ಅಸ್ಸಾಂ: ಶಂಕಿತ ಉಲ್ಫಾ ಉಗ್ರರು ಐದು ಮಂದಿಯನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಅಸ್ಸಾಂನ ತೀನುಸುಕಿಯಾ ಜಿಲ್ಲೆಯ ಧೋಲಾ ಖೆರ್ಬಾರಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ.
ಆರು ಮಂದಿ ಶಂಕಿತ ಉಲ್ಫಾ ಉಗ್ರರು ಐವರು ಗ್ರಾಮಸ್ಥರನ್ನು ಸಂಜೆ ಅಪಹರಿಸಿದ್ದರು. ರಾತ್ರಿಯ ವೇಳೆಗೆ ಐದೂ ಮಂದಿಯ ಶವ ಪಕ್ಕದ ಸೇತುವೆ ಬಳಿ ಪತ್ತೆಯಾಗಿದೆ. ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್, ಅಮಾಯಕರ ಹತ್ಯೆ ಘಟನೆಯನ್ನು ಖಂಡಿಸಿದ್ದು, ಸ್ಥಳಕ್ಕೆ ಇಬ್ಬರು ಸಚಿವರನ್ನು ಕಳುಹಿಸಿಕೊಟ್ಟಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ರಾಜ್ಯ ಪೊಲೀಸ್ ಮುಖ್ಯಸ್ಥ ಕುಲಧರ್ ಸೈಕಿಯಾ ಕೂಡಾ ಸ್ಥಳಕ್ಕೆ ಧಾವಿಸಿದ್ದಾರೆ. ಮೃತಪಟ್ಟ ಐದು ಮಂದಿ ಕೂಡಾ ಬೆಂಗಾಲಿ ಸಮುದಾಯದವರು.