್ಟದ 14ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡ, ಥಣಿಸಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದ ಅನರ್ಘಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನವನ್ನು ಆಚರಿಸಿದರು.

ರಕ್ಷಾಬಂಧನದ ಸಂದೇಶವನ್ನು ಪ್ರಾಣೇಶ್ ತಿಳಿಸಿದನು. ಕಾರ್ಯಕ್ರಮವನ್ನು ತೃಪ್ತಿ ನಿರೂಪಿಸಿ ಸಾನ್ವಿಕಾಮತ್ ಸ್ವಾಗತಿಸಿ ಧನ್ಯ ವಂದಿಸಿದಳು. ಹಾಗೂ ಸಿಹಿತಿಂಡಿಯನ್ನು ವಿತರಿಸಿ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.