Breaking News : ಕನಸ್ಸಿನಲ್ಲಿ ಬರುತ್ತಿದ್ದ ರಾಮ: ಹಿಂದೂ ಧರ್ಮಕ್ಕೆ ಮತಾಂತರವಾಯ್ತು ಮುಸ್ಲಿಂ ಕುಟುಂಬ – ಕಹಳೆ ನ್ಯೂಸ್
ಲಕ್ನೋ: ಕನಸ್ಸಿನಲ್ಲಿ ಪದೇ ಪದೇ ಶ್ರೀರಾಮಚಂದ್ರ ಬರುತ್ತಿದ್ದ ಹಿನ್ನೆಲೆಯಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಉತ್ತರಪ್ರದೇಶ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.
ಶಾಮ್ಲಿ ಜಿಲ್ಲೆಯ ಸದರ್ ಕೋತ್ವಾಲಿಯ ಹರೇಂದ್ರ ನಗರದ ನಿವಾಸಿ ಶಹಜಾದ್ ಕುಂಟುಬ ಬುಧವಾರ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದೆ. ಇದಾದ ನಂತರ ಶ್ರೀರಾಮನ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಹಿಂದೂ ಧರ್ಮಕ್ಕೆ ಬದಲಾದ ಬಳಿಕ ಶಹಜಾದ್ ತಮ್ಮ ಹೆಸರನ್ನು ಸಂಜು ಎಂದು ಮರು ನಾಮಕರಣವನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಜೈ ಶ್ರೀರಾಮ್ ಎನ್ನುವ ಘೋಷಣೆಯನ್ನು ಕೂಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಬಹಳ ದಿನಗಳಿಂದಲೂ ಕನಸ್ಸಿನಲ್ಲಿ ಶ್ರೀರಾಮಚಂದ್ರ ಕಾಣಿಸಿಕೊಳ್ಳುತ್ತಿದ್ದ. ನೀನು ಹಿಂದೂ ಧರ್ಮವನ್ನು ಸ್ವೀಕರಿಸು ಎಂದು ಪ್ರೇರೇಪಿಸುತ್ತಿದ್ದ. ನನ್ನ ಪೂರ್ವಜರು ಕೂಡ ಹಿಂದೂವಾಗಿದ್ದರು. ಆದರೆ ಅವರನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಲಾಗಿತ್ತು. ಹೀಗಾಗಿ ನಾನು ನನ್ನ ಕುಟುಂಬದ ಸಮೇತ ಹಿಂದೂ ಧರ್ಮವನ್ನು ಸ್ವೀಕರಿಸಿಕೊಂಡಿದ್ದೇನೆ. ನನ್ನ ಆರಾಧ್ಯ ದೈವ ಭಗವಾನ್ ಶ್ರೀರಾಮಚಂದ್ರ. ನಾನು ನನ್ನ ಮುಂದಿನ ದಿನಗಳನ್ನು ಹಿಂದೂ ಸಂಪ್ರದಾಯದಂತೆ ಅನುಸರಿಸುತ್ತೇನೆ ಎಂದು ಹೇಳಿದರು.
ಈ ಬಗ್ಗೆ ಶಾಮ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಂಜು ಅಲಿಯಾಸ್ ಶಹಜಾದ್, ನಾನು ನನ್ನ ಸ್ವ-ಇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ. ನನಗೆ ಹಿಂದೂ ಧರ್ಮಕ್ಕೆ ಮರಳಲು ಹಾಗೂ ಹಿಂದೂಗಳಂತೆ ಪೂಜೆ-ಪುನಸ್ಕಾರ ಸಲ್ಲಿಸಲು ಅನುಮತಿ ನೀಡಬೇಕೆಂದು ಕೋರಿಕೊಂಡಿದ್ದಾರೆ.