ಪರಶುರಾಮ ಥೀಮ್ ಪಾರ್ಕ್ ವಿವಾದ ; ನ್ಯಾಯಲಯದ ಅದೇಶ ಇದ್ದರೂ ಪ್ರಕರಣ ದಾಖಲಿಸಿ, ಕಾಮಗಾರಿ ನಡೆಸಲು ಅಡ್ಡಿ ಪಡಿಸುತ್ತಿದ್ದ ಕಾಂಗ್ರೆಸ್ ಸರಕಾರಕ್ಕೆ ಹೈಕೋರ್ಟ್ ಶಾಕ್..!! ಪೋಲೀಸರ ತನಿಖೆಗೆ ತಡೆ – ಕಾಮಗಾರಿ ಪೂರ್ಣಗೊಳಿಸಲು ಸೂಚನೆ – ಕಹಳೆ ನ್ಯೂಸ್
ಬೆಂಗಳೂರು : ರಾಜ್ಯಾದ್ಯಂತ ಸದ್ದುಮಾಡಿದ್ದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿವಿಧದಲ್ಲಿ ಮಹತ್ವದ ಘಟನೆ ನಡೆದಿದೆ. ಸದ್ರಿ ಕಾಮಗಾರಿಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುಲು ಶಿಲ್ಪಿ ಹಾಗೂ ನಿರ್ಮಿತಿ ತಂಡಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಈ ಹಿಂದೆಯೇ ನ್ಯಾಯಾಲಯವು ಸೂಚಿಸಿತ್ತು., ಆದೇಶದಂತೆ ಕಾಮಗಾರಿ ನಡೆಸಲು ಮುಂದಾದಾಗ ಸ್ಥಳೀಯ ಮುನಿಯಾಲ್ ಉದಯ ಶೆಟ್ಟಿ ಎಂಬ ಕಾಂಗ್ರೆಸ್ ಪುಡಾರಿಯ ನೇತೃತ್ವದಲ್ಲಿ ಅಡ್ಡಿ ಪಡಿಸುವ ಪ್ರಕ್ರಿಯೆಯ ನಡೆದದ್ದು ಗೊತ್ತೇ, ಇದೆ.
ನಂತರ ಇತ್ತಿಚೆಗೆ ಪೋಲಿಸ್ ಇಲಾಖೆಯೂ ಕಾಂಗ್ರೆಸ್ ಸರಕಾರದ ಒತ್ತಡ ಮೇರೆಗೆ ಶಿಲ್ಪಿಯ ಮನೆಗೆ ದಾಳಿ ಮಾಡಿ, ಮೂರ್ತಿಯ ವಸ್ತುಗಳು ವಶಕ್ಕೆ ಪಡೆದುಕೊಳ್ಳುವ ನಾಟಕವೂ ನಡೆದಿತ್ತು. ಇದರ ನಂತರ ಇದೀಗ ಹೈಕೋರ್ಟ್ ಮಹತ್ವದ ಅದೇಶ ನೀಡಿದೆ.
ಸದ್ಯ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡದ್ದು, ನ್ಯಾಯಾಲಯವು ಯಾವುದೇ ಪೋಲಿಸ್ ಹಾಗೂ ಇತರ ತನಿಖೆ ನಡೆಸಲು ತಡೆ ನೀಡಿದೆ. ಅರ್ಜಿದಾರರ ಪರ ಹೈಕೋರ್ಟಿನ ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದವನ್ನು ಆಲಿಸಿದ ನ್ಯಾಯಮೂರ್ತಿ ಗಳಾದ ನಾಗಪ್ರಸನ್ನ ಅವರ ಏಕಸದಸ್ಯಪೀಠ ಈ ಮಹತ್ವದ ಆದೇಶ ಮಾಡಿದೆ.