Friday, January 24, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಶಾರದಾ ಯುವಕ ಮಂಡಲ (ರಿ) ಶಾರದಾ ನಗರ, ಸಜೀಪಮುನ್ನೂರು ಇದರ ವತಿಯಿಂದ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ- ಕಹಳೆ ನ್ಯೂಸ್

ಶ್ರೀ ಶಾರದಾ ಯುವಕ ಮಂಡಲ (ರಿ) ಶಾರದಾ ನಗರ, ಸಜೀಪಮುನ್ನೂರು ಇದರ ವತಿಯಿಂದ ವರ್ಷ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆ26 ರಿಂದ ಆ28 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಯುವಕ ಮಂಡಲದ ಆಧ್ಯಕ್ಷ ಪರಮೇಶ್ವರ ಶಾರದಾ ನಗರ ಅವರು ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

1975 ರಲ್ಲಿ ಸದಾನಂದ ಪೂಜಾರಿ ಹಾಗೂ ಗೆಳೆಯರೊಂದಿಗೆ ಸೇರಿಕೊಂಡು ಶಾರದಾ ನಗರದಲ್ಲಿ ಶ್ರೀಕೃಷ್ಣಾಷ್ಟಮಿ ಮೊಸರು ಕುಡಿಕೆಯನ್ನು ಶ್ರೀ ಶಾರದಾ ಕ್ರೀಡಾ ಕೂಟ ಸಂಘದ ವತಿಯಿಂದ ಆಯೋಜನೆ ಮಾಡಿಕೊಂಡು ಬರುತ್ತಿದ್ದರು. ಕೆಲವು ವರ್ಷಗಳ ನಂತರ ಶ್ರೀ ಶಾರದಾ ಯುವಕ ಮಂಡಲ(ರಿ) ಶಾರದಾನಗರ ಎಂದು ಮರುನಾಮಕರಣವಾಗಿ ಇವರ ಆಶ್ರಯದಲ್ಲಿ ಶ್ರೀ ಶಾರದಾ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಶ್ರೀ ಕೃಷ್ಣಾ ಜನ್ಮಾಷ್ಟಮಿಯ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಊರಿನ ಹಾಗೂ ಪರವೂರ ಮತ್ತು ಸಂಘದ ಸದಸ್ಯರ ಸಹಕಾರದೊಂದಿಗೆ ಬಹಳಷ್ಟು ವಿಜೃಂಭನೆಯಿಂದ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿ 50ನೇ ವರ್ಷ ಸುವರ್ಣ ಮಹೋತ್ಸವ ಆಗಿರುವುದರಿಂದ 3 ದಿನಗಳ ಕಾಲ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಆ.26 ನೇ ಸೋಮವಾರ ಬೆಳಿಗ್ಗೆ ಗಣಹೋಮ ಶ್ರೀ ಶಾರದಾಬಿಕಾ ಮಂದಿರದಿಂದ ಶ್ರೀ ಶಾರದಾ ಕ್ರೀಡಾಂಗಣಕ್ಕೆ ಪುಟಾಣಿ ಮಕ್ಕಳ ಶ್ರೀಕೃಷ್ಣ ವೇಷ, ಚೆಂಡೆ, ಗೊಂಬೆ ಕುಣಿತ, ಕಳಸಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿಬರಲಿದೆ. ಬಳಿಕ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ,ಹಾಗೂ ಪ್ರತಿ ದಿನ ಸಮಾರೋಪ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಆ. 27 ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ “ಕೆಸರ್‌ದ ಗೊಬ್ಬು, ಕೆಸರು ಗದ್ದೆಯಲ್ಲಿ ಮುಕ್ತ ವಾಲಿಬಾಲ್ ಹಗ್ಗ ಜಗ್ಗಾಟ, ತ್ರೋಬಾಲ್, ಹಾಗೂ ಇನ್ನಿತರ ಪಂದ್ಯಾಕೂಟ ನಡೆಯಲಿರುವುದು. ಸಂಜೆ ಸ್ಥಳಿಯ ಮಕ್ಕಳಿಂದ ಸಾಂಸ್ಕೃತಿಕ ಸಮಾರಂಭ ಹಾಗೂ ನಮ್ಮ ಕಲಾವಿದೆರ್ ಬೆದ್ರ ತಂಡದ ಉಮೇಶ್ ಮಿಜಾರು ಬಳಗದಿಂದ “ತೆಲಿಕೆದ ಗೊಂಚಿಲ್” ಹಾಸ್ಯಕಾರ್ಯಕ್ರಮ ನಡೆಯಲಿದೆ.

ಆ.28 ರ ಬುಧವಾರ ಸಂಜೆ ಗಂಟೆ 6ಕ್ಕೆ ಸಮಾರೋಪ ಸಮಾರಂಭದಲ್ಲಿ ರಾಜಕೀಯ ಮುಖಂಡರು, ಸಮಾಜಿಕ ಮುಖಂಡರು ಹಾಗೂ ಗಣ್ಯವ್ಯಕ್ತಿಗಳ ಉಪಸ್ಥಿತಿಯಲ್ಲಿ ನಡೆಯಲಿದ್ದು, ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಂತಹ ಮಹಾನಿಯರಿಗೆ ಗೌರವ ಅರ್ಪಣೆ. 2023, 2024 ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ, ಬಹುಮಾನ ವಿತರಣೆ ಹಾಗೂ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ 50ನೇ ವರ್ಷದ ಸುವರ್ಣ ಮಹೋತ್ಸವದ ಲಕ್ಕಿಡಿಪ್ ಡ್ರಾ ಕಾರ್ಯಕ್ರಮ ಅದೇ ವೇದಿಕೆಯಲ್ಲಿ ಮಾಡಲಾಗುವುದು. ರಾತ್ರಿ ಗಂಟೆ 9ಕ್ಕೆ ಚಾಪಕ ಕಲಾವಿದರಿಂದ ವಿಭಿನ್ನ ಶೈಲಿಯ ನಾಟಕ ರಾಜ್ಯ ಪ್ರಶಸ್ತಿ ವಿಜೇತ ಡಾ| ದೇವದಾಸ ಕಾಪಿಕಾಡು ರಚಿಸಿ ನಿರ್ದೇಶಿಸಿರುವ “ಪನಿಯರೆ ಅವಂದಿನ” ನಾಟಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವ ಅಧ್ಯಕ್ಷರಾದ ತಿಮ್ಮಪ್ಪ ಬೆಳ್ಳಾಡ, ಲೆಕ್ಕ ಪರಿಶೋಧಕರಾದ ವಿಜೇಶ್ ಕುಮಾರ್, ಕುಡಾರ್‌ಲಚ್ಚಿಲ್, ಪ್ರಸಾದ್ ಪೂಜಾರಿ ಕುಡಾರ್‌ಲಚ್ಚಿಲ್, ಸದಸ್ಯರಾದ ಶಿವಾನಂದ ಕುಡಾರ್‌ಲಚ್ಚಿಲ್ ಉಪಸ್ಥಿತರಿದ್ದರು.