Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಫಿಜ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ ಭಾರತದ ಮೊಟ್ಟಮೊದಲ ಬಾಹ್ಯಾಕಾಶ ದಿನದ ಆಚರಣೆ- ಕಹಳೆ ನ್ಯೂಸ್ 

ಮಂಗಳೂರಿನ ಪ್ರತಿಷ್ಠಿತ ಫಿಜ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ ತಾರೀಕು 23 ಆಗಸ್ಟ್ 2024 ರಂದು ಭಾರತದ ಮೊಟ್ಟ ಮೊದಲ “ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ” (Maiden National Space Day) ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಆಸ್ಟ್ರೋ ಕಿಡ್ಸ್ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಅಗಸ್ಟ್ 25ರವರೆಗೆ ನಡೆಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

“ಆಸ್ಟ್ರೋ ಕಿಡ್ಸ್ ಎಂಬುದು ವಿಶೇಷವಾದ ಪ್ರದರ್ಶನ. ನಮ್ಮ ರಾಷ್ಟ್ರದ ಇಸ್ರೋ ತಯಾರಿಸಿದ , ಗಗನಕ್ಕೆ ಕಳಿಸಿಕೊಟ್ಟ ಬಾಹ್ಯಾಕಾಶ ರಾಕೆಟ್ ಗಳನ್ನು ಮತ್ತು ಸೆಟಲೈಟ್ ಗಳನ್ನು ಸಣ್ಣ ಮಾಡೆಲ್ ಗಳ ರೂಪದಲ್ಲಿ ನಿರ್ಮಿಸಲಾಗಿದ್ದು ಇವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇವುಗಳ ಬಗ್ಗೆ ಮತ್ತು ಬಾಹ್ಯಾಕಾಶ ವೈಜ್ಞಾನಿಕ ವಿಶೇಷಗಳ ಕುರಿತಂತೆ ಮಕ್ಕಳಿಗೆ ಇಲ್ಲಿ ವಿವರಣೆಯನ್ನು ನೀಡಲಾಗುತ್ತದೆ. ಭೂಗೋಳ ಶಾಸ್ತ್ರದ ಕುರಿತಂತೆ ಮಕ್ಕಳಲ್ಲಿ ವಿಶೇಷ ಆಸಕ್ತಿ ತರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಫಿಜ್ಜಾ ಬೈ ನೆಕ್ಸಸ್ ಮಾಲ್ , ಸೆಂಟರ್ ಡೈರೆಕ್ಟರ್ ಅರವಿಂದ ಶ್ರೀವಾಸ್ತವ್ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಇಸ್ರೋ ಡೆಪ್ಯೂಟಿ ಡೈರೆಕ್ಟರ್ ಸತೀಶ್ ಮಿಶ್ರ ” ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಭಾರತದ ಅಂತರಿಕ್ಷ ವಿಜ್ಞಾನವನ್ನು ಮತ್ತಷ್ಟು ಮುಂದೆ ಸಾಗುವಂತೆ ಪ್ರೇರಣೆ ನೀಡಲಿದೆ . ಈ ಅಸ್ಟ್ರೋ ಕಿಡ್ಸ್ ಪ್ರದರ್ಶನ ಹಾಗೂ ಭಾರತದ ಪ್ರಥಮ *ಬಾಹ್ಯಾಕಾಶ ದಿನಾಚರಣೆ* ಹೊಸ ದಿಕ್ಸೂಚಿ ಆಗಲಿದೆ. ಫಿಜ್ಜಾ ಬೈ ನೆಕ್ಸಸ್ ಮಾಲ್ *ಸ್ಪೇಸ್ ಡೇ* ಆಚರಣೆ ಮಾಡುತ್ತಿರುವುದು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ ” ಎಂದರು.

ಅಗಸ್ಟ್ 25 ರವರೆಗೆ ಮಾಲ್ ನ ಮೇಲ್ಮಹಡಿ (UG ಫ್ಲೋರ್) ಯಲ್ಲಿ ನಡೆಯುವ “ಆಸ್ಟ್ರೋ ಕಿಡ್ಸ್ “ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಲಿದೆ. ಈ ಪ್ರದರ್ಶನ ಬೆಳಿಗ್ಗೆ 11 ರಿಂದ ರಾತ್ರಿ 9 ರವರೆಗೆ ಇರಲಿದೆ. ಎಂದು ಮಾಲ್ ನ ಅಸಿಸ್ಟೆಂಟ್ ಜಲ್ ಮ್ಯಾನೇಜರ್ ಸುನಿಲ್ ತಿಳಿಸಿದರು . *ಮಂಗಳೂರಿನಲ್ಲಿ ಈ ಸ್ಪೇಸ್ ಡೇ ಸೆಲೆಬ್ರೇಶನ್ ಒಂದು ವಿಶೇಷವಾಗಿದ್ದು, ರಾಷ್ಟ್ರದಾದ್ಯಂತ ಈ ವರ್ಷ ಪ್ರಪ್ರಥಮ ಆಚರಣೆ ನಡೆದರೆ ಮಂಗಳೂರಿನಲ್ಲಿ ನಡೆದ ಇಂದಿನ ಈ ಕಾರ್ಯಕ್ರಮ ಕಾರ್ಯಕ್ರಮ ಪ್ರಪ್ರಥಮ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ “

ವೇಣು ಶರ್ಮ ಶರ್ಮ

“ಮಂಗಳೂರಿನ ಫಿಜ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ ಜಗತ್ತಿನ ಹೆಸರುವಾಸಿ ಬ್ರಾಂಡ್ ಗಳು ತನ್ನ ಮಳಿಗೆಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ಮಟ್ಟದ ಅನುಭವ ನೀಡುವ ಫಿಜ್ಜಾ ಮಾಲ್ ನಲ್ಲಿ ವಿಶೇಷವಾದ ಫುಡ್ ಕೋರ್ಟ್ ಇದೆ. ಸಿನಿಮಾ ಮನರಂಜನೆ ಇದೆ. ಹೀಗಾಗಿ ಇದು ಜನಾಕರ್ಷಣೆಯ ಕೇಂದ್ರವಾಗಿದೆ” ಎಂದು ಶ್ರೀವಾಸ್ತವ್ ವಿವರಿಸಿದರು.

ಮಾಧ್ಯಮಗೋಷ್ಠಿಯಲ್ಲಿ , ಶ್ರೀನಿಧಿ ರಾವ್ ಅನಿಷಾ ಮತ್ತು ಉಲ್ಲಾಸ್ ಹಾಗೆಯೇ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.