Sunday, January 19, 2025
ಕ್ರೈಮ್ಸುದ್ದಿ

ಕೊಂಡಾಪುರ ಪ್ರೊಫೆಸರ್ಸ್ ಕಾಲೋನಿಯಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ವಿದೇಶಗಳಿಂದ ಹುಡುಗಿಯರನ್ನು ಕರೆಸಿ ವೇಶ್ಯಾವಾಟಿಕೆ ; ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್‌ನಲ್ಲಿ ಮಹಿಳೆಯರ ಸಾಗಾಣಿಕೆ ಹಾಗೂ ವೇಶ್ಯಾವಾಟಿಕೆ – ಕಹಳೆ ನ್ಯೂಸ್

ಹೈದರಾಬಾದ್: ವಿದೇಶಿ ಮಹಿಳೆಯರೊಂದಿಗೆ ವೇಶ್ಯಾವಾಟಿಕೆ ನಡೆಸುತ್ತಿದ್ದ ತಂಡವನ್ನು ತೆಲಂಗಾಣದ ಎಸ್‌ಡಬ್ಲ್ಯೂಒಟಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೊಂಡಾಪುರ ಪ್ರೊಫೆಸರ್ಸ್ ಕಾಲೋನಿಯಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ರಾತ್ರಿ 8 ಗಂಟೆಗೆ ದಾಳಿ ನಡೆಸಿ 17 ಮಹಿಳೆಯರನ್ನು ರಕ್ಷಿಸಿದ್ದಾರೆ.

ಕೀನ್ಯಾದ 14 ಮಹಿಳೆಯರು, ಉಗಾಂಡಾದ ಇಬ್ಬರು ಮತ್ತು ತಾಂಜಾನಿಯಾದ ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಅಪಾರ್ಟ್‌ಮೆಂಟ್‌ನ ಮ್ಯಾನೇಜರ್ ಶಿವಕುಮಾರ್ ಮತ್ತಬ್ಬರನ್ನು ಬಂಧಿಸಲಾಗಿದೆ ಎಂದು ಮಾದಾಪುರ ಎಸಿಪಿ ಶ್ರೀಕಾಂತ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದೇಶದಿಂದ ಅಕ್ರಮವಾಗಿ ಮಹಿಳೆಯರನ್ನು ಕರೆತಂದು ಗ್ರಾಹಕರಿಗಾಗಿ ಆನ್‌ಲೈನ್ ಗ್ರೂಪ್ ಸೃಷ್ಟಿಸಿ ವೇಶ್ಯಾವಾಟಿಕೆಗೆ ಸಕಲ ಸೌಲಭ್ಯ ಕಲ್ಪಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್‌ನಲ್ಲಿ ಮಹಿಳೆಯರ ಸಾಗಾಣಿಕೆ ಹಾಗೂ ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ.

ಆರೋಪಿಯಿಂದ ನಾಲ್ಕು ಸೆಲ್ ಫೋನ್ ಗಳು,20 ಸಾವಿರ ರೂ. ನಗದು, 104 ಕಾಂಡೋಮ್ ಗಳು, ಹುಕ್ಕಾ ಪಾಟ್ ಗಳು, 25 ಎಚ್ ಐವಿ ಕಿಟ್ ಗಳು, 3 ಸೆಕ್ಸ್ ಟಾಯ್ಸ್, ಲ್ಯಾಪ್ ಟಾಪ್ , ಟ್ಯಾಬ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.