Tuesday, April 22, 2025
ಸುದ್ದಿ

ವಾಟ್ಸ್ ಆ್ಯಪ್ ದುರ್ಬಳಕೆ: ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಕೊನೆಗೂ ಸಿಕ್ಕಿದ ಫಲ – ಕಹಳೆ ನ್ಯೂಸ್

ದೆಹಲಿ: ಸುಳ್ಳುಸುದ್ದಿಗಳನ್ನು ಹರಡಿಸಲು ವಾಟ್ಸಪ್ ದುರ್ಬಳಕೆಯಾಗುತ್ತಿರುವ ಬೆನ್ನಲ್ಲಿ, ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳಿಗೆ ಕೊನೆಗೂ ಫಲಸಿಕ್ಕಿದೆ. ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್‌ರನ್ನು ಭೇಟಿಯಾದ ಬಳಿಕ ವಾಟ್ಸಪ್ ಉಪಾಧ್ಯಕ್ಷ ಕ್ರಿಸ್ ಡೇನಿಯಲ್ಸ್, ಭಾರತಕ್ಕಾಗಿಯೇ ಹೊಸ ಮುಖ್ಯಸ್ಥನನ್ನು ನೇಮಿಸುವುದಾಗಿ ಪ್ರಕಟಿಸಿದ್ದಾರೆ.

ರವಿಶಂಕರ್ ಪ್ರಸಾದ್ ಹಾಗೂ ಕ್ರಿಸ್ ಡೇನಿಯಲ್ಸ್ ಸುಳ್ಳುಸುದ್ದಿಗಳು ಹಾಗೂ ಅವುಗಳಿಂದಾಗಿ ಸಂಭವಿಸುತ್ತಿರುವ ಗುಂಪು ಹತ್ಯೆಗಳನ್ನು ತಡೆಯುವ ಬಗ್ಗೆ ಚರ್ಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಾಟ್ಸಪ್ ಮೂಲಕ ಹರಡುವ ಸುಳ್ಳುಸುದ್ದಿಗಳು ಗುಂಪುಹತ್ಯೆಗೆ ಕಾರಣವಾಗುವ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಕಂಪನಿಯು, ಈ ವರ್ಷಾಂತ್ಯದೊಳಗೆ ಭಾರತದ ಕಾರ್ಯನಿರ್ವಹಣೆಗಾಗಿ ಹೊಸ ಮುಖ್ಯಸ್ಥರನ್ನು ನೇಮಿಸುವುದಾಗಿ ಹೇಳಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ