Friday, January 24, 2025
ಉಡುಪಿಸುದ್ದಿ

ಮಲ್ಪೆ : ಮೂರು ದಿನಗಳಿಂದ ಬೀಸುತ್ತಿರುವ ಗಾಳಿ- ಕಡಲಿಗೆ ಇಳಿಯದ ಬೋಟುಗಳು- ಕಹಳೆ ನ್ಯೂಸ್

ಮಲ್ಪೆ : ಆಳ ಸಮುದ್ರದಲ್ಲಿ ಮೂರು ದಿನಗಳಿಂದ ಬೀಸುತ್ತಿರುವ ಗಾಳಿ ಮುಂದುವರಿದಿದೆ. ಹಾಗಾಗಿ ಕರಾವಳಿಯಲ್ಲಿ ಯಾವುದೇ ಬೋಟುಗಳು ಮೀನುಗಾರಿಕೆಗೆ ತೆರಳಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣದಿಂದ ಉತ್ತರದ ಕಡೆಗೆ ಬಲವಾದ ಗಾಳಿ ಬೀಸುತ್ತಿದ್ದು, ಗಾಳಿ ಹಾಗೂ ನೀರಿನ ಒತ್ತಡದಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರ್ಸಿನ್‌, ತ್ರಿಸೆವೆಂಟಿ ಸಣ್ಣ ಟ್ರಾಲ್‌ಬೋಟುಗಳು ಆಯಾಯ ಬಂದರುಗಳಲ್ಲಿ ಲಂಗರು ಹಾಕಿವೆ. ಸಮುದ್ರ ಮಧ್ಯೆ ಇದ್ದ ಆಳಸಮುದ್ರ ಬೋಟುಗಳು ಸಮೀಪದ ಬಂದರನ್ನು ಆಶ್ರಯಿಸಿವೆ. ಮಲ್ಪೆ ಬಂದರಿನ ಬಹುತೇಕ ಬೋಟುಗಳು ಕಾರವಾರ ಬಂದರು ಪ್ರವೇಶಿಸಿವೆ.

ಮಂಗಳೂರಿನ ಪರ್ಸಿನ್‌ ಬೋಟುಗಳು ಮಲ್ಪೆ ಬಂದರಿನಲ್ಲಿ ಅಶ್ರಯ ಪಡೆದುಕೊಂಡಿವೆ ಎಂದು ಆಳಸಮುದ್ರ ಮೀನುಗಾರರು ಮಾಹಿತಿ ನೀಡಿದ್ದಾರೆ.