Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಚೂರಿ ಇರಿತದ ಸುಳ್ಳು ಕಥೆ ಸೃಷ್ಟಿಸಿ ಕೋಮು ಭಾವನೆ ಸೃಷ್ಟಿಸುವ ಹುನ್ನಾರ ನಡೆಸಿದ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ವಜಾಗೊಳಿಸುವಂತೆ ಆಗ್ರಹ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿ ನಡೆದ ಚೂರಿ ಇರಿತದ ವಿದ್ಯಾರ್ಥಿನಿಯೊರ್ವಳ ಕಟ್ಟು ಕಥೆಯು ಪುತ್ತೂರಿನಲ್ಲಿ ಮೊನ್ನೆಯಿಂದ ಸಂಚಲನ ಸೃಷ್ಟಿಸಿತ್ತು. ವಿದ್ಯಾರ್ಥಿನಿಯ ಈ ಕಟ್ಟು ಕಥೆ ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸುವ ಪೂರ್ವ ನಿಯೋಜಿತ ಕೃತ್ಯ. ಸುಳ್ಳು ದೂರು ನೀಡಿ ಯುವಕನ ಮಾನ ಹಾನಿಗೊಳಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣಲಾದ ವಿಧ್ಯಾರ್ಥಿನಿಯ ಮೇಲೆ ಈ ಕೂಡಲೇ ಕ್ರಮ ಕೈಗೊಂಡು ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ವಜಾಗೊಳಿಸುವಂತೆ ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿ ಸಂಘಟನೆ ಪ್ರಾಶುಂಪಾಲರಿಗೆ ಮತ್ತು ಪುತ್ತೂರು ನಗರ ಪೋಲಿಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಒಂದು ವೇಳೆ ಮನವಿ ತಿರಸ್ಕರಿಸಿ ವಿದ್ಯಾರ್ಥಿನಿಯನ್ನು ವಜಾಗೊಳಿಸದೆ ಇದ್ದರೆ ತೀವ್ರವಾಗಿ ಹೊರಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಜೊತೆಗೆ ಸುಳ್ಳು ಪ್ರಕರಣ ದಾಖಲಿಸಿದ ಸಂತ್ರಸ್ತ ವಿದ್ಯಾರ್ಥಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿದೆ ಅವರ ವಿರುದ್ಧವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು