Recent Posts

Friday, November 22, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವಿದ್ಯಾರ್ಥಿನಿ ಸಹೋದರಿಯರು ರಾಷ್ಟ್ರ ಮಟ್ಟದ ಸ್ಪರ್ಧೆ ಗೆ ಆಯ್ಕೆ-ಕಹಳೆ ನ್ಯೂಸ್

ಬಂಟ್ವಾಳ :ಅ. 22 ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ 14 ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿ ಅನನ್ಯ ಎ.ಆರ್. 6 ನೇ ತರಗತಿ ಶ್ರೀ ರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ಇವಳು 200 ಮೀ ಬಟರ್ ಫ್ಲೈಮತ್ತು 4× 100 ಮೀ. ಫ್ರೀಸ್ಟೈಲ್ ರಿಲೇ ಯಲ್ಲಿ 2 ಬೆಳ್ಳಿ ಮತ್ತು 200 ಮೀ. ಬ್ಯಾಕ್ ಸ್ಟ್ರೋಕ್ ಮತ್ತು 200 ಮೀ. ಇಂಡಿ ವಿಜುವಲ್ ಮೆಡ್ಲೆ ಯಲ್ಲಿ2 ಕಂಚು ಪಡೆದಿರುತ್ತಾಳೆ.

17 ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿ ಅನರ್ಘ್ಯ ಎ.ಆರ್. 9 ನೇ ತರಗತಿ ಶ್ರೀ ರಾಮ ಪ್ರೌಢಶಾಲೆ ಕಲ್ಲಡ್ಕ ಇವಳು 200 ಮೀ ಇಂಡಿ ವಿಜುವಲ್ ಮೆಡ್ಲೆ ,400 ಮೀ. ಇಂಡಿವಿಜುವಲ್ ಮೆಡ್ಲೆ ಮತ್ತು 4 × 100 ಮೀ. ಮೆಡ್ಲೆ ರಿಲೇಯಲ್ಲಿ 3 ಬೆಳ್ಳಿ ಮತ್ತು 200ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ ಸ್ಪೆಕ್ಟರ್ ಬಿ.ಕೆ.ನಾಯ್ಕ್ ಇವರ ಶಿಷ್ಯೆಯರಾಗಿದ್ದು ಮಂಗಳೂರಿನ ಅಲೋಶಿಯಸ್ ವಿವನ್ ಈಜು ಕೊಳದ ಮುಖ್ಯ ತರಬೇತುದಾರ ರಾದ ಲೋಕರಾಜ್ ಮತ್ತು ಸ್ಯಾಂಜುರವರಿಂದ ತರಬೇತಿ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು