Recent Posts

Monday, January 20, 2025
ಸುದ್ದಿ

ಉಡುಪು ತಂದ ಫಜೀತಿ: ದೆಹಲಿ ವಕೀಲರ ಸಂಘದಿಂದ ಅಮಿತಾಬ್ ಗೆ ಲೀಗಲ್ ನೋಟಿಸ್ – ಕಹಳೆ ನ್ಯೂಸ್

ದೆಹಲಿ: ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು ವಕೀಲರ ಉಡುಪು ಧರಿಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದಕ್ಕೆ ದೆಹಲಿ ವಕೀಲರ ಸಂಘ ಅವರಿಗೆ ಲೀಗಲ್ ನೋಟಿಸ್ ನೀಡಿದೆ. ಮಸಾಲೆ ಕಂಪನಿಯ ಜಾಹೀರಾತೊಂದಕ್ಕೆ ಸಂಬಂಧಿಸಿದಂತೆ ಬಚ್ಚನ್ ಜತೆಗೆ ಕಂಪೆನಿ, ಯೂಟ್ಯೂಬ್ ಮತ್ತು ಜಾಹೀರಾತು ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆಗಳಿಗೂ ನೋಟಿಸ್ ನೀಡಲಾಗಿದೆ.

ವಕೀಲರ ದಿರಿಸು ಧರಿಸುವ ಮುನ್ನ ಸೂಕ್ತ ಮುನ್ನೆಚ್ಚರಿಕೆಯನ್ನು ಕೈಗೊಂಡಿಲ್ಲ ಎಂದು ಆಕ್ಷೇಪಿಸಲಾಗಿದೆ. ಯಾವುದೇ ಅಧಿಕೃತತೆ ಇಲ್ಲದ ಈ ಜಾಹೀರಾತನ್ನು ಪ್ರಸಾರ ಮಾಡಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣ ಈ ಜಾಹೀರಾತು ಪ್ರಸಾರ ನಿಲ್ಲಿಸಬೇಕು ಹಾಗೂ ಮುಂದೆ ಎಂದೂ ವಕೀಲರ ಉಡುಪನ್ನು ಜಾಹೀರಾತಿನಲ್ಲಿ ಬಳಸುವುದಿಲ್ಲ ಎಂದು ದೆಹಲಿ ವಕೀಲರ ಪರಿಷತ್ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಮುಚ್ಚಳಿಕೆ ನೀಡಬೇಕು” ಎಂದು ಸೂಚಿಸಲಾಗಿದೆ. 10 ದಿನಗಳಲ್ಲಿ ಮುಚ್ಚಳಿಕೆ ನೀಡದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನೋಟಿಸ್ ಎಚ್ಚರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು