Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

2-09-2024 ರಿಂದ 7-09-2024 ವರೆಗೆ ಐತಿಹಾಸಿಕ ಸುಳ್ಳಮಲೆ ಗುಹಾ ತೀರ್ಥಸ್ಥಾನದಲ್ಲಿ ವರ್ಷಪ್ರತಿಯಂತೆ ಧಾಮಿಕ ಆಚರಣೆ- ಕಹಳೆ ನ್ಯೂಸ್

ಬಂಟ್ವಾಳ: ವರ್ಷಂಪ್ರತಿ ನಡೆಯುವ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾತೀರ್ಥ ಸ್ಥಾನ ದಿನಾಂಕ 2-09-2024 ನೇ ಸೋಮವಾರದಿಂದ ದಿನಾಂಕ 7-09-2024 ನೇ ಶನಿವಾರದ ಭಾದ್ರಪದ ಶುಕ್ಲ ಚೌತಿಯವರಗೆ ಜರಗಲಿದೆ ಎಂದು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತಸರರು ಸಚಿನ್ ರೈ ಮಾಣಿಗುತ್ತು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಣ ಅಮಾವಾಸ್ಯೆಯಂದು ಬಿದಿರಿನ ಕೇರ್ಪು(ಏಣಿ) ಇಡುವ ಸಂಪ್ರದಾಯದ ಬಳಿಕ ಅರಸು ಶ್ರೀ ಗುಡ್ಡೆಚಾಮುಂಡಿ ಮತ್ತು ಪ್ರಧಾನ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಒಳಗೊಂಡAತೆ ಅನೇಕ ವೈದಿಕ ವಿಧಿ ವಿಧಾನ ನಡೆದ ಬಳಿಕ ಭಕ್ತಾದಿಗಳಿಗೆ ತೀರ್ಥ ಸ್ಥಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ತೀರ್ಥ ಸ್ಥಾನಕ್ಕೆ ಬರುವ ಭಕ್ತಾದಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವ ಮೂಲಕ ತೀರ್ಥ ಕ್ಷೇತ್ರದ ಪಾವಿತ್ರ‍್ಯತೆಯನ್ನು ಕಾಪಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು