Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಹರೀಶ್ ಸಾಲ್ಯಾನ್ ಅಜೆಕಲ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 8ರ ಗುರುಸಂದೇಶ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಮೇಲು ಕೀಳೆಂದು ಬೀಗುವ, ಬಿಗು ನೀತಿಯ ಖಂಡಿಸಿ ಪಾಮರಪರ ಶಕ್ತಿಯಾಗಿ, ಏಕ ದೇವತಾರಾಧನೆಯ ಬೋಧಿಸಿ,ಸರ್ವರಿಗೂ ಸಮಾನ ಅವಕಾಶದ ಏರು ದ್ವನಿಯಾಗಿ ಹೋರಾಡಿ ಮೌನ ಕ್ರಾಂತಿಯ ಮೂಲಕ ಪಂಡಿತ-ಪಾಮರರೆಂಬ ಬೇಧವಿಲ್ಲದೆ ಕೃತಕ ಗೋಡೆಯನ್ನೊಡೆದು ಸಕಲರೊಳಗೊಂದಾದ ಅಗೋಚರ ಶಕ್ತಿಯ ಅರಿವು ಮೂಡಿಸಿದ ಮಹಾಶಕ್ತಿ ನಾರಾಯಣಗುರುವರ್ಯರು ಸಕಲ ಶೋಷಿತ ಸಮಾಜದ ಆಶಾಕಿರಣ ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ಹೇಳಿದರು.

ಅವರು ಹರೀಶ್ ಸಾಲ್ಯಾನ್ ಅಜೆಕಲ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 8 ರ ಗುರುಸಂದೇಶ ನೀಡಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ, ನಾಗೇಶ್ ಪೊನ್ನೊಡಿ,ಅರುಣ್ ಕುಮಾರ್ ,ಪ್ರೇಮನಾಥ ಕೆ , ರಾಮಚಂದ್ರ ಸುವರ್ಣ,ಹಾಗೂ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಪಲ್ಲಿಕಂಡ, ದ್ವಿತೀಯ ಉಪಾಧ್ಯಕ್ಷರಾದ ನಾಗೇಶ್ ನೈಬೆಲು,ನಿರ್ದೇಶಕರಾದ ಮಹೇಶ್ ಬೊಳ್ಳಾಯಿ,ಉದಯ್ ಮೇನಾಡು, ಧನುಷ್ ಮಧ್ವ,ಹರಿಣಾಕ್ಷಿ ನಾವುರ, ಮಧುಸೂದನ್ ಮಧ್ವ, ಲೋಹಿತ್ ಬಂಟ್ವಾಳ,ಸದಸ್ಯರಾದ ಪ್ರಶಾಂತ್ ಏರಮಲೆ, ಯೋಗೀಶ್ ಪೂಜಾರಿ ಕಲ್ಲಡ್ಕ,ನಯನಾ ಪಚ್ಚಿನಡ್ಕ,ಸುಲತಾ ಬಿ.ಸಿರೋಡ್, ಚಂದ್ರಶೇಖರ್ ಕಲ್ಯಾಣಾಗ್ರಹಾರ,ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ನಿಕೇಶ್ ಕೊಟ್ಯಾನ್, ನಾಗೇಶ್ ಪೂಜಾರಿ ಏಲಬೆ, ಸುನೀಲ್ ನಾಯಿಲ,ಅರ್ಜುನ್ ಅರಳ, ಯಶೋಧರ್ ಕುದನೆ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.